ಎರಡು ಕಂಚಿನ ಪದಕ ಗೆದ್ದು, ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂದು ನಿರೂಪಿಸಿದ 81 ವರ್ಷದ ಮಾಜಿ ಶಾಸಕ!

MJ Jacob

ಫಿನ್‌ಲ್ಯಾಂಡ್‌ನ(Finland) ಟಾಂಪೆರೆಯಲ್ಲಿ ನಡೆದ ವರ್ಲ್ಡ್‌ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ನೂರು ಮೀಟರ್‌ ಓಟದ ಸ್ಪರ್ಧೆಯಲ್ಲಿ, ಭಾರತದ 94 ವರ್ಷ ವಯಸ್ಸಿನ ಭಗವಾನಿ ದೇವಿ(Bhagwani Devi) ಚಿನ್ನದ ಪದಕ(Gold Medal) ಗೆದ್ದು, ಗೆಲುವಿಗೆ ವಯಸ್ಸು ಅಡ್ಡಿಯಲ್ಲ ಎಂದು ಸಾಬೀತುಪಡಿಸಿದ್ದು, ನಿಮಗೆಲ್ಲಾ ತಿಳಿದೇ ಇದೆ. ಇವರು 94 ನಿಮಿಷದಲ್ಲಿ 100 ಮೀಟರ್‌ ಗುರಿ ತಲುಪಿ ಚಿನ್ನಕ್ಕೆ ಮುತ್ತಿಕ್ಕಿದ್ದರು. ಇದೇ ಚಾಂಪಿಯನ್‌ಶಿಪ್‌ನಲ್ಲಿ ಕೇರಳದ(Kerala) ಮಾಜಿ ಎಂಎಲ್‌ಎ(MLA) 82 ವರ್ಷ ವಯಸ್ಸಿನ ಎಂಜೆ ಜೇಕಬ್‌(Jacob) ಎರಡು ಕಂಚಿನ ಪದಕ ಗೆದ್ದಿದ್ದಾರೆ.


ಹೌದು, ಕೇರಳದ ಮಾಜಿ ಎಂಎಲ್‌ಎ ಆಗಿರುವ ಸಿಪಿಎಂನ ಎಂ.ಜೆ. ಜೇಕಬ್‌(MJ Jacob) ಅವರು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇವರು 80 ಮತ್ತು 200 ಮೀಟರ್‌ ಹರ್ಡಲ್ಸ್‌ನಲ್ಲಿ ಪದಕ ಗೆದ್ದಿದ್ದಾರೆ. ಇವರು ಈ ವರ್ಷದ ಆರಂಭದಲ್ಲಿ ಕೇರಳ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ 80 ಮೀಟರ್‌ ಹರ್ಡಲ್ಸ್‌ ಮತ್ತು 200 ಮೀಟರ್‌ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಹಿಂದೆ ಏಷ್ಯಾ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ಕೂಡ ಚಿನ್ನದ ಪದಕ ಗೆದ್ದಿದ್ದರು. ಎಂಜೆ ಜೇಕಬ್‌ ಅವರು 2006 ರಲ್ಲಿ ಸಿಪಿಎಂ ಪಕ್ಷದಿಂದ ವಿಧಾನಸಭಾ ಸ್ಥಾನವನ್ನು ಗೆದಿದ್ದರು. ಆ ಚುನಾವಣೆಯಲ್ಲಿ ಹಾಲಿ ಶಾಸಕ ಮತ್ತು ಮಾಜಿ ಸಚಿವ ದಿವಂಗತ ಟಿಎಂ ಜೇಕಬ್‌ ಅವರನ್ನು ಸೋಲಿಸಿದರು.

ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಪಿರಾವಂನಲ್ಲಿ ಇವರ ಗೆಲುವು ಆಗ ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಇವರು ತಿರುಮರಡಿ ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿದ್ದರು. ಎರ್ನಾಕುಲಂ ಜಿಲ್ಲಾ ಪಂಚಾಯತ್‌ನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ವರ್ಲ್ಡ್‌ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಜೂನ್‌ 29 ರಿಂದ ಜುಲೈ 10 ರವರೆಗೆ ಫಿನ್‌ಲ್ಯಾಂಡ್‌ನ ಟಾಂಪೆರೆಯಲ್ಲಿ ನಡೆದಿತ್ತು. 35 ವರ್ಷ ಮತ್ತು ಅಧಿಕ ವಯಸ್ಸಿನವರಿಗೆ ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶವಿತ್ತು.

Exit mobile version