ಕಬಡ್ಡಿ ಪಟುವನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು!

murder

ಪಂಜಾಬ್‌ನ(Punjab) ಜಲಂಧರ್(Jalandar) ಜಿಲ್ಲೆಯ ಮಲ್ಲಿಯನ್ ಖುರ್ದ್(Malliyan Kurdha) ಗ್ರಾಮದಲ್ಲಿ ಕಬಡ್ಡಿ(Kabbadi) ಪಂದ್ಯಾವಳಿಯ ವೇಳೆ ಪ್ರಮುಖ ಕಬಡ್ಡಿ ಆಟಗಾರರಾದ ಸಂದೀಪ್ ನಂಗಲ್ ಅಂಬಿಯಾ(Sandeep Nangal Ambia) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಸಂದೀಪ್ ಆರಂಭದಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಬಂದಿದ್ದರು ಮತ್ತು ನಾಲ್ಕೈದು ದುಷ್ಕರ್ಮಿಗಳು ಕಾರಿನಲ್ಲಿ ಬಂದಾಗ ಕೆಲವು ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಎಂದು ವರದಿಗಳು ಬಹಿರಂಗಪಡಿಸಿವೆ.

ತದನಂತರ, ಅಭಿಮಾನಿಗಳು ಎಂದು ಸೆಲ್ಫಿ ತೆಗೆಸಿಕೊಳ್ಳುವ ನೆಪದಲ್ಲಿ ಮುಂದಾದವರಲ್ಲಿ ಇಬ್ಬರು ಇತರರನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು ಮತ್ತು ಉಳಿದ ಇಬ್ಬರು ಸಂದೀಪ್ ನಂಗಲ್ ಅವರಿಗೆ ನೇರವಾಗಿ ಗುಂಡಿಟ್ಟು ಕೊಂದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಲ್ಲಿ ಪ್ರಕಟವಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆ ಹಚ್ಚುವಲ್ಲಿ ಮುಂದಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಅದ್ಬುತ ಕಬಡ್ಡಿ ಪಟು ಸಂದೀಪ್ ನಂಗಲ್ ಅವರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ಕೂಡ ಮಾಡಲಾಯಿತು.

ಗುಂಡಿನ ದಾಳಿಯಲ್ಲಿ ಸಂದೀಪ್ ನಂಗಲ್ ಅವರ ದೇಹಕ್ಕೆ ಹೊಕ್ಕಿರುವುದು 20 ಗುಂಡುಗಳು. ಸಂದೀಪ್ ಅವರ ತಲೆ ಮತ್ತು ಎದೆ ಭಾಗಕ್ಕೆ ಬಿದ್ದಿದೆ. ಈ ಘಟನೆ ಸೋಮವಾರ ಮಾರ್ಚ್ 14 ರಂದು ಸಂಜೆ 06 ಗಂಟಗೆ ಸಂಭವಿಸಿದೆ. ಕಬಡ್ಡಿ ಕ್ಲಬ್ ನಲ್ಲಿ ಕೆಲವರೊಡನೆ ಮನಸ್ತಾಪವೇ ಈ ಹತ್ಯೆಗೆ ಕಾರಣವಿರಬಹುದಾ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ ಸ್ಥಳೀಯ ಪೊಲೀಸರು. ಸಂದೀಪ್ ನಂಗಲ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

Exit mobile version