Bengaluru (ಜು.21) : ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬಜೆಟ್‌ನಲ್ಲಿ (today liquor price increased) ಘೋಷಿಸಿದ ಪ್ರಕಾರ, ಬಹುಚರ್ಚಿತ ಮದ್ಯದ ಬೆಲೆ ಇಂದಿನಿಂದ
(ಜುಲೈ 20) ಅನ್ವಯವಾಗುವಂತೆ ಹೆಚ್ಚಳವಾಗಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ನೀಡಿದ್ದ ಶಾಕ್ ಮದ್ಯಪ್ರಿಯರಿಗೆ ಈಗ ಬಿಸಿ ಮುಟ್ಟಲಿದೆ. ಅಬಕಾರಿ ಸುಂಕವನ್ನು ಸರ್ಕಾರವು ಹೆಚ್ಚಿಸಿರುವುದರಿಂದ ಶೇಕಡಾ 20 ರಷ್ಟು
ಹೆಚ್ಚಳದವರೆಗೆ ಶುಕ್ರವಾರದಿಂದ ಹೊಸ ಬೆಲೆಯಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತದೆ. ಭಾರಿ ಪ್ರಮಾಣದಲ್ಲಿ ಅಬಕಾರಿ ಸುಂಕದಲ್ಲಿ ಏರಿಕೆ ಆಗಿದ್ದು, ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಯೂ
ನಡೆದಿತ್ತು ಎಂಬುದನ್ನು ಇಲ್ಲಿ (today liquor price increased) ನೆನಪಿಸಬಹುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸುತ್ತಿದ್ದಂತೆ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಲಾಗಿದೆ. ಸರ್ಕಾರವು ಜಾರಿಗೆ ತಂದಿರುವ ಶಕ್ತಿ ಯೋಜನೆಗಳು (Shakti Scheme)
ಹಾಗೂ ಮುಂದಿನ ದಿನಗಳಲ್ಲಿ ಜಾರಿಗೆ ಬರುವ ಅನೇಕ ಯೋಜನೆಗಳಿಗಾಗಿ ಸಂಪನ್ಮೂಕ ಕ್ರೋಢೀಕರಣ ದೃಷ್ಟಿಯಿಂದ ಇದೀಗ ಮದ್ಯದ ಬೆಲೆಯನ್ನು ಹೆಚ್ಚಿಸಲಾಗಿದೆ.

ಸರ್ಕಾರಿ ಆದೇಶದ ಪ್ರಕಾರ ಗುರುವಾರ (Thursday) ಮಧ್ಯರಾತ್ರಿಯಿಂದಲೇ ಏರಿಕೆ ಜಾರಿಗೆ ಬರಲಿದೆ. ಆದಾಗ್ಯೂ, ರಾಜ್ಯದ ಕೆಲವು ಭಾಗಗಳಲ್ಲಿನ ಬಾರ್ ಮತ್ತು ರೆಸ್ಟೋರೆಂಟ್‌ಗಳು (Bar and Restaurent)
ಗ್ರಾಹಕರಿಂದ ಹೆಚ್ಚಿನ ದರವನ್ನು ಗುರುವಾರ ರಾತ್ರಿಯೇ ವಸೂಲಿ ಮಾಡಿದ ಪ್ರಕರಣಗಳೂ ವರದಿಯಾಗಿವೆ.
ಇದನ್ನೂ ಓದಿ : 2 ತಿಂಗಳಲ್ಲಿ ರಾಜ್ಯದಲ್ಲಿ 42 ರೈತರ ಆತ್ಮಹತ್ಯೆ: ಜೀವ ಹಿಂಡುತ್ತಿದೆ ಸಾಲ ಬಾಧೆ !
ಬಜೆಟ್‌ನಲ್ಲಿ ಸರ್ಕಾರವು ಬ್ರಾಂಡಿ, ವಿಸ್ಕಿ, ಜಿನ್, ರಮ್ ಮತ್ತು ಇತರ ಆಲ್ಕೋಹಾಲ್‌ಗಳ(Alcohol) ಮೇಲಿನ ಅಬಕಾರಿ ಸುಂಕವನ್ನು 20% ಮತ್ತು ಬಿಯರ್ (Beer) ಮೇಲಿನ ಅಬಕಾರಿ ಸುಂಕವನ್ನು 10%
ಹೆಚ್ಚಿಸುವುದಾಗಿ ಘೋಷಿಸಿತು. ಹಾಗಾಗಿ ಈಗಿನ ಬೆಲೆಗೆ ಹೋಲಿಸಿದರೆ ಬಿಯರ್ ಬೆಲೆ ಶೇ.10ರಷ್ಟು ಹೆಚ್ಚಾಗಲಿದೆ. ಐಎಂಎಲ್ ಒಂದು ಪೆಗ್ (60 ಎಂಎಲ್) ಗೆ .10-20 ಹೆಚ್ಚಳವಾಗುವ ಸಾಧ್ಯತೆಯಿದೆ.

ಮದ್ಯದ ಬೆಲೆ ಎಷ್ಟು ಹೆಚ್ಚಳವಾಗಿದೆ – ಇಲ್ಲಿದೆ ವಿವರ.
ಪ್ರತಿ ರಟ್ಟಿನ ಪೆಟ್ಟಿಗೆಯ ಬೆಲೆ ಒಟ್ಟು 450 ರೂಪಾಯಿ ವರೆಗೂ ಇದ್ದರೆ ಅದರ ಅಬಕಾರಿ ಸುಂಕ ಒಟ್ಟು 215 ರೂಪಾಯಿ ಆಗಲಿದೆ. ಇದೇ ರೀತಿ ರಟ್ಟಿನ ಪೆಟ್ಟಿಗೆಯ ಬೆಲೆ 450ರಿಂದ 499 ರೂಪಾಯಿ ಇದ್ದರೆ
ಇದರ ಮೇಲಿನ ಅಬಕಾರಿ ಸುಂಕ 294 ರೂಪಾಯಿ ಆಗಲಿದೆ. ಅದೇ ರೀತಿ ರಟ್ಟಿನ ಪೆಟ್ಟಿಗೆಯ ಬೆಲೆ 500 ರೂಪಾಯಿಯಿಂದ 549 ರೂಪಾಯಿ ತನಕ ಇದ್ದರೆ ಇದರ ಅಬಕಾರಿ ಸುಂಕ 386 ರೂಪಾಯಿ ಆಗಲಿದೆ.
ಇದೇ ರೀತಿ ಒಟ್ಟಾರೆ 18 ಸ್ತರದಲ್ಲಿ ಅಬಕಾರಿ ಸುಂಕವನ್ನು ಹೆಚ್ಚಿಸಲಾಗಿದೆ.ಇದರಲ್ಲಿ ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಅಂಥ ಇತರ ಮದ್ಯಗಳು ಮಾತ್ರ ಒಳಗೊಂಡಿವೆ. ಆದರೆ, ಬಿಯರ್, ವೈನ್,
ಸೇಂದಿ ಮತ್ತು ಪೆನ್ನಿಗಳು ಈ ವ್ಯಾಪ್ತಿಗೆ ಬರುವುದಿಲ್ಲ.
ಶೇಕಡ 185 ರಷ್ಟು ಬಿಯರ್ ದರ ಕೂಡ ಏರಿಕೆ
ಸರ್ಕಾರ ಇಂದಿನಿಂದ ಬಿಯರ್ ದರವನ್ನೂ ಅನ್ವಯವಾಗುವಂತೆ ಹೆಚ್ಚಿಸಿದೆ.ಅಬಕಾರಿ ಸುಂಕ ಶೇಕಡ 185ರಷ್ಟು ಬಜೆಟ್‌ನಲ್ಲಿ ಘೋಷಿಸಿದ ಪ್ರಕಾರ ಏರಿಕೆಯಾಗಿದೆ. ಸರ್ಕಾರದ ಅಧಿಸೂಚನೆ ಪ್ರಕಾರ,
ಘೋಷಿತ ದರದ ಶೇಕಡ 185 ಅಬಕಾರಿ ಸುಂಕ ಇರಲಿದೆ.
- ರಶ್ಮಿತಾ ಅನೀಶ್