ವರ್ತೂರು ಸಂತೋಷ್ ಧರಿಸಿದ್ದ ಹುಲಿ ಉಗುರು FSL ವರದಿಯಲ್ಲಿ ಖಚಿತವಾದರೆ ಮತ್ತಷ್ಟು ಸಮಸ್ಯೆಗಳು ಎದುರಾಗುವ ಸಾದ್ಯತೆ.

Karnataka: ಹುಲಿ ಉಗುರು ಪೆಂಡೆಂಟ್‌ (Pendant) ಧರಿಸಿರುವ ಪ್ರಕರಣಕ್ಕೆ (Varthur santhosh fsl report) ಸಂಬಂಧಿಸಿದಂತೆ ವರ್ತೂರ್ ಸಂತೋಷರವರನ್ನು (Varthu Santhosh)

ಬಿಗ್ ಬಾಸ್ ಮನೆಯಿಂದ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಅರೆಸ್ಟ್ ಮಾಡಿ ಕರೆದೊಯ್ದು ಅವರನ್ನು 14 ದಿನ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.ವನ್ಯಜೀವಿ ಸಂರಕ್ಷಣಾ ಕಾಯ್ದೆ 1972

ಅಡಿಯಲ್ಲಿ ತನಿಖೆ ಚುರುಕುಗೊಂಡಿದ್ದು FSL ವರದಿಯಲ್ಲಿ ವರ್ತೂರ್ ಸಂತೋಷ್ ರವರು ಧರಿಸಿರುವ ಉಗುರು ಹಲಿಯದ್ದೆ ಎಂದು ಖಚಿತವಾದರೆ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ಗೆ

ಮತ್ತಷ್ಟು ಸಮಸ್ಯೆಗಳು (Varthur santhosh fsl report) ಎದುರಾಗುವ ಸಾಧ್ಯತೆಗಳಿವೆ.

ಈ ಪ್ರಕರಣದ ತನಿಖೆಯನ್ನು ತನಿಖಾಧಿಕಾರಿ ಸುರೇಶ್ ರವರು ನಡೆಸುತ್ತಿದ್ದಾರೆ. ವರ್ತೂರು ಸಂತೋಷ್ ರವರು ಧರಿಸುತ್ತಿದ್ದ ಹುಲಿ ಉಗುರು ನಿಜವಾದದ್ದಾ, ಎಂದು FSL ವರದಿ ಮೂಲಕ ತಿಳಿದು

ಬರಬೇಕಿದೆ. ಅದು ನಿಜವಾದ ಹುಲಿ ಉಗುರು ಎಂದು ತಿಳಿದು ಬಂದರೆ,ಹುಲಿ ಉಗುರನ್ನು ಸಂತೋಷ್ ಗೆ ಯಾರು ನೀಡಿದ್ದು,ಯಾರು ಮಾರಿದ್ದು,ಇದರ ಮೂಲ ಎಲ್ಲಿದೆ ಎಂಬುದನ್ನು ತಿಳಿಯಬೇಕಾಗುತ್ತದೆ

ಆದರಿಂದ ಕಗ್ಗಲಿಪುರ ಅರಣ್ಯ ಅಧಿಕಾರಿಗಳು ಹಲವಾರು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಕಗ್ಗಲಿಪುರ ಅರಣ್ಯಾಧಿಕಾರಿಗಳು ನಡೆಸಿದ ತನಿಖೆಯನ್ನು ಹಾಗೂ FSL ವರದಿಯನ್ನು ಕೆಂದ್ರ ಹಾಗೂ ರಾಜ್ಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳಿಗೆ ನೀಡಲಿದ್ದಾರೆ ಕೇಂದ್ರ ಹಾಗೂ ರಾಜ್ಯ ಹುಲಿ ಸಂರಕ್ಷಣಾ

ಪ್ರಾಧಿಕಾರವು ವರದಿಯನ್ನು ಆದರಿಸಿ,ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳ ದಾಖಲೆಗಳನ್ನು ಪರಿಶೀಲನೆ ಮಾಡಲಿದ್ದಾರೆ.

ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ,ಕಾಳಿ ದಾಂಡೇಲಿ,ಭದ್ರಾ,ಅಲ್ಲದೇ ತಮಿಳುನಾಡಿನ ಅಣ್ಣಾಮಲೈ(Annamalai) ,ಸತ್ಯಮಂಗಳ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ

ಐದು ವರ್ಷದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಐದು ವರ್ಷಗಳಲ್ಲಿ ಹುಲಿಗಳನ್ನು ಬೇಟೆಯಾಡಿರುವುದು, ಮತ್ತೆ ಹುಲಿ ಮೃತ ದೇಹಗಳ ಪತ್ತೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.

ಇದನ್ನು ಓದಿ: ಸೈಬರ್ ಕ್ರೈಮ್: ಇಮೇಲ್‌ನಲ್ಲಿ ಬರುವ ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾನ್ ಮಾಡುತ್ತಿದ್ದರೆ ಇರಲಿ ಎಚ್ಚರ!

Exit mobile version