ಕೋವಿಡ್‌ನಿಂದ ಅನಾಥರಾದ ಮಕ್ಕಳ ಪಾಲನೆಗೆ 3500 ಸಹಾಯ ಧನ ಘೋಷಣೆ!

ಬೆಂಗಳೂರು : ಕೋವಿಡ್‌ ಕಾರಣದಿಂದಾಗಿ ಹಲವಾರು ಜನರು ಜೀವ ಕಳೆದುಕೊಂಡಿದ್ದು, ಅವರ ಮಕ್ಕಳು ಅನಾಥರಾಗಿದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಕೋವಿಡ್ -19 ನಿಂದ ಅನಾಥರಾಗಿರುವ 197 ಮಕ್ಕಳನ್ನು ಗುರುತಿಸಿದೆ ಮತ್ತು ಮುಖ್ಯಮಂತ್ರಿಗಳ ಬಾಲ ಸೇವಾ ಯೋಜನೆಯಡಿ ಅವರ ಆರೈಕೆಗಾಗಿ ತಿಂಗಳಿಗೆ 3,500 ರೂಪಾಯಿಗಳನ್ನು ನೀಡುತ್ತಿದೆ. ಇದಕ್ಕಾಗಿ ಸರ್ಕಾರ 1 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಮಕ್ಕಳಿಗೆ 18 ವರ್ಷ ತುಂಬುವವರೆಗೆ ಪೋಷಕರಿಗೆ ನೆರವು ನೀಡಲಾಗುತ್ತದೆ.


ಜೂನ್ 2021 ರಲ್ಲಿ, ಸಾಂಕ್ರಾಮಿಕ ರೋಗದಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳನ್ನು ನೋಡಿಕೊಳ್ಳಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಪಿಎಂ ಮೋದಿಯವರು ಮಾಡಿದ ಮನವಿಯ ನಂತರ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಈ ಮಕ್ಕಳ ಪೋಷಕರಿಗೆ ಮಾಸಿಕ 3,500 ರೂ ನಗದು ಸಹಾಯವನ್ನು ಘೋಷಿಸಿದ್ದರು. ಅಂಕಿ ಅಂಶಗಳ ಪ್ರಕಾರ, ಬೆಂಗಳೂರು ನಗರದಲ್ಲಿ ಪೋಷಕರನ್ನು ಕಳೆದುಕೊಂಡ 28 ಮಕ್ಕಳನ್ನು ಸರ್ಕಾರ ಗುರುತಿಸಿದೆ. ನಂತರ ಬೆಳಗಾವಿಯಲ್ಲಿ 18, ಚಿಕ್ಕಬಳ್ಳಾಪುರದಲ್ಲಿ 14 ಮತ್ತು ದಕ್ಷಿಣ ಕನ್ನಡದಲ್ಲಿ 11 ಮಕ್ಕಳನ್ನು ಗುರುತಿಸಲಾಗಿದೆ. 197 ಮಕ್ಕಳಲ್ಲಿ 193 ಮಂದಿ ನಗದು ಸಹಾಯಕ್ಕೆ ಅರ್ಹರಾಗಿದ್ದು, 182 ಪಾಲಕರು ಈಗಾಗಲೇ ನಗದು ಸಹಾಯವನ್ನು ಪಡೆಯುತ್ತಿದ್ದಾರೆ ಎಂದು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ನಿರ್ದೇಶಕಿ ಕೆ.ಎಸ್ ಲತಾ ಕುಮಾರಿ ತಿಳಿಸಿದ್ದಾರೆ.


ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಸಂಬಂಧಿಕರು ಅಥವಾ ಪೋಷಕರು ಇಲ್ಲದ ಕಾರಣ ಶಿಶುಪಾಲನಾ ಸಂಸ್ಥೆಗಳಿಗೆ ಸ್ಥಳಾಂತರಿಸಲಾಯಿತು. CCIಗಳು 18 ವರ್ಷ ತುಂಬುವವರೆಗೆ ಅವರ ಶಿಕ್ಷಣ ಮತ್ತು ವಸತಿಯನ್ನು ನೋಡಿಕೊಳ್ಳುತ್ತವೆ. ಯೋಜನೆ ಜಾರಿಗೆ ಬಂದ ಕೇವಲ 2-3 ತಿಂಗಳ ನಂತರ, 18 ವರ್ಷ ದಾಟಿದ ಒಂಬತ್ತು ಮಕ್ಕಳಿಗೆ ಸಹಾಯವನ್ನು ನಿಲ್ಲಿಸಲಾಗಿದೆ. ಆದರೆ ಅವರು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಉಚಿತವಾಗಿ ಲ್ಯಾಪ್‌ಟಾಪ್ ಮತ್ತು ಟ್ಯಾಬ್‌ಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಆದರೆ, 21 ವರ್ಷ ಮೇಲ್ಪಟ್ಟ ಮಕ್ಕಳಿಗೆ ಉನ್ನತ ಶಿಕ್ಷಣ ಅಥವಾ ಮದುವೆ ಉದ್ದೇಶಕ್ಕೆ ಬಳಸಲು ಒಂದೇ ಬಾರಿಗೆ 1 ಲಕ್ಷ ರೂ.ಗಳ ಅನುದಾನ ನೀಡುವ ಘೋಷಣೆ ಇನ್ನೂ ಜಾರಿಯಾಗಿಲ್ಲ. “ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆಯು ನಡೆಯುತ್ತಿದೆ ಮತ್ತು ನಾವು ಶೀಘ್ರದಲ್ಲೇ ಸಹಾಯವನ್ನು ವಿತರಿಸಲು ಪ್ರಾರಂಭಿಸುತ್ತೇವೆ” ಎಂದು ಅಧಿಕಾರಿಯೊಬ್ಬರು ಹೇಳಿದರು.

Exit mobile version