ಕೇಸರಿಯಲ್ಲಿ (Kesari) ಹಲವಾರು ಆರೋಗ್ಯಕರ ಗುಣಗಳಿವೆ, ಕಬ್ಬಿಣ, ಕ್ಯಾಲ್ಸಿಯಂ (saffron health benefits), ವಿಟಮಿನ್ – ಸಿ, ರಂಜಕದಂತಹ ಪೌಷ್ಟಿಕಾಂಶಗಳು ಇದರಲ್ಲಿದೆ. ಹಿಂದಿನ ಕಾಲದಿಂದಲೂ
ಈ ಕೇಸರಿಯನ್ನು ವಿವಿಧ ರೀತಿಯ ಅಡುಗೆ ಪದಾರ್ಥಗಳಿಗೆ ಉಪಯೋಗಿಸುತ್ತಿದ್ದಾರೆ. ಇದು ರುಚಿ ಅಲ್ಲದೆ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತೆ. ಕೇಸರಿ ಹಾಲನ್ನು ರಾತ್ರಿ ಮಲಗುವ
ಮುನ್ನ ಮಕ್ಕಳಿಗೆ ಕುಡಿಸಿದರೆ ಮಾನಸಿಕ ಆರೋಗ್ಯವನ್ನು (saffron health benefits) ಕಾಪಾಡಿಕೊಳ್ಳಬಹುದು
ಅದರ ಜೊತೆಗೆ ಕ್ಯಾನ್ಸರ್ (Cancer) ಕೋಶಗಳ ವಿರುದ್ಧ ಹೋರಾಡುವಲ್ಲಿ ಸಹಾಯಕಾರಿಯಾಗಿದೆ. ಇವಷ್ಟೇ ಅಲ್ಲದೆ ಕೇಸರಿ ಜೀರ್ಣಕ್ರಿಯೆಯನ್ನು ಸುಧಾರಿಸುವುದರಿಂದ ಹೊಟ್ಟೆಯ ಉರಿಯನ್ನು
ಕಡಿಮೆ ಮಾಡುತ್ತದೆ. ಜೊತೆಗೆ ಇದರಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಇರುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ವೈದ್ಯರ ಸಲಹೆ.
ಪೈಲ್ಸ್ ಸಮಸ್ಯೆಗೆ ಆಯುರ್ವೇದದ ಪರಿಹಾರ: ವೈದ್ಯರು ಹೇಳೋದೇನು ?
ಮಕ್ಕಳು ಕೇಸರಿ ಹಾಲು ಸೇವಿಸುವುದರಿಂದ ಆಗುವ ಪ್ರಯೋಜನಗಳು ಏನು ನೋಡೋಣ ಬನ್ನಿ. ಕೇಸರಿಯು, ಕ್ರೋಕಸ್ (Crocus) ಹೂವಿನ ಕುಸುಮ. ಕೇಸರಿ ಹೂವಿನ ಅಮೂಲ್ಯವಾದ ಭಾಗವಾಗಿದೆ.
ಇದರ ಕೆಂಪು ಬಣ್ಣ ಮತ್ತು ವಿಭಿನ್ನ ಸುವಾಸನೆ ನಾನಾ ಪಾಕಗಳಿಗೆ ಬಳಸಲಾಗುತ್ತೆ. ಕೇಸರಿಯ ಕ್ರೋಸಿನ್ ಮತ್ತು ಸಪ್ರಾನಾಲ್ ಆಂಟಿ ಆಕ್ಸಿಡೆಂಟ್ (Sapranol Anti Oxidant) ಗುಣಗಳನ್ನು
ಹೊಂದಿವೆ. ಹೀಗಾಗಿ ಕೇಸರಿ ಕೆಲವೊಂದು ಆರೋಗ್ಯ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಆರೋಗ್ಯವನ್ನು ಉತ್ತೇಜಿಸುತ್ತದೆ.
ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ.
ಮಕ್ಕಳಲ್ಲಿ ಕಂಡುಬರುವಂತಹ ಇನ್ನೊಂದು ತೊಂದರೆಯೆಂದರೆ ನಿದ್ರಾಹೀನತೆ. ಆಗಾಗ ಮಕ್ಕಳು ಎಚ್ಚರಗೊಳ್ಳುವುದು ಮಧ್ಯರಾತ್ರಿ ಎದ್ದು ಅಳುವುದು ಇಂತಹ ಸಮಸ್ಯೆಗಳಿಗೆ ಕೇಸರಿ ಹಾಲು
ಉತ್ತಮವಾದ ಔಷಧಿ ಅಂತಾನೆ ಹೇಳಬಹುದು. ಇದು ಮನಸ್ಸನ್ನು ಮತ್ತು ನಿದ್ರೆಯನ್ನು ನಿಯಂತ್ರಿಸುತ್ತೆ. ಮಲಗುವ ಮುನ್ನ ಬೆಚ್ಚನೆಯ ಕೇಸರಿ ಹಾಲು ಕುಡಿಯುವುದು ಮನಸ್ಸಿಗೆ ವಿಶ್ರಾಂತಿ ನೀಡುತ್ತೆ
ಮತ್ತು ಮಕ್ಕಳನ್ನು ಶಾಂತಿಯುತ ನಿದ್ರೆಗೆ ಜಾರುವಂತೆ ಮಾಡುತ್ತೆ.
ಮೂಳೆ ಆರೋಗ್ಯ ಮತ್ತು ಮೂಳೆಯ ಬೆಳವಣಿಗೆ ಸಹಕಾರಿ
ಮಕ್ಕಳಿಗೆ ಮೂಳೆಯ ಬೆಳವಣಿಗೆ ಬಾಲ್ಯದಲ್ಲಿ ಅತ್ಯಂತ ಮುಖ್ಯವಾದ ಅಂಶ. ಈ ಸಮಯದಲ್ಲಿ ಮೂಳೆಗೆ ಕ್ಯಾಲ್ಸಿಯಂ (Calcium) ಸೇವನೆಯೂ ಅತ್ಯಗತ್ಯ ವಾಗಿರುತ್ತದೆ. ಕೇಸರಿ ಹಾಲು ಮಗುವಿನ
ಕ್ಯಾಲ್ಸಿಯಂ ಅವಶ್ಯಕತೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಹಾಲಿನ ಕ್ಯಾಲ್ಸಿಯಂ ಮತ್ತು ಈ ಕೇಸರಿಯಲ್ಲಿನ ಮ್ಯಾಗ್ನಿಶಿಯಂ ಮತ್ತು ವಿಟಮಿನ್ ಸಿ (Vitamin-C) ಮೂಳೆಯ ಆರೋಗ್ಯಕರ
ಮತ್ತು ಬೆಳವಣಿಗೆಗೆ ಸಹಕಾರಿಯಾಗಿದೆ.