ಮತದಾರರಿಗೆ ವಿವಿಧ ಉಡುಗೊರೆಗಳ ಆಮಿಷ : ಕಾನುನೂ ಕ್ರಮಕ್ಕೆ ಚುನಾವಣೆ ಆಯೋಗ ಸೂಚನೆ

Bengaluru : ಚುನಾವಣಾ ಕಣ ರಂಗೇರುತ್ತಿದೆ. ಮತದಾರರನ್ನು ಓಲೈಸಲು ರಾಜಕೀಯ ನಾಯಕರು (attract voters through gifts) ನವರಂಗೀ ಆಟಗಳನ್ನು ಪ್ರಾರಂಭಿಸಿದ್ದಾರೆ.

ನಾನಾ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ಕುಕ್ಕರ್‌, ಸೀರೆ, ಮಿಕ್ಸರ್‌, ಟಿ.ವಿ, ಫ್ಯಾನ್ ಅಂತ ಬಗೆಬಗೆಯ ಉಡುಗೊರೆಗಳನ್ನು ನೀಡುತ್ತಿದ್ದಾರೆ.

ಇನ್ನು ಓಂಶಕ್ತಿ ದೇವಾಲಯಕ್ಕೆ, ಅಯ್ಯಪ್ಪ ಸ್ವಾಮಿ ಯಾತ್ರೆ, ಧರ್ಮಸ್ಥಳ ಯಾತ್ರೆ ಹೀಗೆ ನಾನಾ ಧಾರ್ಮಿಕ ಯಾತ್ರೆಗಳಿಗೆ ಪ್ರಾಯೋಜಕತ್ವ ನೀಡಿ ಮತದಾರರನ್ನು ಓಲೈಸುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಮತದಾರರಿಗೆ ಉಡುಗೊರೆ ನೀಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಅದು ಮಾಧ್ಯಮಗಳಲ್ಲೂ (Media)ಸುದ್ದಿಯಾಗಿ ಸದ್ದು ಮಾಡಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಇಂಥಾ ಕೃತ್ಯಗಳಿಗೆ ಬ್ರೇಕ್‌ ಹಾಕಲು ನಿರ್ಧರಿಸಿದೆ.

ಈ ಕುರಿತು ಮಾತನಾಡಿರುವ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾರವರು(Manoj Kumar Meena), ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ,

ಜನರಿಗೆ ತಮ್ಮ ಪಕ್ಷಕ್ಕೆ ಮತ ನೀಡಲು ಮತದಾರರಿಗೆ ಹಲವಾರು ಆಮಿಷಗಳನ್ನು ನೀಡುತಿರುವುದು ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿದೆ.

 ಇದನ್ನೂ ಓದಿ: ಬಜೆಟ್‌ನಲ್ಲಿ ಮೋದಿ ಸರ್ಕಾರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ : ಸಿದ್ದರಾಮಯ್ಯ

ಇಂಥಾ ಕೃತ್ಯಗಳಲ್ಲಿ ಯಾರು ತೊಡಗಿಸಿಕೊಳ್ತಾರೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಎಚ್ಚರಿಸಿದ್ದಾರೆ.

ಮತ ಚಲಾಯಿಸುವುದು ಪ್ರತಿಯೊಬ್ಬ ಮತದಾರನ ಹಕ್ಕು. ಇದನ್ನು ದುರುಪಯೋಗ ಮಾಡಿಕೊಳ್ಳಬಾರದು.

ಮತದಾರರಿಗೆ ಕುಕ್ಕರ್, ಸೀರೆ ಹಾಗೂ ಮದ್ಯಪಾನ ಸೇರಿದಂತೆ ವಿವಿಧ ರೀತಿಯ ಉಡುಗೊರೆಗಳ ಆಮಿಷಗಳನ್ನು, ಕೂಪನ್‌ಗಳ ಮೂಲಕ ವಿತರಿಸಲಾಗುತ್ತಿದ್ದು, ಅಬಕಾರಿ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು.

ಮಧ್ಯಪಾನ ಸೇವನೆಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಕೆಲವು ಜನರು ಮಧ್ಯದದಾಸರಾಗಿದ್ದು , ಇದರಿಂದ ಎಷ್ಟೋ ಕುಟಂಬಗಳು ಬೀದಿಗೆ ಬಂದಿರುವ ನಿದರ್ಶನಗಳಿವೆ. ಹಾಗಾಗಿ ಮದ್ಯ ಹಂಚೋ ಪ್ರಕರಣಗಳತ್ತ ಗಮನಹರಿಸಲಾಗುವುದು.

ಎಲ್ಲಿಯಾದ್ರೂ ಮತದಾರರು ಮದ್ಯ ಹಂಚೋ ಪ್ರಕರಣಗಳು ಗಮನಕ್ಕೆ ಬಂದ್ರೆ ಈ ಬಗ್ಗೆ ಸಾರ್ವಜನಿಕರು ದೂರು ನೀಡಬೇಕಾಗಿ (attract voters through gifts) ಮುಖ್ಯ ಚುನಾವಣಾ ಅಧಿಕಾರಿ ಮತದಾರರಲ್ಲಿ ಮನವಿ ಮಾಡಿದ್ದಾರೆ.


ಅಷ್ಟೇ ಅಲ್ಲ ಹಣ ಹಾಗೂ ಬಂಗಾರದಂತಹ ಬೆಲೆ ಬಾಳುವ ವಸ್ತುಗಳ ಸಾಗಾಣಿಕೆ ಮೇಲೆ ಗಮನಹರಿಸಲಾಗುವುದು.

ಇದಕ್ಕೆ ಸಂಬಂಧಿಸಿದಂತೆ ರೈಲು, ಬಂದರು ಹಾಗೂ ವಿಮಾನ ನಿಲ್ದಾಣಗಳಲ್ಲಿ ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಬೇಕು. ಹಣದ ರೂಪದಲ್ಲಿ & ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ನಡೆಯುವ ಚಲಾವಣೆಗಳ ಮೇಲೆ ಹೆಚ್ಚಿನ ಎಚ್ಚರವಹಿಸಬೇಕು.

ಸಮಾಜಘಾತುಕ ಭಾಷಣ, ಸಮಾಜದ ನೆಮ್ಮದಿ ಕದಡುವ ಸಭೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.

Exit mobile version