ದಾಸ್ತಾನು ಇದೆ ಅಂತ ಜಾಸ್ತಿ ಅಕ್ಕಿ ಕೊಡಲಾಗದು, ಎಫ್ ಸಿ ಐ ಪ್ರಧಾನ ವ್ಯವಸ್ಥಾಪಕ ಸ್ಪಷ್ಟನೆ:

Bengaluru: ನಮ್ಮಲ್ಲಿ ಅಕ್ಕಿ ದಾಸ್ತಾನಿದ್ದರೂ ಅನ್ನ ಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದು (bhupenra-singh-press-meeting) ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಪ್ರಧಾನ

ವ್ಯವಸ್ಥಾಪಕ ಭೂಪೇಂದ್ರ ಸಿಂಗ್‌ ಭಾಟಿ (Bhupendra Singh Bhati) ಅವರು ಸ್ಪಷ್ಟಪಡಿಸಿದ್ದಾರೆ. ಈಗಲೇ ಅಕ್ಕಿ ಖಾಲಿ ಆದರೆ ಕಷ್ಟ ಎಂದಿರುವ ಅವರು ಕರ್ನಾಟಕ (Karnataka) ಮಾತ್ರವಲ್ಲದೆ ಯಾವುದೇ

ರಾಜ್ಯಕ್ಕೂ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನ್ನ ಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಪ್ರಸ್ತುತ ನೀಡುತ್ತಿರುವ 5 ಕೆಜಿ ಅಕ್ಕಿಗೂ ಹಾಹಾಕಾರ ಬಂದೊದಗಲಿದೆ

ಎಂದು ಅವರು (bhupenra-singh-press-meeting) ನೀಡಿದ್ದಾರೆ.

ಕರ್ನಾಟಕ ಮಾತ್ರವಲ್ಲದೆ ಯಾವುದೇ ರಾಜ್ಯಕ್ಕೂ “ನಮ್ಮಲ್ಲಿ ಅಕ್ಕಿ ಗೋಡೌನುಗಳು (Godown) ಇದ್ದರೂ ಅನ್ನ ಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ”. ಎಂದು ಭಾರತೀಯ

ಆಹಾರ ನಿಗಮದ (ಎಫ್‌ಸಿಐ) ಪ್ರಧಾನ ವ್ಯವಸ್ಥಾಪಕ ಭೂಪೇಂದ್ರ ಸಿಂಗ್‌ ಭಾಟಿ (Bhupendra Singh Bhati) ತಿಳಿಸಿದರು. ಕರ್ನಾಟಕದಲ್ಲಿ ಅನ್ನ ಭಾಗ್ಯ ಯೋಜನೆಯಡಿ ಕೊಡುತ್ತಿರುವ 5 ಕೆಜಿ ಅಕ್ಕಿ ಜತೆಗೆ,

ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಪೂರೈಸಲು ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ಕೇಂದ್ರ ಸರಕಾರ ನಿರಾಕರಿಸಿದ ಕಾರಣ ಈ ವಿಚಾರ ರಾಜ್ಯ ಹಾಗೂ ಕೇಂದ್ರ ಸರಕಾರಗಳ ನಡುವೆ ವಾಗ್ವಾದಕ್ಕೆ ಅಣಿಮಾಡಿಕೊಟ್ಟಿತ್ತು.

ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತೀಯ ಆಹಾರ ನಿಗಮದ ಪ್ರಾದೇಶಿಕ ಕಚೇರಿಯಲ್ಲಿ “ಅನ್ನ ಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ಕೊಟ್ಟಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರಸ್ತುತ

ನೀಡುತ್ತಿರುವ 5 ಕೆಜಿ(Kg) ಅಕ್ಕಿಗೂ ಸಂಚಕಾರ ಬಂದೊದಗಲಿದೆ,” ಎಂದರು.

ಇದನ್ನು ಓದಿ: ಅಬಕಾರಿ ಸುಂಕ ಹೆಚ್ಚಳ, ಮದ್ಯದ ಬೆಲೆ ಇಂದಿನಿಂದಲೇ ಶೇ.20ರಷ್ಟು ಏರಿಕೆ : ಮದ್ಯ ಪ್ರಿಯರಿಂದ ವಿರೋಧ

”ಗೋಧಿ ಮತ್ತು ಭತ್ತ ಬೆಳೆಯುವ ಉತ್ತರ ಭಾರತದ ರಾಜ್ಯಗಳಲ್ಲಿ ಅತಿಯಾದ ಮಳೆಯಿಂದ ಪ್ರವಾಹ ಉಂಟಾಗುತ್ತಿದೆ. ಇನ್ನೊಂದೆಡೆ ಮಳೆ ಇಲ್ಲದೆ ಬರಗಾಲ ಉಂಟಾಗಿದೆ. ಪ್ರವಾಹದಿಂದ ಮಣ್ಣಿನ ಫಲವತ್ತತೆ

ಕೊಚ್ಚಿ ಹೋಗಿದ್ದು, ಇದು ಮುಂದಿನ ಕೆಲವು ವರ್ಷ ಬೆಳೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸದ್ಯ ದಾಸ್ತಾನು ಇಟ್ಟುಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಕೊರತೆ ಕಡಿಮೆ ಮಾಡಲು

ಸಹಕಾರಿಯಾಗಲಿದೆ,” ಎಂದು ಹೇಳಿದರು.

ಅಕ್ಕಿ ಮತ್ತು ಗೋಧಿ ಖರೀದಿಗೆ ಪ್ರತಿ ಬುಧವಾರ ಭಾರತೀಯ ಆಹಾರ ನಿಗಮದಿಂದ ಇ-ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಇದರಲ್ಲಿ ಖಾಸಗಿಯವರು ಭಾಗವಹಿಸಿ ಮುಕ್ತ ಮಾರುಕಟ್ಟೆ ದರದಲ್ಲಿ ಅಕ್ಕಿ, ಗೋಧಿ

ಖರೀದಿಸಬಹುದಾಗಿದೆ, ನಿಗಮವು ಅಕ್ಕಿ ಮತ್ತು ಗೋಧಿ ಖರೀದಿಸಲು ಬೆಲೆ ನಿಗದಿಪಡಿಸಿದೆ. ಕೇಂದ್ರ ಸರಕಾರವು ದೇಶಾದ್ಯಂತ ಒಎಂಎಸ್‌ಎಸ್‌ (OMSS) ಯೋಜನೆಯ ಮೂಲಕ ಗೋಧಿ

ಮಾರಾಟದ ಮೀಸಲು ಬೆಲೆಯನ್ನು ಪರಿಷ್ಕರಿಸಿದೆ.

ಈಗ, ಸರಾಸರಿ ಗುಣಮಟ್ಟ (ಎಫ್‌ಎಕ್ಯೂ) ಮತ್ತು ನ್ಯಾಯೋಚಿತ ಅಡಿಯಲ್ಲಿ ಗೋಧಿ ಮೀಸಲು ಬೆಲೆ ಭಾರತದೆಲ್ಲೆಡೆ ಪ್ರತಿ ಕ್ವಿಂಟಾಲ್‌ಗೆ 2,150 ರೂ. ಮತ್ತು ರಿಲ್ಯಾಕ್ಸ್ಡ್‌ ಸ್ಪೆಸಿಫಿಕೇಷನ್ಸ್‌ (Relaxed Specifications)

ಅಡಿಯಲ್ಲಿ (ಯುಆರ್‌ಎಸ್‌) ಪ್ರತಿ ಕ್ವಿಂಟಾಲ್‌ಗೆ 2,125 ರೂ. ನಿಗದಿಪಡಿಸಲಾಗಿದೆ. ಡಿಸೆಂಬರ್‌ (December) 31ರವರೆಗೆ ಈ ಹೊಸ ಮೀಸಲು ಬೆಲೆಯನ್ನು ಪ್ಯಾನ್‌ ಇಂಡಿಯಾಕ್ಕೆ(Pan India) ನಿಗದಿಪಡಿಸಲಾಗಿದೆ.

ಹರಾಜಿನಲ್ಲಿ ಈ ಹಿಂದೆ ಮ್ಯಾಕ್ಸಿಮಮ್ (Maximum) 3,000 ಮೆಟ್ರಿಕ್‌ ಟನ್‌ (Metric Tun) ಧಾನ್ಯಗಳ ಖರೀದಿಗೆ ಅವಕಾಶ ಇತ್ತು. ಇದರಿಂದ ಸಣ್ಣ ಹಾಗೂ ಮಧ್ಯಮ ಖರೀದಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು

ಹಾಗೂ ಈ ಯೋಜನೆಯು ಜಾಸ್ತಿ ಜನರನ್ನು ತಲುಪಲು ಸಾಧ್ಯವಾಗಲಿದೆ. ಇದರೊಂದಿಗೆ ಖರೀದಿ ಮಾಡಿದ ಧಾನ್ಯಗಳು ಕೂಡಲೇ ಸಾರ್ವಜನಿಕರಿಗೆ ತಲುಪಲು ಸಾಧ್ಯವಾಗಲಿದೆ ಎಂದು ನಿಗಮ ಸಮರ್ಥನೆ ನೀಡಿದೆ.

ಭವ್ಯಶ್ರೀ ಆರ್.ಜೆ

Exit mobile version