Bengaluru : ಕರ್ನಾಟಕದಲ್ಲಿ ಕಾಂಗ್ರೆಸ್ ಮ್ಯಾಜಿಕ್ ನಂಬರ್ ಮೀರಿಸಿ ಬಹುಮತ ಸಾಧಿಸಿದೆ. ಸದ್ಯ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (D.K.Shivakumar) ನಡುವೆ ಪೈಪೋಟಿ ನಡೆಯುತ್ತಿದೆ.

ಈಗಾಗಲೇ ಇಬ್ಬರ ಮುಂದೆಯೂ ಹೈಕಮಾಂಡ್ (High Command) 50:50 ಫಾರ್ಮುಲಾ ಇರಿಸಿತ್ತಂತೆ. ಇದರ ಪ್ರಕಾರ ಇಬ್ಬರೂ ನಾಯಕರಿಗೆ ಅಧಿಕಾರವನ್ನು ಸಮಾನವಾಗಿ ಹಂಚಿಕೆ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿಕೊಂಡಿತ್ತು ಎನ್ನಲಾಗಿದೆ.
ಆದರೆ ಸಿದ್ದರಾಮಯ್ಯಮತ್ತು ಡಿಕೆ ಶಿವಕುಮಾರ್ ಇಬ್ಬರೂ ಈ 50:50 ಫಾರ್ಮುಲಾ ಒಪ್ಪಿಕೊಂಡಿಲ್ಲ ಈ ಹಿನ್ನೆಲೆಯಲ್ಲಿ ಇದೀಗ ಹೈಕಮಾಂಡ್ ಮತ್ತೊಂದು ಆಯ್ಕೆಯನ್ನು ಇರಿಸಿದೆ ಎನ್ನಲಾಗಿದೆ.
ಕಾಂಗ್ರೆಸ್ ವಕ್ತಾರ ಪವನ್ ಖೇರಾ (Pavan Khera) ,ಈ ಕುರಿತು ಮಾತನಾಡಿ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಸಿಎಂ ಸ್ಥಾನ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಚರ್ಚೆ ಆಗ್ತಿದೆ. ಅಧ್ಯಕ್ಷರು ಶೀಘ್ರದಲ್ಲಿಯೇ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳನ್ನು ನೇಮಕ ಮಾಡುವುದು ಎಂದರೆ ಅಷ್ಟೊಂದು ಸುಲಭವಲ್ಲ. ಯಾರು ಸಿಎಂ ಆಗಬೇಕು ಎಂದು ಪ್ರತಿಯೊಬ್ಬರ ನಿರ್ಧಾರವನ್ನು ತೆಗೆದುಕೊಂಡು ನಿರ್ಧರಿಸಲಾಗುತ್ತದೆ ಎಂದು ಪವನ್ ಖೇರಾ(Pavan Khera) ಹೇಳಿದ್ದಾರೆ.
ಇದೀಗ ಇಬ್ಬರ ಮುಂದೆ ಕಾಂಗ್ರೆಸ್ ಹೈಕಮಾಂಡ್ 2:3 ಸೂತ್ರವನ್ನು ಇರಿಸಿದೆಯಂತೆ. ಮೊದಲೆರಡು ವರ್ಷ ಸಿದ್ದರಾಮಯ್ಯ ಆಳ್ವಿಕೆ ನಡೆಸಬೇಕು , ನಂತರದ ಮೂರು ವರ್ಷ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ನೀಡಬೇಕೆಂದು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಆದರೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಈ ಸೂತ್ರವನ್ನು ಒಪ್ಪಿಕೊಳ್ತಾರಾ ಇಲ್ಲವಾ ಅನ್ನೋದನ್ನು ಇದೀಗ ಕಾದು ನೋಡಬೇಕಿದೆ.

ನಿನ್ನೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೊಂದಿಗೆ ರಾಹುಲ್ ಗಾಂಧಿ (Rahul Gandhi) ಒಂದು ಗಂಟೆ ಚರ್ಚೆ ನಡೆಸಿದರು. ಈ ಸಭೆಯಲ್ಲಿ ವೀಕ್ಷಕರು ಸಲ್ಲಿಸಿದ ವರದಿಯ ವಿವರಗಳನ್ನು ಪಡೆಯಲಾಯಿತು. ಸಿದ್ದರಾಮಯ್ಯ ಮತ್ತು ಡಿಕೆಶಿ ಏನು ಯೋಚಿಸುತ್ತಿದ್ದಾರೆ ಎಂಬುದು ತಿಳಿದಿಲ್ಲ, ಆದರೆ ಹೆಚ್ಚಿನ ಮಾತುಕತೆಗಾಗಿ ಅವರನ್ನು ಪ್ರತ್ಯೇಕವಾಗಿ ಸಂಪರ್ಕಿಸಲು ಶಿಫಾರಸು ಮಾಡಲಾಗಿದೆ.
ಮತ್ತೊಂದೆಡೆ, ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಭೇಟಿ ಮಾಡಿ ಉತ್ತಮ ಮೂಡ್‌ನಲ್ಲಿರುವ ಸಿದ್ದರಾಮಯ್ಯ ಬೆಂಬಲಿಗರು ಇಂದು ಮುಖ್ಯಮಂತ್ರಿ ವಿಚಾರ ಘೋಷಣೆಯಾಗುವ ವಿಶ್ವಾಸದಲ್ಲಿದ್ದಾರೆ. ರಾಹುಲ್ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳಲಿರುವ ಮೂರು ಡಿಸಿಎಂ ಸ್ಥಾನಗಳಿಗೂ ಸಿದ್ದರಾಮಯ್ಯ ಬೆಂಬಲಿಗರಾಗಿದ್ದಾರೆ.
ಒಟ್ಟಿನಲ್ಲಿ ಸಿಎಂ ಕುರ್ಚಿಗೆ ಕಳೆದ ಮೂರು ದಿನಗಳಿಂದ ಕಿತ್ತಾಟ ನಡೆಯುತ್ತಿದ್ದು ಈಗ ಕ್ಲೈಮ್ಯಾಕ್ಸ್(Climax) ಹಂತಕ್ಕೆ ಬಂದಿದೆ.ಇಂದು ಇಬ್ಬರು ನಾಯಕರನ್ನು ಕೂಡಿಸಿಕೊಂಡು ಫೈನಲ್ ಮಾಡಲಿದ್ದಾರೆ
ರಶ್ಮಿತಾ ಅನೀಶ್