ಕಸ ಹೆಕ್ಕಿ ಕೋಟಿ ಗಳಿಸಿ! ಕಸದಿಂದಲೇ ಕೋಟಿ ಕೋಟಿ ಗಳಿಸಿದವರ ರೋಚಕ ಕತೆ.

Business : ಸಿಗರೇಟ್ (Garbage To Money) ವೇಸ್ಟ್ ನಿಂದ ಟೆಡ್ಡಿ ಬೇರ್‌ ತಯಾರಿಸಿದ್ರು ,ತರಕಾರಿ ತ್ಯಾಜ್ಯದಿಂದ ಎಲೆಕ್ಟ್ರಿಸಿಟಿ (Electricity) ಉತ್ಪಾದಿಸಿದ್ರು ಪ್ಲಾಸ್ಟಿಕ್ ಹೆಕ್ಕಿ ಹೊಸ ಬ್ರಾಂಡ್‌ ಶೂ ರೆಡಿ ಮಾಡಿದ್ರು.

ಕಬ್ಬಿನ ಜೊಲ್ಲೆಯಿಂದ ರೆಡಿ ಆಯ್ತು ಪೇಪರ್ ಪ್ಲೇಟ್ ನದಿಯಲ್ಲಿ ಬಿಸಾಡಿದ ಹೂವಿನಿಂದ ಅಗರಬತ್ತಿ ಉತ್ಪಾದನೆ. ಈ ಯಶೋಗಾಥೆ ನಿಮಗೂ ಸ್ಫೂರ್ತಿಯಾಗಬಹುದು

ನಂಬಿದ್ರೆ ನಂಬಿ ಬಿಟ್ರೆ ಬಿಡಿ. ಈ ಎಲ್ಲಾ ವಸ್ತುಗಳು ನೀವು ಬೇಡ ಅಂತ ಕಸದ ತೊಟ್ಟಿಗೆ ಬಿಸಾಡಿದ ವಸ್ತುಗಳಿಂದ ಮಾಡಿರುವಂಥದ್ದು. ಹೌದಾ ಅಂತ ಬೆಚ್ಚಿ ಬೀಳ್ಬೇಡಿ. ನಂಬೋಕೆ ಕಷ್ಟ ಆದ್ರೂ ಇದು ಸತ್ಯ.

ಇವೆಲ್ಲಾ ಕಸದಿಂದ ರಸವಾಗಿರೋ ವಸ್ತುಗಳು. ಇಡೀ ಪ್ರಪಂಚವೇ ತ್ಯಾಜ್ಯ ನಿರ್ವಹಣೆಯ ಟೆನ್ಷನ್‌ನಲ್ಲಿದೆ.

ಅದ್ರಲ್ಲೂ ಭಾರತ ಚೀನಾ ನಂತ್ರ ವಿಶ್ವದಲ್ಲೇ ಅತೀ ಹೆಚ್ಚು ಗಾರ್ಬೆಜ್ ಉತ್ಪಾದಿಸುವ ಅತೀ ದೊಡ್ಡ ರಾಷ್ಟ್ರವಾಗಿದೆ.

ಈ ಸಮಸ್ಯೆ ಹೀಗೆ ಮುಂದುವರೆದ್ರೆ ನಾವೆಲ್ಲಾ ಕಸದ ಸುಳಿಗೆ ಸಿಲುಕಿ ಸಾಯೋ (Garbage To Money) ದುಸ್ಥಿತಿ ಬರಬಹುದು.

ಆದ್ರೆ ಇಂಥಾ ವಿಷಮ ಪರಿಸ್ಥಿತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಅವರ ಕೆಲಸಗಳು ನಮಗೆ ಆಶಾಕಿರಣವಾಗಿ ಕಾಣುತ್ತವೆ.

ಕಸದಿಂದ ರಸ ತೆಗೆದು ಕೋಟಿ ಕೋಟಿ ಗಳಿಸಿದ ಸಾಧಕರ ಒಂದೊಂದು ಸ್ಫೂರ್ತಿದಾಯಕ ಕತೆ ನೋಡೋಣ.

ಪ್ಲಾಸ್ಟಿಕ್ ಹೆಕ್ಕಿ, ಬ್ರಾಂಡ್‌ ಶೂ ರೆಡಿ: ಪ್ಲಾಸ್ಟಿಕ್‌ ಸೃಷ್ಟಿಸಿರುವ ಅವಾಂತರ ನಿಮಗೆಲ್ಲರಿಗೂ ಗೊತ್ತು. ಅದು ಈ ಭೂಮಿಗೆ ಅಂಟಿದ ಶಾಪವಾಗಿದೆ.

ಆದ್ರೆ ಈ ಶಾಪವನ್ನು ತೊಡೆದು ಅನೇಕರು ಅನೇಕ ರೀತಿಯಲ್ಲಿ ಪ್ರಯತ್ನಿಸ್ತಿದ್ದಾರೆ.

ಅವುಗಳ ಪೈಕಿ ಈ ಪ್ಲಾಸ್ಟಿಕ್‌ ಚೀಲಗಳನ್ನು ಹೆಕ್ಕಿ,ತೊಳೆದು,ಒಣಗಿಸಿ ಅದನ್ನು 500 ಡಿಗ್ರಿ ಫ್ಯಾರನ್‌ ಹೀಟ್‌ನಲ್ಲಿ ಪ್ರೆಸ್‌ ಮಾಡಿ ಶೀಟ್‌ ತಯಾರಿಸಿ,

ಆ ಶೀಟ್‌ಗಳಿಂದ ಬ್ರಾಂಡ್‌ ನ್ಯೂ ಶೂ ತಯಾರಿಸುತ್ತಿರುವ ಪರಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

Thealy tax ಎಂಬ ಕಂಪನಿ ವೇಸ್ಟ್‌ ಪ್ಲಾಸ್ಟಿಕ್‌ನಿಂದ ಬ್ರಾಂಡೆಡ್‌ ಶೂ (Branded shoes) ತಯಾರಿಸಿ ಭಾರೀ ಲಾಭ ಗಳಿಸುತ್ತಿದೆ.

ಇದನ್ನೂ ಓದಿ : https://vijayatimes.com/siddaramaiah-tweet-for-bjp/

ಕಬ್ಬಿನ ಜೊಲ್ಲೆಯಿಂದ ಪೇಪರ್ ಪ್ಲೇಟ್ : ಭಾರತ ವಿಶ್ವದಲ್ಲಿಯೇ ಎರಡನೇ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಷ್ಟ್ರ. ಅದ್ರ ಜೊತೆ ಅಷ್ಟೇ ತ್ಯಾಜ್ಯವನ್ನೂ ಉತ್ಪಾದಿಸುತ್ತಿದೆ. ಇದರ ವಿಲೇವಾರಿಯೇ ದೊಡ್ಡ ತಲೆನೋವಾಗಿದೆ.

ಆದ್ರೆ ಈ ವೇಸ್ಟ್ ನಿಂದ ಲಾಭ ಕಂಡವರು ಕೃಷ್ಣ. ಅವರು 14 ವರ್ಷದ ಹಿಂದೆ ಕಬ್ಬಿನ ವೇಸ್ಟ್ ನಿಂದ ಪೇಪರ್ ಪ್ಲೇಟ್ ಉದ್ಯಮವನ್ನು ಆರಂಭಿಸಿದ್ರು. ಕೃಷ್ಣ ಅವರ ಕಂಪನಿಯ ಹೆಸರು ಆಶ್ ಪಾಕ (Ash paaka).

2017 ರಲ್ಲಿ ಈ ಕಂಪನಿಯು “chak” ಎಂಬ ಹೆಸರಿನಲ್ಲಿ ಬ್ರಾಂಡ್ ಬಿಡುಗಡೆ ಮಾಡಿತು. ಇದರ ಅರ್ಥ ಈಜಿಯಾಗಿ ಕೊಳೆಯುವ ಹಾಗೂ ಇಕೋ ಫ್ರೆಂಡ್ಲಿ ಎಂಬುದು ಎಂದು ಕಂಪನಿಯ ಸಂಸ್ಥಾಪಕ ಹೇಳಿಕೊಂಡಿದ್ದಾರೆ.

ಹೂ ಅರಳಿ ಅಗರಬತ್ತಿಯಾದಾಗ: ಭಾರತದ ಪವಿತ್ರ ನದಿಗಳಲ್ಲಿ ದೈವಭಕ್ತರು ಸಾವಿರಾರು ಟನ್‌ಗಳಷ್ಟು ಹೂವು ಮತ್ತು ಹಣ್ಣುಗಳನ್ನು ನೀರಿನಲ್ಲಿ ತೇಲಿ ಬಿಡುತ್ತಾರೆ.

ಆದ್ರೆ ಈ ಹೂಗಳು ಕೊಳೆತು ಅದ್ರಲ್ಲಿರೋ ಅರ್ಸೇನಿಕ್ (Arsenick), ಲೀಡ್ (Lead) ,ಕ್ಯಾಡ್ಮಿಯಂ (Cadmium) ನಂತಹ ರಾಸಾಯನಿಕ ವಸ್ತುಗಳು ನೀರಿನಲ್ಲಿ ಸೇರ್ಪಡೆಯಾಗುವುದರಿಂದ ದೇವಸ್ಥಾನದ ನದಿಗಳು ಕಲುಷಿತ ಗೊಳ್ಳುತ್ತಿವೆ.

ಇದನ್ನು ತಡೆಯಲು ಕೆಲ ಕಂಪೆನಿಗಳು ಅದ್ಭುತ ಯೋಜನೆ ರೂಪಿಸಿವೆ. ಅದೇನು ಗೊತ್ತಾ? ನೀರಲ್ಲಿ ತೇಲಿ ಬಿಡೋ ಹೂ ಗಳನ್ನು ಸಂಗ್ರಹಿಸಿ ಅವುಗಳನ್ನು ಬಣ್ಣ ಹಾಗೂ ಸುವಾಸನೆ ಪ್ರಕಾರ ವರ್ಗೀಕರಿಸಿ ಹೂಗಳ ದಳವನ್ನು ಸಾಂಪ್ರದಾಯಕವಾಗಿ ಒಣಗಿಸಿ,

ನಂತರ ಸರಿಯಾದ ಪ್ರಮಾಣದಲ್ಲಿ ರುಬ್ಬಿ, ಅಗರಬತ್ತಿಯ ತಯಾರಿಕೆಯಲ್ಲಿ ಉಪಯೋಗಿಸಿ ಕೊಳ್ಳಲಾಗುತ್ತದೆ.ಈ ಉದ್ಯಮವು ಲಾಭದಾಯಕವಾಗಿದ್ದೂ, ಪ್ರತಿಗಂಟೆಗೆ 400 ಅಗರಬತ್ತಿ ಕಡ್ಡಿಗಳನ್ನು ತಯಾರಿಸುತ್ತಾರೆ.

ಕೊಳೆತ ತರಕಾರಿಯಲ್ಲಿ ಪವರ್‌ ಜನರೇಷನ್‌: ಪ್ರತಿದಿನವೂ ಮಾರುಕಟ್ಟೆಯಲ್ಲಿ ಮಾರಾಟವಾಗದೆ ಸುಮಾರು 10 ಟನ್ ಆಹಾರ ಪದಾರ್ಥಗಳು ವೇಸ್ಟ್ ಆಗುತ್ತದೆ.

ಆದ್ರೆ ಇದನ್ನೇ ರಸವಾಗಿಸಿ ಮ್ಯಾನುವಲ್ ಎಲೆಕ್ಟ್ರಿಸಿಟಿ (Manual electricity) ಹಾಗೂ ಬಯೋ ಗ್ಯಾಸನ್ನು ಕೂಡ ಉತ್ಪಾದಿಸಲಾಗುತ್ತಿದೆ.

ಈ ರೀತಿಯ ಬಯೋ ಗ್ಯಾಸನ್ನು ಉತ್ಪಾದಿಸಲು ತರಕಾರಿಗಳನ್ನು ಕತ್ತರಿಸಲಾಗುತ್ತದೆ ನಂತರ ಕತ್ತರಿಸಿದ ತರಕಾರಿಯನ್ನು ಅಂಡರ್ ಗ್ರೌಂಡ್ ಟ್ಯಾಂಕನಲ್ಲಿ ಕೊಳೆಯಲು ಬಿಡಲಾಗುತ್ತದೆ ಇ

ದರಲ್ಲಿ ಕಾರ್ಬನ್ ಡೈಯಾಕ್ಸೈಡ್ (Carbon dioxide) ಮತ್ತು ಈಥೈನ್ ಪ್ರಮಾಣ ಹೆಚ್ಚಾಗಿ ಬಿಡುಗಡೆಯಾಗುವುದರಿಂದ ಎಲೆಕ್ಟ್ರಿಸಿಟಿ ಉತ್ಪಾದಿಸುತ್ತಿದ್ದಾರೆ.

ಇದನ್ನೂ ಓದಿ : https://vijayatimes.com/skin-protection-in-winter/

ಸಿಗರೇಟ್ ವೇಸ್ಟ್ನಿಂದ ಮೂಡಿದ ಟೆಡ್ಡಿ: ಪ್ರತಿವರ್ಷ 4.5 ಟ್ರಿಲಿಯನ್ ಸಿಗರೇಟ್ ಅನ್ನು ಜನರು ಬಳಸುತ್ತಾರೆ. ಸಿಗರೇಟ್ ಸೇದಿ ಬಿಸಾಡೋ ವೇಸ್ಟ್ ಅನ್ನು ಸರಿಯಾದ ಪ್ರಕ್ರಿಯೆ ಮೂಲಕ ಕೊಳೆಯಿಸಿ ಫಾರ್ಮಲ್

ಡೇ ಹೈಡ್ (Formaldehyde) ಮತ್ತು ನಿಕೋಟಿನ್ (Nicotine) ಅನ್ನು ಬೇರ್ಪಡಿಸುತ್ತಾರೆ.

ನಂತರ ಇವುಗಳನ್ನು ಅನೇಕ ಹಂತದಲ್ಲಿ ಫಿಲ್ಟರ್ (Filter) ಮಾಡಿ ಹತ್ತಿಯ ರೂಪದ ಅಂಶವನ್ನು ಹೊರ ತೆಗೆಯಲಾಗುತ್ತದೆ . ಹತ್ತಿ ರೂಪದ ವಸ್ತುವನ್ನು ಟೆಡ್ಡಿ ಬೇರ್‌ ಮತ್ತು ದಿಂಬುಗಳಿಗೆ ಕಚ್ಚಾ ವಸ್ತುಗಳಾಗಿ ಬಳಸಲಾಗುತ್ತದೆ.
ಸಿಗರೇಟಿನಲ್ಲಿರುವ ತಂಬಾಕನ್ನು ಗೊಬ್ಬರವಾಗಿ (Compost) ಆಗಿ ಬಳಸಲಾಗುತ್ತದೆ.

ನೋಡಿದ್ರಾ, ಬಳಸಲು ಅರ್ಹವಿಲ್ಲದ ಕೆಲವೊಂದು ತ್ಯಾಜ್ಯಗಳನ್ನು ಮಾರ್ಪಾಡು ಮಾಡುವುದರ ಮೂಲಕ ಕೈತುಂಬಾ ಹಣವನ್ನು ಗಳಿಸಬಹುದು ಎಂಬುದನ್ನು ಅರಿತುಕೊಳ್ಳಬೇಕಾಗಿದೆ.

Exit mobile version