ಜಿ-20 ಶೃಂಗಸಭೆ : ಭದ್ರತೆಗೆ AI ಕ್ಯಾಮರಾ ; ಎಲ್ಲೆಡೆ ಸ್ನೈಪರ್ಸ್ ; ಭದ್ರಕೋಟೆಯಾದ ದೆಹಲಿ..!

New Delhi: ಈ ಬಾರಿಯ ಜಿ-20 (G-20) ಒಕ್ಕೂಟದ ಅಧ್ಯಕ್ಷ ಸ್ಥಾನ ಹೊಂದಿರುವ ಭಾರತದಲ್ಲಿ ಸೆಪ್ಟೆಂಬರ್ (G20 Summit 2023 in Delhi) 9 ಮತ್ತು 10ರಂದು ಜಿ-20 ಶೃಂಗಸಭೆ

ನಡೆಯಲಿದ್ದು, ಈ ಸಭೆಗೆ ಅನೇಕ ದೇಶಗಳ ಅಧ್ಯಕ್ಷರ, ಪ್ರಧಾನಿಗಳು, ಸಚಿವರು ಸೇರಿದಂತೆ ಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ನವದೆಹಲಿಯಲ್ಲಿ ಭಾರೀ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಈಗಾಗಲೇ ದೆಹಲಿ ಪೊಲೀಸರು, ಅರೆಸೈನಿಕ ಪಡೆಗಳು ಮತ್ತು ಇತರ ಭದ್ರತಾ ಸಂಸ್ಥೆಗಳು ದೆಹಲಿ (G20 Summit 2023 in Delhi) ನಗರದಾದ್ಯಂತ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಿವೆ.

ಭದ್ರತೆಯನ್ನು ಬಿಗಿಗೊಳಿಸುವ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ನಗರದಲ್ಲಿ ನಡೆಯುವ ಎಲ್ಲ ಘಟನೆಗಳ ಮೇಲೆ ಕಣ್ಣಿಡಲು ಕೃತಕ ಬುದ್ದಿಮತ್ತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಅದಕ್ಕಾಗಿಯೇ

ಕೃತಕ ಬುದ್ದಿಮತ್ತೆ ಆಧಾರಿತ ಕ್ಯಾಮರಾಗಳನ್ನು (Camera) ಎಲ್ಲೆಡೆ ಹಾಕಲಾಗಿದೆ. ಇದರಿಂದ ಸಾಫ್ಟ್ ವೇರ್ ಅಲಾರಂಗಳನ್ನು (Software Alarm) ಬಳಸಿಕೊಂಡು ಅನುಮಾನಾಸ್ಪದ ಚಟುವಟಿಕೆಗಳನ್ನು

ಗುರುತಿಸಿ ಫಿಲ್ಟರ್ (Filter) ಮಾಡಲು ಸಾಧ್ಯವಾಗುತ್ತದೆ. ಈ ಕೃತಕ ಬುದ್ದಿಮತ್ತೆ ಆಧಾರಿಯ ಕ್ಯಾಮರಾಗಳು, ಅನುಮಾನಾಸ್ಪದ ಚಲನೆಗಳನ್ನು ಮಾಡುವುದು ಕಂಡುಬಂದರೆ, ತಕ್ಷಣ ಭದ್ರತಾ

ಸಿಬ್ಬಂದಿಯನ್ನು ಎಚ್ಚರಿಸುತ್ತವೆ.

ಸ್ನೈಪರ್ (Sniper) ನಿಯೋಜನೆ :
ಜಿ-20 (G-20) ಶೃಂಗಸಭೆಗೆ ವಿಶ್ವದ ಪ್ರಮುಖ ಗಣ್ಯರು ಆಗಮಿಸುವ ಹಿನ್ನಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಗಣ್ಯರ ಭದ್ರತೆಗಾಗಿ ಗಣ್ಯರು ಸಂಚರಿಸುವ ಮಾರ್ಗಗಳಲ್ಲಿರುವ ಕಟ್ಟಡಗಳ ಮೇಲೆ

ಸ್ನೈಪರ್ಗಳನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಭದ್ರತೆಗಾಗಿ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ) ಕಮಾಂಡೋಗಳು ಕೂಡಾ ನಿಯೋಜಿಸಲಾಗಿದೆ. ಇನ್ನು ಜಿ-20 ಶೃಂಗಸಭೆ ಕಾರ್ಯಕ್ರಮ

ಪ್ರಾರಂಭವಾಗುವ ಮೊದಲು, ಅಮೆರಿಕದ (America) CIA, ಇಂಗ್ಲೆಂಡ್ನ MI-6 ಮತ್ತು ಚೀನಾದ (China) MSS ಸೇರಿದಂತೆ ಅಂತರರಾಷ್ಟ್ರೀಯ ಗುಪ್ತಚರ ಸಂಸ್ಥೆಗಳ ತಂಡಗಳ ಜೊತೆಗೆ

ಭಾರತದ ಗುಪ್ತಚರ ಇಲಾಖೆ ಸಭೆ ನಡೆಸಿದ್ದು, ಭದ್ರತೆಯ ಕುರಿತು ಪರಿಶೀಲನೆ ನಡೆಸಲಾಗಿದೆ. ಗುಪ್ತಚರ ಸಹಕಾರದ ಮೂಲಕ ಉತ್ತಮ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

ಇನ್ನು ಭಾರತೀಯ ವಾಯುಪಡೆ ದೆಹಲಿಯ ಮೇಲಿನ ಆಕಾಶದಲ್ಲಿ ನಿರಂತರವಾಗಿ ಗಸ್ತು ತಿರುಗಲಿದ್ದು, ಯಾವುದೇ ಸಂಭಾವ್ಯ ದಾಳಿಗಳನ್ನು ಎದುರಿಸಲು ಡ್ರೋನ್ (Drone) ವಿರೋಧಿ ವ್ಯವಸ್ಥೆಗಳನ್ನು

ನಿಯೋಜಿಸಲಾಗಿದೆ. ಸುಮಾರು 1000 ಭದ್ರತಾ ಸಿಬ್ಬಂದಿಯನ್ನು ಒಳಗೊಂಡ “ವಿಶೇಷ 50” ತಂಡವನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿದ್ಧಪಡಿಸಿದೆ. ಈ ತಂಡ ವಿದೇಶಿ

ಗಣ್ಯರಿಗೆ ಭದ್ರತೆ ನೀಡಲಿದೆ.

KSET 2023 ಪರೀಕ್ಷೆ ಕುರಿತು ಕೆಇಎ ಪ್ರಕಟಣೆ: ಇಲ್ಲಿದೆ ಪ್ರಮುಖ ಮಾಹಿತಿ

ವಿದೇಶಿ ಗಣ್ಯರ ವಾಸ್ತವ್ಯ ಎಲ್ಲೆ..?
ಐಟಿಸಿ (ITC) ಮೌರ್ಯ ಹೋಟೆಲ್ನಲ್ಲಿ ಅಮೇರಿಕಾದ ಅಧ್ಯಕ್ಷ ಜೋ ಬೈಡನ್ (Joe Biden) ತಂಗಲಿದ್ದಾರೆ. ಈಗಾಗಲೇ 400 ರೂಮ್ಗಳನ್ನು ಬುಕ್ ಮಾಡಲಾಗಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್

ಮ್ಯಾಕ್ರೋನ್ (Emmanuel Macron) ಕ್ಲಾರಿಡ್ಜ್ ಹೋಟೆಲ್ನಲ್ಲಿ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ (Xi Jinping) ತಾಜ್ ಪ್ಯಾಲೇಸ್ ಹೋಟೆಲ್ನಲ್ಲಿ ತಂಗಿದರೆ, ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak)

ಶಾಂಗ್ರಿ-ಲಾ ಹೋಟೆಲ್ನಲ್ಲಿ ತಂಗಲಿದ್ದಾರೆ. ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಇಂಪೀರಿಯಲ್ ಹೋಟೆಲ್ನಲ್ಲಿ ತಂಗಲಿದ್ದಾರೆ. ಇಟಲಿ (Italy) ಮತ್ತು ಸಿಂಗಾಪುರದ (Singapura)

ಪ್ರತಿನಿಧಿಗಳು ಹಯಾತ್ ರೆಸಿಡೆನ್ಸಿಯಲ್ಲಿ ತಂಗಲಿದ್ದಾರೆ. ಹೀಗೆ ದೆಹಲಿಯ ವಿವಿಧ ಹೊಟೇಲ್ಗಳಲ್ಲಿ ವಿದೇಶಿ ಗಣ್ಯರಿಗೆ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗಿದೆ.

Exit mobile version