ಸಾಮಾಜಿಕ ಜಾಲತಾಣಕ್ಕಿರುವ ಶಕ್ತಿ ಏನು ಎಂಬುದು ‘ಈ ಇಬ್ಬರು’ ವ್ಯಕ್ತಿಗಳಿಂದ ಮತ್ತೊಮ್ಮೆ ಸಾಭೀತಾಗಿದೆ!

ವಿಭಿನ್ನ ನಡಿಗೆಯಿಂದಲೇ ಲಕ್ಷಾಂತರ ಮನ ಗೆದ್ದ ಸಾಮನ್ಯ ಮನುಷ್ಯ ಈ ಮಮ್ಮಿಕ್ಕ! ಸ್ನೇಹಿತರೆ ಅದೃಷ್ಟ ಅನ್ನೋದು ಯಾವಾಗ ಯಾರನ್ನ ಬೇಕಾದರು ಸೆಲೆಬ್ರಿಟಿ ಮಾಡಬಹುದು. ನೋಡ ನೋಡುತ್ತಿದ್ದ ಹಾಗೆಯೇ ಆಗರ್ಭ ಶ್ರೀಮಂತ ಕೂಡ ದರಿದ್ರನಾಗಬಹುದು. ಒಂದು ಸುಪ್ರಭಾತದಲ್ಲಿ ಬಡವ ಬೇಕಾದರೂ ಧನಿಕನಾಗಬಹುದು. ಬುಬನ್ ಬಡ್ಯಾಕರ್ ಅನ್ನೋ ಕಡ್ಲೆಕಾಯಿ ವ್ಯಾಪಾರಿಯ ಬೆಂಗಾಲಿ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇಂದು ಆ ವ್ಯಕ್ತಿ ಸೂಪರ್ ಸ್ಟಾರ್ ಆಗಿದ್ದಾರೆ ಎನ್ನಬಹುದು. ಇನ್ನು ಅದಕ್ಕೂ ಸವಾಲೆಸೆಯುವಂತ ಮತ್ತೊಂದು ವಿಭಿನ್ನ ಪ್ರತಿಭೆ ಇದೀಗ ಕೋಟ್ಯಂತರ ಜನರ ಮನಗೆದ್ದಿದೆ. ಅವರೇ ಕೋಝಿಕ್ಕೋಡ್ ಭಾಗದ “ಮಮ್ಮಿಕ್ಕ”. ಈ ಮನುಷ್ಯನ ನಡಿಗೆಯೊಂದು ಇಂದು ಆಧುನಿಕ ಮಾಡೆಲ್ ಗಳು ಕೂಡ ನಾಚಿನೀರಾಗುವಂತೆ ಮಾಡಿದೆ.

“ಬುಬನ್ ಬಡ್ಯಾಕರ್” ಅವರು ಮೂಲತಃ ಪಶ್ಚಿಮ ಬಂಗಾಳದ ಖಜೂರಿ ಗ್ರಾಮದವರು. ತಮ್ಮ ಬಡ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಸಲುವಾಗಿ ಹಸಿ ಶೇಂಗಾವನ್ನು ಮಾರುವ ವ್ಯಕ್ತಿ. ಈ ವ್ಯಾಪಾರಿ, ತನ್ನ ಹಸಿ ಶೇಂಗಾದ ಜೋಳಿಗೆಯನ್ನ ಹಾಕಿಕೊಂಡು ಸೈಕಲ್ನಲ್ಲಿ ಖಜೂರಿ ಗ್ರಾಮದ ಬೀದಿ, ಬೀದಿಗಳಲ್ಲಿ ಅಲೆದಾಡುತ್ತಿದ್ದರು. ತನ್ನ ವ್ಯಾಪಾರದ ಭಾಗವಾಗಿ ತನ್ನದೇ ಶೈಲ್ಲಿಯಲ್ಲಿ ಒಂದು ಹಾಡನ್ನು ಕೂಡ ರಚಿಸಿದ್ದರು, ಆ ಹಾಡಿನಲ್ಲೇ ವ್ಯಾಪಾರವನ್ನು ಕೂಡ ಮಾಡುತ್ತಾ ಇದ್ದರು. ಆ ಹಾಡಿನ ಒಂದು ಕ್ಷಣವನ್ನು ಒಮ್ಮೆ ನೋಡಿದ ಸ್ಥಳೀಯರೊಬ್ಬರ ಮನಮೆಚ್ಚಿದೆ. ಈ ಕೂಡಲೇ ಅವರು ಮೊಬೈಲ್ ತೆಗೆದು ಸೆರೆಹಿಡಿದಿದ್ದಾರೆ. ಸೆರೆಹಿಡಿದ ವೀಡಿಯೊವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಕಾಲಿಟ್ಟ ಕ್ಷಣಾರ್ಧದಲ್ಲೇ ಕೋಟ್ಯಾಂತರ ಜನರ ಮನಸ್ಸು ಗೆದ್ದಿತು. ಈ ವ್ಯಾಪಾರಿಯ ಇದೀಗ ಕಜೂರಿ ಗ್ರಾಮದ ಸೂಪರ್ ಸ್ಟಾರ್ ಆಗಿ ಮಿಂಚಿದ್ದಾರೆ. ಇದನ್ನೇ ಅಲ್ವಾ ಅದೃಷ್ಟ ಅನ್ನೋದು? ಯಾರು ಯಾವಾಗ ಹೇಗೆ ಮಿಂಚುತ್ತಾರೆ, ಯಾವ ಸ್ಥಾನಕ್ಕೆ ಹೋಗುತ್ತಾರೆ ಎಂಬುದನ್ನು.

ಸ್ನೇಹಿತರೆ ಅದೃಷ್ಟ ಅನ್ನೋದು ಪ್ರತಿ ಮನುಷ್ಯನನ್ನು ಕೂಡ ಹಿಂಬಾಲಿಸಿಕೊಂಡು ಬರುತ್ತೆ. ಆದರೆ ಆ ಅದೃಷ್ಟವೆಂಬ ಗಾಳಕ್ಕೆ ನಾವು ಸಿಲುಕಿಕೊಳ್ಳಬೇಕು ಅಷ್ಟೇ! ಇದೇ ರೀತಿಯಲ್ಲಿ ತನ್ನ ನಡಿಗೆಯಿಂದಲೇ ಎಲ್ಲಾ ಮಾಡೆಲ್ ಗಳ ಗಮನ ಸೆಳೆದಿರುವ, ಕೂಲಿ ಕಾರ್ಮಿಕ ಮಮ್ಮಿಕ್ಕ ಕೂಡ ಒಬ್ಬರು. ಕೂಲಿ, ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಮ್ಮಿಕ್ಕನ ಜೀವನ ಶೈಲಿಯೂ ಇಂದು ಬದಲಾಗಿದೆ. ಹೌದು, ಜೀವನ ಸಾಗಿಸಲು ಕೂಲಿ ನಾಲಿ ಮಾಡುತ್ತಿದ್ದ ಈ ವ್ಯಕ್ತಿ ಮೂಲತಃ ಕೇರಳದ ಕೊಝಿಕೋಡ್ ನವರು, ಸಣಕಲು ದೇಹದ ಆಕಾರ ಹೊಂದಿದ್ದು, ಲುಂಗಿ ಧರಿಸಿ ಜೀವಿಸುತ್ತಿದ್ದ ಈ ಮಮ್ಮಿಕ್ಕ ಅವರು ರಂಗು ರಂಗಿನ ಬದುಕು ಕಂಡವರಲ್ಲ, ಆಡಂಬರ ಅಂದರೆ ಏನು ಅಂತ ತಿಳಿದವರಲ್ಲ. ಅದೃಷ್ಟ ಅನ್ನೋದು ಇದೇ ಅಲ್ವ! ಮಮ್ಮಿಕ್ಕ ಇಂದು ಭಾರತದ ಮೂಲೆ ಮೂಲೆಗೂ ಪರಿಚಯಸ್ತ ಮತ್ತು ಅದ್ಭುತ ಮಾಡೆಲ್ ಕೂಡ ಹೌದು.


ಇಂಥ ಒಬ್ಬ ಅದ್ಭುತವಾದ ಮಾಡೆಲ್ ಅನ್ನು ಪರಿಚಯಿಸಿದ್ದು ಯಾರು ಗೊತ್ತಾ? ಶರೀಕ್ ವಲಯಿಲ್ ಎಂಬ ಛಾಯಾಗ್ರಹಕರು. ಅವರು ಕೂಡ ಕೊಝಿಕ್ಕೊಡ್ ಮೂಲದ ಛಾಯಾಗ್ರಾಹಕ. ಶರೀಕ್ ರವರಿಗೆ ತನ್ನ ಗ್ರಾಮದ ವ್ಯಕ್ತಿಗಳನ್ನು ಆಯ್ಕೆ ಮಾಡಿ ತನ್ನ ಜಾಹೀರಾತಿಗೆ ಬಳಸಿಕೊಳ್ಳಬೇಕು ಅನ್ನೋ ಆಸೆಯಿತ್ತು. ಹಾಗಾಗಿ ತನ್ನ ಕ್ಯಾಮರಾದ ಕಣ್ಣಿಗೆ ತನ್ನ ಗ್ರಾಮಸ್ಥರೇ ಬರಬೇಕು ಅನ್ನೋ ಕಾರಣದಿಂದ ಮುಮ್ಮಿಕ್ಕರ ನಡಿಗೆ ಮತ್ತು ಅವರ ಹಾವ-ಭಾವವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಮುಂದೆ ಆಧುನಿಕ ಮಾಡೆಲ್ ಆಗಿ ರೂಪಿಸಬೇಕು ಅನ್ನೋ ಗುರಿ ಇಟ್ಟುಕೊಂಡಿದ್ದರು. ಒಂದು ದಿನ ಅನಿರೀಕ್ಷಿತವಾಗಿ ಮಮ್ಮಿಕ್ಕರನ್ನ ಸಂಪರ್ಕಿಸಿ ಅವರ ಸಣಕಲು ಶರೀರಕ್ಕೆ ಸೂಟು-ಬೂಟು ಹಾಕಿಸಿ, ಮುಖಕ್ಕೊಂದು ಗ್ಲಾಸನ್ನು ಕೂಡ ಹಾಕಿ, ಕೈಗೊಂದು ಟ್ಯಾಬನ್ನು ಕೊಟ್ಟು ನಡೆಯಲು ಹೇಳಿದರು. ಆ ರೀತಿ ತೆಗೆದ ಫೋಟೋ ಶೂಟ್ ಇಂದು ನೋಡುಗರನ್ನ ನಿಬ್ಬೆರಗಾಗಿಸಿದೆ. ಈ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

Exit mobile version