ಮಧ್ಯರಾತ್ರಿ ವೇಳೆ ಹೋಟೆಲ್‌ ನಡೆಸಿ, ಅನೇಕರಿಗೆ ಆಹಾರ ಒದಗಿಸುವ ತೃತೀಯಲಿಂಗಿ!

Udupi : ಕರ್ನಾಟಕ ರಾಜ್ಯದಿಂದ ಎಂಬಿಎ ಪದವಿ ಪಡೆದ ಮೊದಲ ತೃತೀಯಲಿಂಗಿ(Transgenders) ತಮ್ಮ ಸ್ನೇಹಿತರೊಂದಿಗೆ ಒಟ್ಟುಗೂಡಿ, ಉಡುಪಿಯಲ್ಲಿ(Udupi) ಮಧ್ಯರಾತ್ರಿ ಉಪಹಾರ ಒದಗಿಸುವ ಹೋಟೆಲ್‌ (Transgenders night food stall) ನಡೆಸುತ್ತಿದ್ದಾರೆ!

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ರಾತ್ರಿ ವೇಳೆ ಹಲವರು (Transgenders night food stall) ಜಿಲ್ಲೆಗಳಿಂದ ಜಿಲ್ಲೆ, ರಾಜ್ಯಗಳ ನಡುವೆ ಪ್ರಯಾಣ ಬೆಳೆಸುತ್ತಾರೆ.

ಈ ನಡುವೆ ದಾರಿ ಮಧ್ಯೆ ಸಾಗುವಾಗ ಊಟವನ್ನು ಮಾಡಲು ತಮ್ಮ ವಾಹನವನ್ನು ನಿಲ್ಲಿಸುತ್ತಾರೆ. ರಾತ್ರಿ ಉಪಹಾರ ಮಳಿಗೆಗಳು ಹೆಚ್ಚು ಕಾಣ ಸಿಗುವುದು ಅಲ್ಪ!

ಸದ್ಯ ಆ ನಿಟ್ಟಿನಲ್ಲಿ ಗಮನಿಸುವುದಾದರೆ, ನಮ್ಮ ರಾಜ್ಯದ ತೃತೀಯಲಿಂಗಿ ಅವರ ತಂಡ ನಡೆಸುತ್ತಿರುವ ಉಪಹಾರ ಮಳಿಗೆ ಇಂದು ಹೆಚ್ಚು ಜನರನ್ನು ಸೆಳೆಯುತ್ತಿದೆ!

ಸಾಂದರ್ಭಿಕ ಚಿತ್ರ

ಮೂವರು ತೃತೀಯಲಿಂಗಿಗಳ ತಂಡ ನಮ್ಮ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆಯುವ ಆಹಾರ ಮಳಿಗೆಯನ್ನು ತೆರೆದಿರುವ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ(PTI) ವರದಿ ಮಾಡಿದೆ.

ಸಾಮಾನ್ಯವಾಗಿ ದೇಶಾದ್ಯಂತ ಪ್ರವಾಸಿಗರಿಂದ ನಿರತವಾಗಿರುವ ಪಟ್ಟಣದಲ್ಲಿ ಇಂತಹ ಆಹಾರ ಮಳಿಗೆ ಇದೇ ಮೊದಲು! ಪೂರ್ವಿ, ವೈಷ್ಣವಿ ಮತ್ತು ಚಂದನಾ ಎಂಬ ಮೂವರು ತೃತೀಯಲಿಂಗಿ,

ಈ ಹಿಂದೆ ಉಡುಪಿಯ ಬೀದಿಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ಭಿಕ್ಷಾಟನೆ ತ್ಯಜಿಸಿ ತಾವು ಹೊಸ ಜೀವನವನ್ನು ಪ್ರಾರಂಭಿಸಬೇಕು ಎಂದು ದೃಢವಾಗಿ ನಿರ್ಧರಿಸಿದ್ದಾರೆ.

ಈ ನಿರ್ಧಾರದ ಬೆನ್ನಲ್ಲೇ ಅವರು ಅನೇಕ ಪ್ರವಾಸಿಗರು ಕರಾವಳಿ ಪಟ್ಟಣದಲ್ಲಿ ತಡರಾತ್ರಿಯಲ್ಲಿ ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಉತ್ತಮವಾದ ಉಪಹಾರ ಮಳಿಗೆ ಜನರಿಗೆ ಸುತ್ತಮುತ್ತ ಲಭ್ಯವಿಲ್ಲ ಎಂಬುದನ್ನು ಅರಿತು, ಮಧ್ಯರಾತ್ರಿ ಉಪಹಾರ ಒದಗಿಸುವ ಮಳಿಗೆಯನ್ನು ತೆರೆದಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಸಂಚಾಲಕ ಸ್ಥಾನ ; ಲಿಂಗಾಯತ ಅಸ್ತ್ರ ಪ್ರಯೋಗಿಸಿದ ಬಿಜೆಪಿ

ಕರ್ನಾಟಕದಲ್ಲಿ ಎಂಬಿಎ (MBA)ವ್ಯಾಸಂಗ ಮಾಡಿದ ಮೊದಲ ತೃತೀಯಲಿಂಗಿ ಸಮೀಖಾ ಕುಂದರ್(Samikha Kundar) ಅವರ ಸಹಾಯ ಹಸ್ತದಿಂದ,

ಮೂವರು ಒಮ್ಮತದಿಂದ ಕೈಜೋಡಿಸಿ, ಉಪಹಾರವನ್ನು ತಾವೇ ತಯಾರು ಮಾಡಿ, ಬರುವ ಗ್ರಾಹಕರಿಗೆ ಒದಗಿಸುತ್ತಾರೆ. ಈ ಮೂಲಕ ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಮೂವರು ಸ್ನೇಹಿತರು, ನಮಗೆ ಬೇಕಾಗಿರುವುದು ಗೌರವಯುತ ಜೀವನ ಮತ್ತು ನಾವು ಸ್ವಾವಲಂಬಿಯಾಗಿ ಬದುಕಲು ನಿರ್ಧರಿಸಿದ್ದೇವೆ.

ಉಡುಪಿಯಲ್ಲಿ ತಡರಾತ್ರಿಯ ಆಹಾರಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂಬುದನ್ನು ನಾವು ತಿಳಿದುಕೊಂಡೆವು,

ಸಾಂದರ್ಭಿಕ ಚಿತ್ರ

ಅನೇಕ ಸ್ಥಳೀಯ ಉಪಹಾರ ಒದಗಿಸುವ ಹೋಟೆಲ್‌ ಶೀಘ್ರವೇ ಮುಚ್ಚಲ್ಪಟ್ಟಿದ್ದರಿಂದ ಪ್ರವಾಸಿಗರು ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ನಮಗೆ ಗೋಚರಿಸಿತು.

ಇದೇ ನಮಗೆ ಪ್ರಮುಖ ಕಾರಣವಾಯಿತು. ನಾವು ನಮ್ಮ ಆಹಾರ ಉದ್ಯಮವನ್ನು ಪ್ರಾರಂಭಿಸಿದಾಗಿನಿಂದ,

ಜನರಿಂದ ದೊರೆಯುತ್ತಿರುವ ಪ್ರತಿಕ್ರಿಯೆಯು ಹೃದಯಸ್ಪರ್ಶಿಯಾಗಿದೆ ಮತ್ತು ಇದು ನಮ್ಮ ಜೀವನಕ್ಕೆ ಹೊಸ ಭರವಸೆಯನ್ನು ನೀಡಿದೆ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.


ಈ ಮೂವರು ತೃತೀಯಲಿಂಗಿ ಸ್ನೇಹಿತರಿಗೆ ಸಹಾಯ ಮಾಡಿದ ಸಮೀಖಾ ಕುಂದರ್ ಅವರು ಈ ಬಗ್ಗೆ ಮಾತನಾಡಿದ್ದು,

ನಮ್ಮ ಸಮುದಾಯದ ಜನರು ಉದ್ಯಮಗಳಿಗೆ ಪ್ರವೇಶಿಸುವುದನ್ನು ನೋಡುವುದು ಒಳ್ಳೆಯ ಸಂಗತಿ.

ಇಂತಹ ಸಣ್ಣ ಉದ್ಯಮಗಳನ್ನು ನಡೆಸಲು ಸಾರ್ವಜನಿಕರಿಂದ ಹೆಚ್ಚಿನ ಸ್ವೀಕಾರದ ಅವಶ್ಯಕತೆಯಿದೆ ಮತ್ತು ವಿಷಯಗಳು ನಿಧಾನವಾಗಿಯೇ ಬದಲಾಗುತ್ತಿವೆ.

ನಾನು ಪ್ರತಿ ಹಂತದಲ್ಲೂ ನನ್ನ ಸ್ನೇಹಿತರಿಗೆ ಸಹಾಯ ಮಾಡಲು ಬಯಸುತ್ತೇನೆ ಮತ್ತು ಅವರು ತಮ್ಮ ಹೊಸ ಉದ್ಯಮದಲ್ಲಿ ಯಶಸ್ವಿಯಾಗುತ್ತಾರೆ ಎಂಬ ಭರವಸೆ ನನಗಿದೆ ಎಂದು ಎಂದು ಸಮೀಕ್ಷಾ ಹೇಳಿದರು.

Exit mobile version