2023 ಎಸ್ಎಸ್ಎಲ್ಸಿ ಪರೀಕ್ಷೆ ಕೀ ಉತ್ತರಗಳು ಪ್ರಕಟ

Bengaluru : 2023 ಮಾರ್ಚ್ 31 ರಿಂದ ಏಪ್ರಿಲ್ 15ರವೆಗೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯ ಮಾದರಿ ಉತ್ತರಗಳನ್ನು (Key Answers) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು (ಏ.17) ಪ್ರಕಟಿಸಿದೆ. ಮಾದರಿ ಉತ್ತರಗಳನ್ನು (SSLC exam model answers) ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ kseab.karnataka.gov.in ನಲ್ಲಿ ಪರಿಶೀಲಿಸಿಸಬಹುದು.

ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪನವು ಈಗಾಗಲೆ ಆರಂಭವಾಗಿದ್ದು, ಮೇ ತಿಂಗಳಲ್ಲಿ ಫಲಿತಾಂಶ ಹೊರ ಬೀಳಲಿದೆ.


ಮೌಲ್ಯಮಾಪನ ಪೂರ್ಣಗೊಂಡ ನಂತರ, ಕರ್ನಾಟಕ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶ ದಿನಾಂಕ ಮತ್ತು ಸಮಯವನ್ನು ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C.Nagesh) ಪ್ರಕಟಿಸಲಿದ್ದಾರೆ.

ವಿದ್ಯಾರ್ಥಿಗಳು ಅಧಿಕೃತ ಫಲಿತಾಂಶಗಳ ಪೋರ್ಟಲ್‌ನಲ್ಲಿ ತಮ್ಮ ಅಂಕಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಸಾಧ್ಯವಾಗುತ್ತದೆ ಹಾಗೂ ಅವರ ಅಂಕಪಟ್ಟಿಗಳನ್ನು (SSLC exam model answers) ಆಯಾ ಶಾಲೆಗಳಿಂದ ಸಂಗ್ರಹಿಸಬಹುದು.

https://youtu.be/Vj8ext_HqEQ

ಮಾದರಿ ಉತ್ತರ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:

ಹಂತ 1: ಇಲಾಖೆಯ ಅಧಿಕೃತ ವೆಬ್ಸೈಟ್ (Website) ಆದ kseab.karnataka.gov.in ಕ್ಲಿಕ್ ಮಾಡಿ.
ಹಂತ 2: ಪೇಜ್ನ ಮುಖಪುಟದಲ್ಲಿ ನಿಮಗೆ ಮಾದರಿ ಉತ್ತರಗಳಿಗಾಗಿ ಮತ್ತು ಆಕ್ಷೇಪಣೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಎಂದು ಕಾಣ ಸಿಗಲಿದ್ದು, ಅದರ ಮೇಲೆ ಕ್ಲಿಕ್ ಮಾಡಿ

ಹಂತ 3: ಎಸ್ಎಸ್ಎಲ್ಸಿ(SSLC) 2023 ಮಾದರಿ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಅನ್ನುವ ಆಯ್ಕೆ ಕಾಣಸಿಗುತ್ತೆ. ಅದರ ಮೇಲೆ ಕ್ಲಿಕ್ ಮಾಡಿ.

ಹಂತ 4: ನಂತರ ಕರ್ನಾಟಕ ಎಸ್ಎಸ್ಎಲ್ಸಿ (SSLC) ಮಾದರಿ ಉತ್ತರ 2023 ಪುಟ ತೆರೆಯುತ್ತದೆ.
ಹಂತ 5: ನಂತರ ನೀವು ವಿಷಯವಾರು ಮಾದರಿ ಉತ್ತರಗಳನ್ನು ನೋಡಬಹುದು.

ಹಂತ 6: ಬಳಿಕ ಇದರಿಂದ ಮಾದರಿ ಉತ್ತರಗಳ ಪಿಡಿಎಫ್ ಫೈಲ್ (PDF File) ಅನ್ನು ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.

ಮಾದರಿ ಉತ್ತರ ಪತ್ರಗಳನ್ನು ಪರೀಕ್ಷಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://kseeb.karnataka.gov.in/objectionentry/SSLC_KeyAnswers

Exit mobile version