ಇರಾನ್ ಬೆಂಬಲಿತ ಹೌತಿ ಉಗ್ರರ ವಿರುದ್ಧ ಯುದ್ದಕ್ಕಿಳಿದ ಅಮೇರಿಕಾ – ಬ್ರಿಟನ್ ಸೇನೆ

New Delhi: ಕೆಂಪು ಸಮುದ್ರದ ಮೇಲೆ ನಿರಂತರ ದಾಳಿಯ ನಂತರ ಯೆಮೆನ್ನಲ್ಲಿರುವ ಇರಾನ್ (Iran) ಬೆಂಬಲಿತ ಹೌತಿ ಉಗ್ರರ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ ಸೇನೆಗಳು ಜಂಟಿಯಾಗಿ ಭಾರಿ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿವೆ.

ಮೂಲಗಳ ಪ್ರಕಾರ, ಯುನೈಟೆಡ್ ಸ್ಟೇಟ್ಸ್ (United States) ಮತ್ತು ಬ್ರಿಟನ್ ಸೇನೆಗಳು, ಯೆಮೆನ್ನಲ್ಲಿರುವ ಹೌತಿ ಉಗ್ರರ ನೆಲೆಗಳ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ಆರಂಭಿಸಿವೆ. ಇರಾನ್ ಬೆಂಬಲಿತ ಹೌತಿ ಉಗ್ರರ ಗುಂಪು ಕೆಂಪು ಸಮುದ್ರದಲ್ಲಿ ಸಂಚರಿಸುವ ಅಂತರರಾಷ್ಟ್ರೀಯ ಸಾಗಾಣಿಕ ಹಡಗುಗಳನ್ನು ಗುರಿಯಾಗಿಸಲು ಪ್ರಾರಂಭಿಸಿದ ನಂತರ ಅಮೇರಿಕಾ ಮತ್ತು ಬ್ರಿಟನ್ (Britain) ನೇಕ ಬಾರಿ ಹೌತಿ ಉಗ್ರರಿಗೆ ಎಚರಿಕೆಯನ್ನು ನೀಡಿದ್ದವು.

ಇನ್ನು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ (Joe Biden) ಹೌತಿ ಉಗ್ರರಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದು, ಅಗತ್ಯವಿದ್ದರೆ ಮುಂದಿನ ಕ್ರಮವನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ. ಈ ಉದ್ದೇಶಿತ ಸ್ಟ್ರೈಕ್ಗಳು ಯುನೈಟೆಡ್ ಸ್ಟೇಟ್ಸ್ ಮತ್ತು ನಮ್ಮ ಪಾಲುದಾರರು ನಮ್ಮ ಸಿಬ್ಬಂದಿ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಅಥವಾ ನ್ಯಾವಿಗೇಷನ್ (Navigation) ಸ್ವಾತಂತ್ರ್ಯವನ್ನು ಹಾಳುಮಾಡಲು ಅನುಮತಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವಾಗಿದೆ ಎಂದು ಬಿಡೆನ್ ಹೇಳಿದ್ದಾರೆ. ಇನ್ನೊಂದೆಡೆ ಬ್ರಿಟನ್ನ ರಕ್ಷಣಾ ಸಚಿವಾಲಯವು “ಹೌತಿ ಉಗ್ರರು ವ್ಯಾಪಾರಿ ಶಿಪ್ಪಿಂಗ್ಗೆ ಬೆದರಿಕೆ ಹಾಕುವ ಅವರ ಸಾಮರ್ಥ್ಯಕ್ಕೆ ತೀವ್ರ ಹೊಡೆತ ನೀಡಿದ್ದೇವೆ ಎಂದು ಹೇಳಿದೆ.

ಅಮೆರಿಕ ಮತ್ತು ಬ್ರಿಟನ್ ಸೇನೆಗಳು, ವಿಮಾನ, ಹಡಗು ಮತ್ತು ಜಲಾಂತರ್ಗಾಮಿ ನೌಕೆಗಳ ಮೂಲಕ ದಾಳಿಗಳನ್ನು ನಡೆಸುತ್ತಿವೆ. ಹತ್ತಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿಗಳು ಹೌತಿಗಳ ಸೇನಾ ಸಾಮರ್ಥ್ಯಗಳನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿವೆ ಎಂದು ಅಮೇರಕಾದ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಯೆಮೆನ್ನ ಹೆಚ್ಚಿನ ಭಾಗವನ್ನು ನಿಯಂತ್ರಿಸುವ ಹೌತಿಗಳು, ಕೆಂಪು ಸಮುದ್ರದಲ್ಲಿ ಸಂಚರಿಸುವ ಹಡಗುಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ಗಳ (Drone) ಮೂಲಕ ದಾಳಿಗಳನ್ನು ನಡೆಸುತ್ತಿದ್ದಾರೆ. ತಮ್ಮ ದಾಳಿಗಳು ಪ್ಯಾಲೇಸ್ಟಿನಿಯನ್ ಇಸ್ಲಾಮಿಸ್ಟ್ ಗುಂಪು ಹಮಾಸ್ಗೆ ಬೆಂಬಲವಾಗಿದೆ ಎಂದು ಹೌತಿಗಳು ಹೇಳುತ್ತಾರೆ. ಹೌತಿಗಳು ಇಲ್ಲಿಯವರೆಗೆ 27 ಹಡಗುಗಳ ಮೇಲೆ ದಾಳಿ ಮಾಡಿದ್ದಾರೆ. ಭಾರತದ ಹಡಗುಗಳ ಮೇಲೂ ಈ ಹೌತಿ (Houthi) ಉಗ್ರರು ಇತ್ತೀಚೆಗೆ ದಾಳಿ ನಡೆಸಿದ್ದರು. ಭಾರತೀಯ ನೌಕೆಪಡೆಗಳು ಕೆಂಪು ಸಮುದ್ರದಲ್ಲಿ ಭದ್ರತೆಯನ್ನು ಹೆಚ್ಚಿಸಿವೆ.

Exit mobile version