ಶ್ರದ್ಧಾ ಹತ್ಯೆ ಪ್ರಕರಣದಲ್ಲಿ 3000 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದ ಪೊಲೀಸ್

New Delhi : ಶ್ರದ್ಧಾ ವಾಲ್ಕರ್(Shraddha Walker) ಹತ್ಯೆ ಪ್ರಕರಣದಲ್ಲಿ 3000 ಪುಟಗಳ ಕರಡು ಚಾರ್ಜ್‌ಶೀಟ್ ಅನ್ನು ದೆಹಲಿ(Delhi) ಪೊಲೀಸರು ಸಿದ್ಧಪಡಿಸಿದ್ದು, ಇತ್ತೀಚಿನ ಪ್ರಕಟಣೆಯಲ್ಲಿ (Shraddha murder charge sheet) ಈ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ದೆಹಲಿ ಪೊಲೀಸರು ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕರಡು ಚಾರ್ಜ್‌ಶೀಟ್ ಅನ್ನು 100 ಸಾಕ್ಷ್ಯಗಳೊಂದಿಗೆ ವಿಧಿವಿಜ್ಞಾನ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಜೊತೆಗೆ ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗಿದೆ.

ಆರೋಪ ಪಟ್ಟಿಯ ಕರಡನ್ನು ಅಧಿಕಾರಿಗಳು ಸಿದ್ಧಪಡಿಸಿದ್ದು, ಈ ಕುರಿತು ಕಾನೂನು ತಜ್ಞರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.

3,000 ಪುಟಗಳ ಕರಡು ಚಾರ್ಜ್‌ಶೀಟ್ ಜೊತೆಗೆ ಫೋರೆನ್ಸಿಕ್ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಜೊತೆಗೆ 100 ಸಾಕ್ಷ್ಯಗಳೊಂದಿಗೆ

ಅಂತಿಮ (Shraddha murder charge sheet) ಆರೋಪ ಪಟ್ಟಿಯ ತಿರುಳನ್ನು ರೂಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಶ್ರದ್ಧಾ ವಾಲ್ಕರ್ ಅವರ ಹತ್ಯೆ ಪ್ರಕರಣ ಮತ್ತೊಂದು ಬಲವಾದ ತಿರುವನ್ನು ಪಡೆದುಕೊಂಡಿದೆ.

ಅಫ್ತಾಬ್ ಪೂನಾವಾಲಾ(Aftab Poonawala) ಕಳೆದ ವರ್ಷ ಮೇ ತಿಂಗಳಲ್ಲಿ ದಕ್ಷಿಣ ದೆಹಲಿಯ

ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ತನ್ನ ಲಿವ್-ಇನ್ ರಿಲೇಷನ್(Live in relationship) ಶಿಪ್ ಗೆಳತಿ ಶ್ರದ್ಧಾಳ ಕತ್ತು ಹಿಸುಕಿ ಹತ್ಯೆಗೈದು,

ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ನಗರದ ನಿರ್ಜನ ಪ್ರದೇಶದಲ್ಲಿ ಎಸೆದಿದ್ದು ಎಂದು ಆರೋಪಿಸಲಾಗಿತ್ತು.

ಛತ್ತರ್‌ಪುರದ ಅರಣ್ಯದಿಂದ ಪತ್ತೆಯಾದ ಮೂಳೆಗಳು ಮತ್ತು ಡಿಎನ್‌ಎ(DNA) ವರದಿಯು ಶ್ರದ್ಧಾ ವಾಕರ್‌ಗೆ ಸೇರಿದ ಮೂಳೆಗಳು ಎಂದು ದೃಢಪಡಿಸಿದ ಚಾರ್ಜ್‌ಶೀಟ್‌ನ ಭಾಗವಾಗಿದೆ.

ಎರಡು ಡಿಎನ್‌ಎ ವರದಿಗಳು ದಕ್ಷಿಣ ದೆಹಲಿಯ ಅರಣ್ಯದಿಂದ ಪಡೆದ ಮೂಳೆಗಳು ಶ್ರದ್ಧಾ ವಾಕರ್‌ಗೆ ಸೇರಿದ್ದು ಎಂದು ದೃಢಪಡಿಸಿತ್ತು!

ಇದರ ಜೊತೆಗೆ ಗೆಳತಿ ಶ್ರದ್ಧಾ ಅವರನ್ನು ಹತ್ಯೆಗೈದ ಗೆಳಯ ಅಫ್ತಾಬ್ ಪೂನಾವಾಲಾ ತಪ್ಪೊಪ್ಪಿಗೆ ಮತ್ತು ನಾರ್ಕೋ(Narco) ಪರೀಕ್ಷೆಯ ವರದಿಯನ್ನು ಸಹ ದಾಖಲಿಸಿಕೊಳ್ಳಲಾಗಿದೆ.

ಆದ್ರೆ, ಈ ಎರಡೂ ವರದಿಗಳು ನ್ಯಾಯಾಲಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿಲ್ಲ! ಪ್ರಾಸಿಕ್ಯೂಷನ್ ದೃಷ್ಟಿಕೋನದಿಂದ ಹೇಳುವುದಾದರೆ,

ಅಫ್ತಾಬ್ ಪೂನಾವಾಲಾ ಪೊಲೀಸರಿಗೆ ತಪ್ಪೊಪ್ಪಿಗೆಯು ಅಪರಾಧ ನಿರ್ಣಯಕ್ಕೆ ಸಾಕಾಗುವುದಿಲ್ಲ.

ಕಳೆದ ವರ್ಷ ನವೆಂಬರ್ 12 ರಂದು ದೆಹಲಿ ಪೊಲೀಸರು ಅಫ್ತಾಬ್‌ನನ್ನು ಬಂಧಿಸಿದ ನಂತರ ಶ್ರದ್ಧಾ ಅವರ ಹತ್ಯೆಯ ಬಗ್ಗೆ ಭಯಾನಕ ವಿವರಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ.

ಇದನ್ನೂ ಓದಿ: ಶಾಕಿಂಗ್‌ ನ್ಯೂಸ್‌ , ಗೂಗಲ್‌ನಿಂದ 12,000, ಮೈಕ್ರೋಸಾಫ್ಟ್‌ನಿಂದ 10,000 ಈಗ ವಿಪ್ರೋದಿಂದ 452 ಫ್ರೆಶರ್‌ ಉದ್ಯೋಗಿಗಳ ವಜಾ

ಶ್ರದ್ಧಾ ವಾಕರ್ ಅವರ ಅಸ್ಥಿಗಳ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ದೇಹವನ್ನು ಗರಗಸದಂತಹ ವಸ್ತುವಿನಿಂದ 35 ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ತಿಳಿದುಬಂದಿದೆ.

ದಕ್ಷಿಣ ದೆಹಲಿಯ ಕಾಡುಗಳಿಂದ 13 ಕೊಳೆತ ದೇಹದ ಭಾಗಗಳನ್ನು,

ಹೆಚ್ಚಾಗಿ ಮೂಳೆಗಳ ತುಂಡುಗಳನ್ನು ವಶಪಡಿಸಿಕೊಂಡಾಗ ಈ ಪ್ರಕರಣಕ್ಕೆ ಪುಷ್ಠಿ ದೊರಕಿತು.

ಎರಡು ತಿಂಗಳಾದರೂ ಶ್ರದ್ದಾ ಅವರಿಂದ ಒಂದು ಕರೆ ಅಥವಾ ಯಾವ ಸುದ್ದಿಯೂ ಕೇಳಿಲ್ಲ ಎಂದು ಸ್ನೇಹಿತರೊಬ್ಬರು ಶ್ರದ್ಧಾ ಅವರ ತಂದೆ ವಿಕಾಸ್ ಮದನ್ ವಾಲ್ಕರ್ ಅವರಿಗೆ ತಿಳಿಸಿದಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಅಫ್ತಾಬ್ ಅವರು ಶ್ರದ್ಧಾ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು(Social media accounts) ತಿಂಗಳುಗಟ್ಟಲೆ ಬಳಸಿದ್ದಾನೆ ಮತ್ತು ಆಕೆ ಜೀವಂತವಾಗಿದ್ದಾರೆ ಎಂಬ ನಂಬಿಕೆ ಉಳಿಯುವಂತೆ ಮಾಡಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version