ಮೆಂತ್ಯ ಬೀಜದಲ್ಲಿ ಅಡಿಗಿದೆ ಆರೋಗ್ಯದ ಗುಟ್ಟು..!

ಆಧುನಿಕ ಜೀವನಶೈಲಿಯಿಂದ 3-40 ವರ್ಷಕ್ಕೆ ಅನೇಕ ಜನರು ಅನೇಕ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ದೇಹದಲ್ಲಿ ಮೆಟಾಬಾಲಿಕ್ (fenugreek seeds health benefits) ಸಿಂಡ್ರೋಮ್

(Metabolic syndrome) ಹೆಚ್ಚುತ್ತಿದೆ. ಇದರಿಂದಾಗಿಯೇ ಅನೇಕ ಗಂಭೀರ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಆರೋಗ್ಯಕರ ದೇಹದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು

ಅಬಹು ಮುಖ್ಯವಾಗಿದೆ. ಜಂಕ್ ಫುಡ್ ಗಳು (Junk Food) , ಮಸಾಲೆಭರಿತ ಆಹಾರ, ಪ್ಯಾಕ್ ಮಾಡಿದ ಆಹಾರ, ನಮ್ಮ ದಿನನಿತ್ಯದ ಜೀವನಶೈಲಿಯೊಂದಿಗೆ ಸೇರಿಕೊಂಡು ಸಕ್ಕರೆ ರೋಗದ

ಅಪಾಯವನ್ನು ಹೆಚ್ಚಿಸುತ್ತಿದೆ. ಇಂತಹ ರೋಗಗಳಿಗೆ ಮೆಂತ್ಯವು ಅತ್ಯುತ್ತಮ ಆಯ್ಕೆಯಾಗಿದೆ. ಮೆಂತ್ಯ ಸೇವಿಸುವುದರಿಂದಾಗುವ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ.

• ಮೆಂತ್ಯವು ಮೆಟಾಬಾಲಿಕ್ ಸಿಂಡ್ರೋಮ್ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡಲಿದೆ. ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಮೆಂತ್ಯ ಎಲೆಗಳನ್ನು ಮೇಥಿ ಎಂದು ಕರೆಯಲಾಗುತ್ತದೆ.

ಇದರ ಒಣಗಿದ ಎಲೆಗಳನ್ನು ಕಸೂರಿ ಮೇಥಿ (Kasuri Methi) ಎಂದು ಕರೆಯಲಾಗುತ್ತದೆ. ಆಯುರ್ವೇದದ ಪ್ರಕಾರ ಇದು ಅನೇಕ ರೋಗಗಳಿಗೆ ದಿವ್ಯ ಔಷಧಿಯಾಗಿದೆ.

ನಿಮಗೆ ಹೃದಯದ ಆರೋಗ್ಯ ಬೇಕಾ? ಹಾಗಾದ್ರೆ ಈ 5 ಆಹಾರ ತಿನ್ನಲೇ ಬೇಡಿ !

• ಮೆಂತ್ಯವು ಮಲಬದ್ಧತೆ ಮತ್ತು ಜೀರ್ಣದ ಸಮಸ್ಯೆಗಳಿಗೆ ಉಪಶಮನ ನೀಡುತ್ತದೆ. ಹೊಟ್ಟೆ ಮತ್ತು ಕರುಳಿನ ಒಳಪದರವನ್ನು ಆವರಿಸುತ್ತದೆ. ಇದು ಯಕೃತ್ತನ್ನು ನಿರ್ವಿಷಗೊಳಿಸಿ ಹಾನಿಕಾರಕ ವಿಷವನ್ನು

ಹೊರಹಾಕಲು ಸಹಾಯ (fenugreek seeds health benefits) ಮಾಡುತ್ತದೆ.

• ಮೆಂತ್ಯವು ಗ್ಯಾಲಕ್ಟೋಮನ್ನನ್ ನ್ನು (Galactomannan) ಸಹ ಒಳಗೊಂಡಿದೆ. ಇದು ನೈಸರ್ಗಿಕ ಕರಗುವ ಫೈಬರ್ ಆಗಿದ್ದು ಅದು ರಕ್ತದಲ್ಲಿ ಸಕ್ಕರೆ ಹೀರಿಕೊಳ್ಳುವ ದರವನ್ನು ನಿಧಾನಗೊಳಿಸುತ್ತದೆ.

• ಮೆಂತ್ಯದಲ್ಲಿ ಟ್ರೈಗೋನೆಲಿನ್ (Trigonelline), ವಿಟಮಿನ್ ಎ, ಸಪೋನಿನ್ಗಳು, ಫೈಬರ್ಗಳು, ಮತ್ತು ಸಿ, ಕ್ಯಾಲ್ಸಿಯಂ, ಕಬ್ಬಿಣ, ಪ್ರೋಟೀನ್ಗಳು, ಲೈಸಿನ್, ಎಲ್-ಟ್ರಿಪ್ಟೊಫಾನ್, ಕಾರ್ಬೋಹೈಡ್ರೇಟ್ಗಳು

(Carbohydrates) ಮತ್ತು ಖನಿಜಗಳ ಹೆಚ್ಚಿನ ಅಂಶಗಳಂತಹ ಸಂಯುಕ್ತಗಳು ಮತ್ತು ಫೈಟೊಕೆಮಿಕಲ್ಗಳ ಉತ್ತಮ ಮೂಲವಾಗಿದೆ. ಇದು ದೇಹದ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿವೆ.

• ಅದೇ ರೀತಿ ಜೀರ್ಣಕ್ರಿಯೆ ಮತ್ತು ಕಾರ್ಬೋಹೈಡ್ರೇಟ್ ಗಳ (Carbonhydrates) ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಕೂಡಾ

ಮೆಂತ್ಯ ಸಹಾಯ ಮಾಡುತ್ತದೆ.

• ಮೆಂತ್ಯವು ಅಮೈನೋ ಆಮ್ಲವನ್ನು ಹೊಂದಿದೆ. ಇದು ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುವ ಮತ್ತು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ. ಟೈಪ್ 2 ಡಯಾಬಿಟಿಸ್ಗೆ (Diabetes)

ಮಧುಮೇಹ-ವಿರೋಧಿ ಗುಣಲಕ್ಷಣಗಳನ್ನು ಮೆಂತ್ಯ ಹೊಂದಿದೆ.

• ಮೆಂತ್ಯ ಬೀಜಗಳಲ್ಲಿ ಕಂಡುಬರುವ ಲೋಳೆಯು ಆಸಿಡ್ ರಿಫ್ಲಕ್ಸ್ ವಿರುದ್ಧ ಪರಿಣಾಮಕಾರಿಯಾಗಿದೆ. ಜಠರಗರುಳಿನ ಉರಿಯೂತವನ್ನು ಶಮನಗೊಳಿಸುತ್ತದೆ. ಅಜೀರ್ಣವನ್ನು ನಿವಾರಿಸುತ್ತದೆ.

Exit mobile version