ಈ ಲಕ್ಷಣಗಳಿದ್ದರೆ ಹೊಟ್ಟೆಯ ಕ್ಯಾನ್ಸರ್ ಇರಬಹುದು ಎಚ್ಚರ..!

Beware of Stomach Cancer: ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಉದರ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಗಂಭೀರ ಆರೋಗ್ಯ ಸಮಸ್ಯೆಯಾಗಿವೆ. ಈ ಸಮಸ್ಯೆ ಕೆಲವೊಮ್ಮೆ ಹೊಟ್ಟೆಯ ಕ್ಯಾನ್ಸರ್ (Stomach Cancer) ಕೂಡಾ ಆಗಿರಬಹುದು. ಹೊಟ್ಟೆಯ ಕ್ಯಾನ್ಸರ್ನ ಲಕ್ಷಣಗಳು ಇತರೆ ಹೊಟ್ಟೆಯ ಸಮಸ್ಯೆಗಳನ್ನು ಹೋಲುತ್ತವೆ, ಇದು ಕೆಲವೊಮ್ಮೆ ಗುರುತಿಸುವಲ್ಲಿ ವಿಳಂಬವಾಗುತ್ತದೆ. ಹೀಗಾಗಿ ಈ ಕುರಿತು ಹೆಚ್ಚಿನ ಜಾಗೃತಿ ವಹಿಸುವುದು ಅತಿಮುಖ್ಯ.

ಹೊಟ್ಟೆಯ ಕ್ಯಾನ್ಸರ್ನ ಮುಖ್ಯ ಲಕ್ಷಣಗಳು :
ಹೊಟ್ಟೆಯೊಳಗಿನ ಆಮ್ಲ ಹಿಮ್ಮುಖ ಹರಿವು
ಊಟದ ನಂತರ ಅಥವಾ ಮೊದಲು ಎದೆಯುರಿ
ಊಟ ಮಾಡಲು ತೊಂದರೆಯಾಗುವುದು
ಅನಾರೋಗ್ಯ
ದೇಹಕ್ಕೆ ಶಕ್ತಿಯ ಕೊರತೆ
ಪದೇ ಪದೇ ತೇಗು ಬರುವುದು
ಬೇಗನೆ ಹೊಟ್ಟೆ ತುಂಬಿದ ಭಾವನೆ
ಹೊಟ್ಟೆಯ ಮೇಲ್ಭಾಗದಲ್ಲಿ ನೋವು
ತೂಕವನ್ನು ಕಳೆದುಕೊಳ್ಳುವುದು
ಹಸಿವಿನ ಕೊರತೆ

ಹೊಟ್ಟೆಯ ಕ್ಯಾನ್ಸರ್ಗೆ ಪ್ರಮುಖ ಕಾರಣ :
ಗ್ಯಾಸ್ಟ್ರಿಕ್ (Gastric) ಕ್ಯಾನ್ಸರ್ಗೆ ಪ್ರಮುಖ ಕಾರಣವೆಂದರೆ ಆಸಿಡ್ ರಿಫ್ಲಕ್ಸ್. ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಆಹಾರವನ್ನು ಸೇವಿಸುವ ಜನರು ಆಸಿಡ್ ರಿಫ್ಲಕ್ಸ್ ಸಮಸ್ಯೆಯಿಂದ ಹೆಚ್ಚು ಬಳಲುತ್ತಿದ್ದಾರೆ. ದೀರ್ಘಕಾಲದ ಆಸಿಡ್ ರಿಫ್ಲಕ್ಸ್ (Acid Reflex) ಹೊಟ್ಟೆಯ ಮೇಲ್ಭಾಗದ ಒಳಪದರವನ್ನು ಹಾನಿಗೊಳಿಸುತ್ತದೆ. ನಂತರ ಇದು ಹೊಟ್ಟೆಯ ಕ್ಯಾನ್ಸರ್ಗೆ ಕಾರಣವಾಗುತ್ತದೆ.

ಆಸಿಡ್ ರಿಫ್ಲಕ್ಸ್ನ ಲಕ್ಷಣಗಳು :
ಸದಾ ಎದೆಯುರಿ
ಆಹಾರ ಹಿಂತಿರುಗುವುದರಿಂದ ಬಾಯಿಯಲ್ಲಿ ನೀರು ಬರುವುದು
ಎದೆಯ ಮೇಲ್ಭಾಗದಲ್ಲಿ ನೋವು.
ನುಂಗಲು ತೊಂದರೆ

ಆಸಿಡ್ ರಿಫ್ಲಕ್ಸ್ ಪರಿಹಾರಗಳು :
ಹೊಟ್ಟೆಯ ಆಮ್ಲವು ಅನ್ನನಾಳಕ್ಕೆ ಮತ್ತೆ ಹರಿಯದಂತೆ ತಡೆಯಲು ಮಲಗುವಾಗ ಹಾಸಿಗೆಯನ್ನು ಎತ್ತರಿಸಿ.
ತೂಕವನ್ನು ಕಳೆದುಕೊಳ್ಳುವುದು
ಬಿಗಿಯಾದ ಬೆಲ್ಟ್ (Belt) ಧರಿಸಬಾರದು.
ಹೊಟ್ಟೆಯ ಮೇಲೆ ಒತ್ತಡ ಹೆಚ್ಚದಂತೆ ನೋಡಿಕೊಳ್ಳುವುದು.
ಮಸಾಲೆಯುಕ್ತ ಆಹಾರಗಳನ್ನು ಸೇವಿಸಬಾರದು.
ಸಿಟ್ರಸ್ ಹಣ್ಣುಗಳು, ಟೊಮೆಟೊಗಳು, ಚಾಕೊಲೇಟ್ (Chocolate), ಕೆಫೀನ್, ಕರಿದ ಆಹಾರಗಳನ್ನು ಸೇವಿಸಬಾರದು.
ಒಂದೇ ಬಾರಿಗೆ ಹೆಚ್ಚು ತಿನ್ನಬಾರದು.
ಊಟದ ನಡುವೆ ನೀರು ಕುಡಿಯಬಾರದು.
ಊಟದ ನಂತರ ಅಥವಾ ತಕ್ಷಣ ಹಾಲು ಕುಡಿಯಬಾರದು.

Exit mobile version