ಕಾಶ್ಮೀರ ನಮ್ಮ ಮುಂದಿನ ಗುರಿ ಆಲ್‌ಕೈದಾ

ಕಾಬೂಲ್ ಸೆ 2 : ಅಫ್ಘಾನಿಸ್ತಾನವನ್ನು ತಾಲಿಬಾನ್‌ಗಳು ವಶಪಡಿಸಿಕೊಂಡ ಬೆನ್ನಲ್ಲೆ ನಮ್ಮ ಮುಂದಿನ ಗುರಿ ಕಾಶ್ಮೀರ ಎಂದು ಹೇಳಿದ್ದು, ಇದರ ಜೊತೆಗೆ ಇನ್ನು ಹಲವು ಪ್ರದೇಶಗಳನ್ನು ಪಟ್ಟಿ ಮಾಡಿದೆ.

ಆಲ್‌ಕೈದಾ ಭಾರತದ ಕಾಶ್ಮೀರ ಮಾತ್ರವಲ್ಲದೆ ಅದು ಇರಾಕ್, ಸಿರಿಯಾ, ಜೋರ್ಡಾನ್ ಮತ್ತು ಲೆಬನಾನ್‌ ಅನ್ನು ಒಳಗೊಂಡ ಮೆಡಿಟೇರಿಯನ್ ಪ್ರದೇಶ ಅಥವಾ ಲೆವಾಂಟ್, ಲಿಬಿಯಾ, ಮೊರಾಕ್ಕೋ, ಅಲ್ಜೀರಿಯಾ, ಮೌರಿಟಾನಿಯಾ, ಟ್ಯುನಿಷಿಯಾ ಮತ್ತು ಸೋಮಾಲಿಯಾಗಳನ್ನು ಒಳಗೊಂಡ ವಾಯವ್ಯ ಆಫ್ರಿಕಾದ ಇಸ್ಲಾಮಿಕ್ ಮಘ್ರೆಬ್, ಯೆಮೆನ್ ದೇಶಗಳು ನಮ್ಮ ಗುರಿಯಾಗಿದೆ ಎಂದು ತಿಳಿಸಿದೆ.

ಆಲ್‌ ಕೈದಾ ಮುಂಚಿನಿಂದಲೂ ಕಾಶ್ಮೀರವನ್ನು ತನ್ನ ಗುರಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಹೆಸರಿಸುತ್ತಾ ಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ ಕೈದಾ ಅನ್ಸಾರ್ ಘಜ್ವಾತುಲ್ ಹಿಂದ್ ಸಂಘಟನೆಯ ಸ್ಥಾಪನೆ ವೇಳೆ ಇಸ್ಲಾಂಗಾಗಿ ಭಾರತವನ್ನು ವಶಪಡಿಸಿಕೊಳ್ಳುವುದಾಗಿ ಅದು ಹೇಳಿತ್ತು.ಆಲ್ ಕೈದಾ ಸಂಘಟನೆಯ ಅಯ್ಮಾನ್ ಅಲ್ ಜವಾಹಿರಿ ನಾಯಕತ್ವದಲ್ಲಿ ಪಾಕಿಸ್ತಾನದಲ್ಲಿ ಇದ್ದು, ಇದಕ್ಕೆ ಪಾಕಿಸ್ತಾನವೇ ಪರೋಕ್ಷವಾಗಿ ಬೆಂಬಲನೀಡುತ್ತಿದೆ.

Exit mobile version