ಅಚ್ಚರಿ ಆದ್ರೂ ಸತ್ಯ ! ಮಗುವಿನ ನಿರೀಕ್ಷೆಯಲ್ಲಿದ್ದಾರೆ ತೃತೀಯ ಲಿಂಗಿ ದಂಪತಿ

ತಿರುವನಂತಪುರಂ: ದೇಶದ ಮೊದಲ ತೃತೀಯ ಲಿಂಗಿ (ಟ್ರಾನ್ಸ್ಜೆಂಡರ್) ದಂಪತಿಯಾದ ಜಹಾದ್(transgender couple expecting baby) ಮತ್ತು ಜಿಯಾ (Ziya paval) ಈಗ ಹೊಸತಾದ ಉತ್ಸಾಹದಲ್ಲಿದ್ದಾರೆ.

ಮಗುವಿನ ನಿರೀಕ್ಷೆಯಲ್ಲಿರುವ ಈ ದಂಪತಿ ಈ ಖುಷಿಯ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್(Instagram) ಖಾತೆಯಲ್ಲಿ ಹಂಚಿಕೊಂಡಿದ್ದು ಈಗ ವೈರಲ್ ಆಗಿದೆ.

ದೇಶದಲ್ಲಿಯೇ ಮೊದಲು ತೃತೀಯ ಲಿಂಗಿ ಗರ್ಭ ಧರಿಸಿರುವ ಈ ಪ್ರಕರಣ ಇದಾಗಿರುವುದರಿಂದ ಇಂಟರ್ ನೆಟ್ ನಲ್ಲಿ (Internet) ಭಾರೀ ವೈರಲ್‌ ಆಗಿದೆ. ಕೇರಳದ(Kerala) ಕೋಝಿಕ್ಕೋಡ್ನ ತೃತೀಯ ಲಿಂಗಿ ದಂಪತಿಯಾದ

ಜಿಯಾ ಮತ್ತು ಜಹಾದ್ ಮೆಟರ್ನಿಟಿ ಫೋಟೋ ಶೂಟ್(transgender couple expecting baby) ಮಾಡಿಸಿಕೊಂಡು ಗುಡ್ ನ್ಯೂಸನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 2 ವರ್ಷಗಳ ಕಾಲ ನಾನು ನಟಿಯಾಗಲು ಸಾಧ್ಯವಾಗದಿದ್ದಾಗ ನಾನು ಈ ಕೆಲಸ ಮಾಡಿದೆ : ಸಮೀರಾ ರೆಡ್ಡಿ

ಜಿಯಾ ಪಾವಲ್ ರವರು ಹುಟ್ಟಿನಿಂದ ನಾನು ಹೆಣ್ಣಲ್ಲ, ಆದರೆ ಹೆಣ್ತನದ ಕನಸು ನನ್ನಲ್ಲಿ,ಇತ್ತು.ಕಳೆದ ಮೂರು ವರ್ಷದಿಂದ ನಾನು ಮತ್ತು ಜಿಯಾ ಜೊತೆಯಾಗಿದ್ದೇವೆ,ನಮಗೆ ತಂದೆ ತಾಯಿಯಾಗುವ ಕನಸು ಇತ್ತು.

ಈಗ ಆ ಕನಸು ಈಡೆರುತ್ತಿರುವುದರಿಂದ ಬಹಳ ಸಂತೋಷವಾಗುತ್ತಿದೆ.ಮಗು ಹೆಣ್ಣಾಗಲಿ,ಗಂಡಾಗಲಿ ಸಂತಸದಿಂದ ನೋಡಿಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಗರ್ಭ ಧರಿಸಿರುವ ಜಿಯಾ ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಬದಲಾಗಿದ್ದಳು. ಜಹಾದ್ ಹೆಣ್ಣಾಗಿ ಹುಟ್ಟಿ ನಂತರ ಪುರುಷನಾಗಿ ಬದಲಾಗಿದ್ದಳು.

ಜಹಾದ್ ಮಹಿಳೆಯಿಂದ ಪುರುಷನಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯ ಸಂದರ್ಭದಲ್ಲಿ ಗರ್ಭಾಶಯ ಹಾಗೂ ಇತರ ಕೆಲವು ಅಂಗಗಳನ್ನು ತೆಗೆಯದ ಕಾರಣ ಜಹಾದ್ ಗರ್ಭ ಧರಿಸಿದ್ದಾರೆ.

ಸದ್ಯ ಇವರಿಬ್ಬರೂ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ, ಸೋಷಿಯಲ್ ಮೀಡಿಯಾದಲ್ಲಿ(Social Media) ಇವರಿಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಮಾರ್ಚ್ ನಲ್ಲಿ ಜಹಾದ್ ಮಗುವಿಗೆ ಜನ್ಮ ನೀಡಲಿದ್ದಾರೆ.
Exit mobile version