`ದ ಕಾಶ್ಮೀರ ಫೈಲ್ಸ್’ ಚಿತ್ರಕ್ಕೆ ತೆರಿಗೆ ವಿನಾಯಿತಿ : ಸಿಎಂ ಬಸವರಾಜ್ ಬೊಮ್ಮಾಯಿ!

cm

ರಾಜ್ಯದ ಮುಖ್ಯಮಂತ್ರಿಗಳಾದ(Chief Minister) ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ದೇಶದಲ್ಲಿ ಸಂಚಲನವನ್ನು ಮೂಡಿಸಿರುವ ದ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಈ ಸಿನಿಮಾದ ಕಥೆಯು ‘ಜೆಎನ್‌ಯು ವಿದ್ಯಾರ್ಥಿ’ ಕೃಷ್ಣ ಪಂಡಿತ್ (Darshan Kumar) ಸುತ್ತ ಸುತ್ತುತ್ತದೆ. ಅವನ ಅಜ್ಜ ಪುಷ್ಕರ್ ನಾಥ್ (Anupam Kher) ಹೇಳಿದಂತೆ ತನ್ನ ಹೆತ್ತವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಂದು ಭಾವಿಸುತ್ತಾನೆ.

ದ ಕಾಶ್ಮೀರ ಫೈಲ್ಸ್ ಸಿನಿಮಾ ಮೊದಲ ಬಾರಿಗೆ ಸಿನಿಮಾ ಇತಿಹಾಸದಲ್ಲಿ 10/10 ರೇಟಿಂಗ್ ಪಡೆಯುವ ಮೂಲಕ ಅದ್ಬುತ ಸಂದೇಶ ಸಾರುತ್ತಿರುವ ಪ್ರಮುಖ ಸಿನಿಮಾವಾಗಿ ಹೊರಹೊಮ್ಮಿದೆ. ಇದೊಂದು ಚಿತ್ರ ಯಾವುದೇ ರೀತಿಯ ಪ್ರಮೋಷನ್ ಪಡೆಯದೆ, ಚಿತ್ರಮಂದಿರಕ್ಕೆ ಮಾರ್ಚ್ 11ನೇ ರಂದು ದೇಶದ ಎಲ್ಲಾ ಚಿತ್ರಮಂದಿರಗಳಲ್ಲೂ ಬಿಡುಗಡೆಯಾಯಿತು. ಬಿಡುಗಡೆಗೊಂಡೆ ಮೊದಲ ದಿನದಿಂದಲೂ ಇಲ್ಲಿಯವರೆಗೂ ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬ ಭಾರತೀಯನೂ ಕಣ್ಣೀರಿನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಸಿನಿಮಾ ಕರ್ನಾಟಕ ರಾಜ್ಯದಲ್ಲೂ ಮುನ್ನುಗ್ಗುತ್ತಿದ್ದು, ದ ಕಾಶ್ಮೀರ ಫೈಲ್ಸ್ ಚಿತ್ರತಂಡ ಮತ್ತೆ ಭಾರತದಲ್ಲಿ 2,400 ಹೆಚ್ಚು ಚಿತ್ರಮಂದಿರಗಳಿಗೆ ಸಿನಿಮಾವನ್ನು ಹಂಚಿದೆ.

ಇದೇ ರೀತಿ ಕರ್ನಾಟಕದಲ್ಲೂ ಕೂಡ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ದಂಡು ನುಗ್ಗುತ್ತಿದ್ದು, ಈ ಸಿನಿಮಾಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಈ ಸಿನಿಮಾ ವೀಕ್ಷಿಸಿದ ಸಿಎಂ, ಸಿನಿಮಾಗೆ ಬೆಂಬಲ ಸೂಚಿಸಿ, ಈ ಸಿನಿಮಾ ಎಲ್ಲರೂ ನೋಡಬೇಕು ಮತ್ತು ನಮ್ಮ ಕನ್ನಡದವರು ಈ ಸಿನಿಮಾ ವೀಕ್ಷಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯದಲ್ಲಿ ಈ ಸಿನಿಮಾಗೆ ತೆರಿಗೆ ಮುಕ್ತಗೊಳಿಸುತ್ತೇವೆ ಎಂದು ಹೇಳಿದರು. ಗುಜರಾತ್, ಮಧ್ಯಪ್ರದೇಶ ಸೇರಿದಂತೆ ಹರಿಯಾಣ ರಾಜ್ಯಗಳಲ್ಲಿ ಚಿತ್ರ ಪದರ್ಶನಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.

Exit mobile version