ನಮ್ಮ ಮೆಟ್ರೋ ಕೆಲಸಕ್ಕೆ ಕಾರ್ಮಿಕರ ಅಭಾವ : ನಾನಾ ಸೌಲಭ್ಯ ಕೊಟ್ರೂ ಸಿಗ್ತಿಲ್ಲ ಕೆಲಸಗಾರರು

Bengaluru : ಕೋವಿಡ್-19 (Covid-19) ಬಿಕ್ಕಟ್ಟು ಕಳೆದು 2 ವರ್ಷಗಳೇ ಆದರೂ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಇನ್ನೂ ತಮ್ಮ ಮೆಟ್ರೋ ಯೋಜನೆಗಳಿಗೆ ಕಾರ್ಮಿಕರ ಅಭಾವ ಎದುರಿಸುತ್ತಿದೆ. ಗುತ್ತಿಗೆದಾರರ ಪ್ರಕಾರ, ಕಾರ್ಮಿಕರಿಗೆ ಪ್ರಯಾಣ ವೆಚ್ಚವನ್ನು ಭರಿಸಿದರೂ, ಉತ್ತರ ಭಾರತದ ಕಾರ್ಮಿಕರು (shortage of metro workers) ಈ ಯೋಜನೆಗಳಿಗೆ ಕೆಲಸ ಮಾಡಲು ಬರುತ್ತಿಲ್ಲ. ಮೆಟ್ರೋ’ ಕಟ್ಟುವವರಿಲ್ಲದೆ ಮೆಟ್ರೋ ವ್ಯವಸ್ಥೆಯ ಭವಿಷ್ಯ ಅನಿಶ್ಚಿತವಾಗಿರುವುದು ಸ್ಪಷ್ಟವಾಗಿದೆ.

ರೇಷ್ಮೆ ಕೇಂದ್ರದಿಂದ ಕೆ.ಆರ್.ಪುರ (K.R.Pura) ಮತ್ತು ಕೆ.ಆರ್.ಪುರ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗವನ್ನು 2025ಕ್ಕೆ ಪೂರ್ಣಗೊಳಿಸಲು ಯೋಜಿಸಲಾಗಿದ್ದು, ಆರ್.ವಿ.ರಸ್ತೆ-ಬೊಮ್ಮಸಂದ್ರ (Bommasandra) ಮಾರ್ಗವನ್ನು ವರ್ಷಾಂತ್ಯಕ್ಕೆ ತೆರೆಯಲು ಉದ್ದೇಶಿಸಲಾಗಿದೆ,

ಆದರೆ ಇವೆರಡೂ ಯೋಜನೆಗಳು ಕಾರ್ಮಿಕರ ಕೊರತೆ ಎದುರಿಸುತ್ತಿವೆ. ಕಾರ್ಮಿಕರು ಸಮಯಕ್ಕೆ ಸರಿಯಾಗಿ ಲಭ್ಯವಿಲ್ಲದಿದ್ದರೆ

ಯೋಜನೆಗಳು ವಿಳಂಬವಾಗಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ನಗರದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಗೆ ಕನಿಷ್ಠ 300 ಬಡಗಿಗಳು, 400 ಬಾರ್ ಬೆಂಡರ್‌ಗಳು (Bar Bender) ಮತ್ತು 200 ಮೇಸ್ತ್ರಿಗಳು ಬೇಕಾಗಿದ್ದಾರೆ.

ಆದರೆ ಪ್ರಸ್ತುತ ನುರಿತ ಕಾರ್ಮಿಕರ ಕೊರತೆಯಿದೆ. ಈ ಕಾರ್ಮಿಕರ ಕೊರತೆಯಿಂದ ಗುತ್ತಿಗೆ ಕಂಪನಿಯಾದ ಎನ್ ಸಿಸಿ ಸೇರಿದಂತೆ ಇತರೆ ಕಂಪನಿಗಳಿಗೆ (shortage of metro workers) ತೊಂದರೆಯಾಗುತ್ತಿದೆ.

ಕಾರ್ಮಿಕರ ಕೊರತೆಯಿಂದ ಯು-ಗರ್ಡರ್, ಪೈಲ್‌ ಕ್ಯಾಪ್‌(Pile Cap) , ಪಿಯರ್‌ ಕ್ಯಾಪ್‌ಗಳು ಸ್ಟೀಲ್ ಫ್ರೇಮ್‌ಗಳನ್ನು ನಿರ್ಮಿಸಲು ಕಾರ್ಮಿಕರೆ ಇಲ್ಲದ ಪರಿಸ್ಥಿತಿಯಿದೆ.

ಪ್ರಯಾಣ ವೆಚ್ಚ ಭರಿಸಿದರೂ ಬರುತ್ತಿಲ್ಲ :

ಕೋವಿಡ್‌ಗೂ ಮುನ್ನ ಕಾರ್ಮಿಕರು ತಾವಾಗಿಯೇ ಕೆಲಸಕ್ಕೆ ಬರುತ್ತಿದ್ದರು. ಆದರೆ, ಈಗ ಉತ್ತರ ಭಾರತದ ಕೆಲವೆಡೆ ಮೆಟ್ರೋ (Metro) ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಿಗೆ ಹೋಗುತ್ತಿದ್ದಾರೆ.

ಕಾರ್ಮಿಕರಿಗೆ ರೈಲು ಪ್ರಯಾಣ ದರ ನೀಡಲು ಗುತ್ತಿಗೆದಾರರು ಸಿದ್ಧರಿದ್ದರೂ ಕಾರ್ಮಿಕರು ಇತ್ತ ಸುಳಿಯುತ್ತಿಲ್ಲ ಎನ್ನಲಾಗಿದೆ.

ಇನ್ನೆರಡು ತಿಂಗಳೊಳಗೆ ಜಾರ್ಖಂಡ್, ಒಡಿಶಾ (Odisha) , ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ಕಾರ್ಮಿಕರು ಬಂದರೆ ಕೆಲಸ ಸುಗಮವಾಗಲಿದೆ. ಇಲ್ಲದಿದ್ದರೆ, ಎಲ್ಲಾ ಕಾಮಗಾರಿಗಳು ಕುಂಠಿತವಾಗುವ ಎಲ್ಲ ಲಕ್ಷಣಗಳಿವೆ.

ಚಲ್ಲಘಟ್ಟಡಿಪೋ ಸಮಸ್ಯೆಗಳಿಗೆ ಪರಿಹಾರ:

ಚಲ್ಲಘಟ್ಟ (Challaghat) ಡಿಪೋ ನ ನಿರ್ಮಾಣಕ್ಕಾಗಿ ಬಿಎಂಆರ್‌ಸಿಎಲ್ ಎದುರಿಸಿದ್ದ ಎರಡು ಭೂಸ್ವಾಧೀನ ಪ್ರಕರಣಗಳ ಸಮಸ್ಯೆ ಬಗೆಹರಿದಿದೆ. ನಗರದ ಹೊರವಲಯವನ್ನು ಸಂಪರ್ಕಿಸುವ ಮೆಟ್ರೋ ಮಾರ್ಗದಲ್ಲಿ ನಿಲ್ದಾಣವು ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಸ್ತುತ, ಪರ್ಪಲ್ ಲೈನ್ ರೈಲುಗಳು ಬೈಯಪ್ಪನಹಳ್ಳಿ (Baiyappanahalli) ಮೆಟ್ರೋ ಡಿಪೋದಲ್ಲಿ ನಿಲ್ಲುತ್ತವೆ.

ಚಲ್ಲಘಟ್ಟ ಡಿಪೋ ಪೂರ್ಣಗೊಂಡರೆ ಬಹುತೇಕ ರೈಲುಗಳು ಇಲ್ಲಿಗೆ ವರ್ಗಾವಣೆಯಾಗಲಿವೆ. ನಗರದ ಹೊರ ವರ್ತುಲ ರಸ್ತೆ ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗದ ರೈಲುಗಳು ಇಲ್ಲಿಂದ ಹೊರಡಲಿವೆ.

ಪ್ರಸ್ತುತ, 4.9941 ಬಿಲಿಯನ್ ಡಿಪೋಗಳು ಮತ್ತು ಕಾರ್ಯಾಗಾರಗಳನ್ನು ನಿರ್ಮಿಸಲಾಗಿದೆ.

ಬಿಎಂಆರ್‌ಸಿಎಲ್‌ (BMRCL) 45 ಎಕರೆಯನ್ನು ಒಟ್ಟಾರೆ ಇಲ್ಲಿ ಭೂಸ್ವಾದೀನ ಮಾಡಿದೆ.ಇತ್ತೀಚೆಗೆ ಬಿಎಂಆರ್‌ಸಿಲ್‌ 1,612 ಚದರ ಮೀಟರ್‌ ನೈಋುತ್ಯ ರೈಲ್ವೇ ಇಲಾಖೆ ಒಡೆತನದ ಭೂಸ್ವಾದೀನ ಮಾಡಿಕೊಳ್ಳಲು ಮುಂದಾಗಿತ್ತು.

ಆದರೆ 960 ಚ.ಮೀ. ಜಾಗವನ್ನು ತೆಗೆದುಕೊಳ್ಳಲು ರೈಲ್ವೇ ಇಲಾಖೆ ಹೇಳಿತ್ತು.ಇದಕ್ಕೆ ಸಂಸ್ಥೆಯು ಆರಂಭದಲ್ಲಿ ಇದಕ್ಕೆ ಒಪ್ಪಿರಲಿಲ್ಲ.ಇದೀಗ ಈ ಸಮಸ್ಯೆ ಪರಿಹಾರವಾಗಿದೆ.

ರಶ್ಮಿತಾ ಅನೀಶ್

Exit mobile version