ಕೇಂದ್ರದ ನೆರವಿನ ಕೊರತೆಯಿಂದ ಕುಂಟುತ್ತಿದೆ ಎತ್ತಿನಹೊಳೆ ಯೋಜನೆ: ಇದು ನರೇಂದ್ರ ಮೋದಿ ಆಶೀರ್ವಾದವೇ? ಶಾಪವೇ? ಜೆ.ಪಿ ನಡ್ಡಾಗೆ ಸಿದ್ದರಾಮಯ್ಯ ಪ್ರಶ್ನೆ

Bengaluru : ಕೇಂದ್ರ ಸರ್ಕಾರದ ನೆರವಿನ ಕೊರತೆಯಿಂದ ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿರುವುದು ನರೇಂದ್ರ ಮೋದಿ (Narendra Modi) ಆಶೀರ್ವಾದವೇ? ಶಾಪವೇ? ಹೇಳಿ ಜೆ.ಪಿ ನಡ್ಡಾ ಅವರೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (Siddaramaiah slams JP Nadda) ಅವರಿಗೆ ನೇರ ಪ್ರಶ್ನೆಯನ್ನು ಕೇಳಿದ್ದಾರೆ.

ಕಳೆದ ಬುಧವಾರ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ತಮ್ಮ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J.P.Nadda) ಅವರು ಆಗಮಿಸಿ,

ನೆರದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ, ಮೋದಿ ಅವರ ಆಶೀರ್ವಾದವನ್ನು ಕಳೆದುಕೊಳ್ಳಬೇಡಿ ಎಂದು ನೀಡಿದ ಹೇಳಿಕೆ ನೀಡಿದ್ದರು.

ಈ ಹೇಳಿಕೆಯನ್ನು ಟೀಕಿಸಿದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಡ್ಡಾ ಅವರಿಗೆ ಪ್ರಶ್ನೆಗಳ ಸುರಿಮಳೆ ಸುರಿದಿದ್ದಾರೆ.


ರಾಜ್ಯವು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಆಶೀರ್ವಾದದಿಂದ ವಂಚಿತರಾಗಬಾರದು ಎಂಬ ಜೆ.ಪಿ ನಡ್ಡಾ ಹೇಳಿಕೆಗೆ ಪ್ರತಿ ಪ್ರಶ್ನೆ ಕೇಳಿದ ಸಿದ್ದರಾಮಯ್ಯ,

ಯಾವುದು ಮೋದಿ ಆಶೀರ್ವಾದ? ಯಾವುದು ಶಾಪ? ಎಂಬ ಪ್ರಶ್ನೆಗಳನ್ನು ಹಲವು ನಿದರ್ಶನಗಳ ಮುಖೇನ ಕೇಳಿದ್ದಾರೆ.


ಮಾನ್ಯ ಜೆ.ಪಿ ನಡ್ಡಾ (J.P.Nadda) ಅವರೇ,


ತೆರಿಗೆ ಹಂಚಿಕೆಯ ತಾರತಮ್ಯ ನೀತಿಯಲ್ಲಿ ಕರ್ನಾಟಕ (Karnataka) ಅಂದಾಜು ಒಂದು ಲಕ್ಷ ಕೋಟಿ ರೂಪಾಯಿ ಕಳೆದುಕೊಂಡದ್ದು,

ಕನ್ನಡಿಗರು ಕೇಂದ್ರಕ್ಕೆ ನೀಡುವ ಪ್ರತಿ ಒಂದು ರೂಪಾಯಿ ತೆರಿಗೆಯಲ್ಲಿ ಹದಿನೈದು ಪೈಸೆ ಮಾತ್ರ ವಾಪಸು ನೀಡುವುದು, ಇದು ನರೇಂದ್ರ ಮೋದಿ (Siddaramaiah slams JP Nadda) ಅವರ ಆಶೀರ್ವಾದವೇ? ಶಾಪವೇ?


ಕೇಂದ್ರ ಬಿಜೆಪಿ ಸರ್ಕಾರದ ಅನುದಾನ ಕಡಿತದಿಂದಾಗಿ ರಾಜ್ಯ ಬಿಜೆಪಿ (BJP) ಸರ್ಕಾರ ಮಾಡಿಕೊಂಡ ಸಾಲ ರೂ.2.40 ಲಕ್ಷ ಕೋಟಿಗಳಿಂದ

ರೂ.5.60 ಲಕ್ಷ ಕೋಟಿಗೆ ಏರಿಕೆಯಾಗಿದ್ದು ಮತ್ತು ಪ್ರತಿಯೊಬ್ಬ ಕನ್ನಡಿಗನ ತಲೆಮೇಲೆ 86,000 ರೂ. ಸಾಲದ ಹೊರೆ ಬಿದ್ದಿರುವುದು ನರೇಂದ್ರ ಮೋದಿ ಅವರ ಆಶೀರ್ವಾದವೇ? ಶಾಪವೇ ಜೆ.ಪಿ ನಡ್ಡಾ?


2019ರಲ್ಲಿ ನೆರೆ ಹಾವಳಿ ನಷ್ಟಕ್ಕೆ 35,000 ಕೋಟಿ ರೂ. ಪರಿಹಾರ ಕೇಳಿದ್ದರೂ, ಕೇವಲ 1,869 ಕೋಟಿ ರೂ. ಹಣ ಮಾತ್ರ ಕೇಂದ್ರ ಬಿಜೆಪಿ ಸರ್ಕಾರ ಕೊಟ್ಟಿದ್ದು,

2020 ಮತ್ತು 2021 ರಲ್ಲಿಯೂ ಇದೇ ಅನ್ಯಾಯ ಮುಂದುವರಿಸಿದ್ದು ನರೇಂದ್ರ ಮೋದಿ ಆಶೀರ್ವಾದವೇ? ಶಾಪವೇ ಜೆ.ಪಿ ನಡ್ಡಾ?


ಕನ್ನಡಿಗರು ಕಟ್ಟಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಮತ್ತು ವಿಜಯಬ್ಯಾಂಕ್ ಗಳನ್ನು ನುಂಗಿ ಹಾಕಿದ್ದು,

ಕನ್ನಡಿಗರ ಹೆಮ್ಮೆಯ ‘ನಂದಿನಿ’(Nandini) ಅನ್ನು ಗುಜರಾತ್ ಮೂಲದ ‘ಅಮುಲ್’ (Amul) ಆಪೋಶನ ತೆಗೆದುಕೊಳ್ಳಲು

ಹೊರಟಿರುವುದು ನರೇಂದ್ರ ಮೋದಿ ಆಶೀರ್ವಾದವೇ? ಶಾಪವೇ ಜೆ.ಪಿ ನಡ್ಡಾ?


ಐಬಿಪಿಎಸ್ (IBPS) ಮತ್ತು ಎಲ್ಐಸಿ (LIC) ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲಿಕ್ಕೆ ಅವಕಾಶ ನೀಡದೆ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಿ ಕನ್ನಡಿಗ

ಯುವಜನರ ಹೊಟ್ಟೆಗೆ ಹೊಡೆದದ್ದು ನರೇಂದ್ರ ಮೋದಿ ಆಶೀರ್ವಾದವೇ? ಶಾಪವೇ ಜೆ.ಪಿ ನಡ್ಡಾ?


ಕರ್ನಾಟಕದ (Karnataka) ಗಡಿಪ್ರದೇಶವನ್ನು ಆಕ್ರಮಿಸುವ ದುರುದ್ದೇಶದಿಂದ ಮಹಾರಾಷ್ಟ್ರದ

ಬಿಜೆಪಿ ಬೆಂಬಲಿತ ಸರ್ಕಾರ ಅಲ್ಲಿನ 865 ಹಳ್ಳಿಗಳಲ್ಲಿ ಆರೋಗ್ಯ ಯೋಜನೆಯನ್ನು

ಜಾರಿಗೊಳಿಸಲು ಹೊರಟಿರುವುದು ನರೇಂದ್ರ ಮೋದಿ ಆಶೀರ್ವಾದವೇ? ಶಾಪವೇ ಜೆ.ಪಿ ನಡ್ಡಾ?


ಮಹದಾಹಿ (Mahadahi) ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲು ವಿಳಂಬ ಮಾಡಿದ್ದು, ಮೇಕೆದಾಟು (Mekedatu) ಯೋಜನೆಗೆ ಅನುಮತಿ ನೀಡಲು ವಿಫಲವಾಗಿದ್ದು,

ಕೇಂದ್ರ ಸರ್ಕಾರದ ನೆರವಿನ ಕೊರತೆಯಿಂದ ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿರುವುದು ನರೇಂದ್ರ ಮೋದಿ ಆಶೀರ್ವಾದವೇ? ಶಾಪವೇ ಜೆ.ಪಿ ನಡ್ಡಾ?


ರಾಜ್ಯ ಬಿಜೆಪಿ ನಾಯಕರು 40% ಕಮಿಷನ್ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಅಂದಾಜು ಒಂದುವರೆ ಲಕ್ಷ ಕೋಟಿ ರೂಪಾಯಿಗಳನ್ನು

ನುಂಗಿ ಹಾಕಿರುವುದು ನರೇಂದ್ರ ಮೋದಿ (Narendra Modi) ಆಶೀರ್ವಾದವೇ? ಶಾಪವೇ ಜೆ.ಪಿ ನಡ್ಡಾ?

ಎಂದು ಸರಣಿ ಪ್ರಶ್ನೆಗಳನ್ನು ಕೇಳುವ ಮೂಲಕ ಜೆ.ಪಿ ನಡ್ಡಾ ಹಾಗೂ ರಾಜ್ಯ ಬಿಜೆಪಿ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Exit mobile version