ಭಾರತ ತಂಡದ ಕ್ರಿಕೆಟಿಗರು ಓದಿದ್ದೆಷ್ಟು..? ಇಲ್ಲಿದೆ ನಿಮ್ಮ ನೆಚ್ಚಿನ ಆಟಗಾರರ ವಿದ್ಯಾರ್ಹತೆ..!

ತಮ್ಮ ನೆಚ್ಚಿನ ಕ್ರಿಕೆಟ ಆಟಗಾರರ ಶೈಕ್ಷಣಿಕ ಅರ್ಹತೆ ಏನು ಎನ್ನುವ ವಿಚಾರ (top indian cricketers qualification) ಬಹುತೇಕ ಜನರಿಗೆ ಗೊತ್ತಿರುವುದಿಲ್ಲ. ಭಾರತದ ತಂಡದ ಆಟಗಾರರ ಶೈಕ್ಷಣಿಕ

ವಿದ್ಯಾರ್ಹತೆಯ ವಿವರ ಇಲ್ಲಿದೆ ನೋಡಿ.

ವಿರಾಟ್ ಕೊಹ್ಲಿ (Virat kohli) : ವಿಶ್ವಮಾನ್ಯ ಆಟಗಾರ ವಿರಾಟ್ ಕೊಹ್ಲಿ(Virat kohli) ದೆಹಲಿಯ (Delhi) ವಿಶಾಲ್ ಭಾರತಿ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು, ಬಳಿಕ ಕೊಹ್ಲಿ 12ನೇ ತರಗತಿವರೆಗೂ

ಸೇವಿಯರ್ ಕಾನ್ವೆಂಟ್ ಸ್ಕೂಲ್ನಲ್ಲಿ (Saviour’s Convent School) ವ್ಯಾಸಂಗ ಮಾಡಿ ಓದು ನಿಲ್ಲಿಸಿದರು.

ರೋಹಿತ್ ಶರ್ಮಾ (Rohit Sharma): ರೋಹಿತ್ ಶರ್ಮಾ (Rohit Sharma) ಓದಿದ್ದು ಕೇವಲ 12ನೇ ತರಗತಿ ಮಾತ್ರ. ಪಿಯುಸಿ (PUC) ಬಳಿಕ ಎಜುಕೇಶನ್ ಮುಂದುವರೆಸಲಿಲ್ಲ. ಆದರೆ ಕ್ರಿಕೆಟ್ (Cricket)

ಪ್ರಾದಾರ್ಪಣೆ ಮಾಡಿ, ಸಾಕಷ್ಟು ಸಾಧನೆ (top indian cricketers qualification) ಮಾಡಿದರು.

ರವಿಚಂದ್ರನ್ ಅಶ್ವಿನ್ (Ravichandran Ashwin): ಹಾಲಿ ಕ್ರಿಕೆಟಿಗರ ಪೈಕಿ ಅಶ್ವಿನ್ (Ashwin), ಅತಿಹೆಚ್ಚು ಶಿಕ್ಷಣ ಪಡೆದ ಆಟಗಾರ ಎನಿಸಿದ್ದಾರೆ. ಅಶ್ವಿನ್, ಎಸ್ಎಸ್ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ

ಇನ್ಫಾರ್ಮೇಶನ್ ಟೆಕ್ನಾಲಜಿ ವಿಭಾಗದಲ್ಲಿ ಬಿ.ಟೆಕ್ (B.tech) ಪದವಿ ಪಡೆದಿದ್ದಾರೆ.

56% ಅಂಕ ಪಡೆದು, ರೈಲ್ವೆ (Railway) ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

ಕೆಎಲ್ ರಾಹುಲ್ (KL Rahul): ರಾಹುಲ್ , ಮಂಗಳೂರಿನ (Mangaluru) ಸೂರತ್ಕಲ್ನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದುಕೊಂಡಿದ್ದು, ನಂತರ ಬೆಂಗಳೂರಿನ (Bengaluru) ಶ್ರೀ ಭಗವಾನ್ ಮಹಾವೀರ್ ಜೈನ್

ಕಾಲೇಜಿನಲ್ಲಿ ಬಿ.ಕಾಂ (B.com) ಪದವಿ ಪಡೆದುಕೊಂಡಿದ್ದಾರೆ. ಇದಾದನಂತರ ಉನ್ನತ ಶಿಕ್ಷಣ ಮುಂದುವರೆಸಲಿಲ್ಲ.

ರಿಷಭ್ ಪಂತ್ (Rishabh Pant): ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್, ದೆಹಲಿ (Dehli) ಯೂನಿವರ್ಸಿಟಿಯ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ಬಿ,ಕಾಂ (B.com) ಪದವಿ ಪೂರೈಸಿದ್ದಾರೆ.

ಹಾರ್ದಿಕ್ ಪಾಂಡ್ಯ (Hardik Pandya) : ಹಾರ್ದಿಕ್ ಪಾಂಡ್ಯ ಎಂ.ಕೆ ಹೈಸ್ಕೂಲ್ನಲ್ಲಿ (MK High School) ಕೇವಲ 9ನೇ ತರಗತಿಯವರೆಗೆ ಮಾತ್ರ ಓದಿದ್ದು, ನಂತರ ಓದಿಗೆ ಗುಡ್ ಬೈ (Good bye) ಹೇಳಿದ್ಧಾರೆ.

ಮಹೇಶ್

Exit mobile version