`ಹೈಟೆಕ್ ಸಿಟಿ’ ಹೆಸರಿನಲ್ಲಿ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಕ್ಕೆ ಕುತ್ತು!

students

ಹೈಟೆಕ್ ಸಿಟಿ ಹೆಸರಿನಲ್ಲಿ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯವಾದ ಶೌಚಾಲಯವನ್ನು ಕೆಡವಲು ಮುಂದಾದ ಹೈಟೆಕ್ ಯೋಜನೆ. ಹೌದು, ಮಂಗಳೂರಿನ, ಹಂಪನಕಟ್ಟೆಯಲ್ಲಿರುವ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯವನ್ನು ನಾಶ ಮಾಡಲು ಮುಂದಾಗಿರುವ ಹೈಟೆಕ್ ಯೋಜನೆ ವಿರುದ್ಧ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾಲೇಜಿಗೆ ಇರುವ ಒಂದೇ ಒಂದು ಶೌಚಾಲಯಕ್ಕೂ ಕುತ್ತು ತಂದಿದ್ದಾರೆ ಇಲ್ಲಿನ ಅಧಿಕಾರಿಗಳು. ವಿದ್ಯಾರ್ಥಿಗಳ ಮೂಲಭೂತ ಹಕ್ಕನ್ನು ಲೆಕ್ಕಿಸದೇ ತಮ್ಮಗಿರುವ ಒಂದೇ ಒಂದು ಶೌಚಾಲಯವನ್ನು ಕೆಡವಿ ಹೈಟೆಕ್ ಸಿಟಿ ಮಾಡಲು ಹೊರಟ್ಟಿದ್ದಾರೆ ಅಧಿಕಾರಿಗಳು.

ತನ್ನದೇ ಆದ ಇತಿಹಾಸವನ್ನು ಹೊಂದಿರುವ ಈ ಕಾಲೇಜು, ಸುಮಾರು ವಿದ್ಯಾರ್ಥಿಗಳನ್ನು ಶಿಕ್ಷಕರಾಗಿ, ಸಮಾಜದ ಉನ್ನತ ಸ್ಥಾನಗಳಲ್ಲಿ ಅಲಂಕರಿಸುವಂತೆ ರೂಪಿಸಿ ಕೊಡುಗೆಯಾಗಿ ನೀಡಿದೆ. ಇಂಥ ಮಾದರಿಯ ಕಾಲೇಜಿಗೆ ಯಾಕೆ ತೊಂದರೆ ನೀಡುತ್ತಿದ್ದಾರೆ? ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಏಕಾಏಕಿ ಶೌಚಾಲಯವನ್ನು ಕೆಡವಲು ಸಜ್ಜಾಗಿರುವುದು ಇಲ್ಲಿನ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯವಾಗಿ ಈ ಕಾಲೇಜಿನಲ್ಲಿ 92 ರಷ್ಟು ಹೆಣ್ಣು ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಬಿ.ಎಡ್ ಕಾಲೇಜಿಗೆ ಹೊಂದಿಕೊಂಡಿರುವಂತ ಒಂದೇ ಒಂದು ಶೌಚಾಲಯವನ್ನು ಈಗ ನಾಶಮಾಡಿ ಹೈಟೆಕ್ ಮಾಡುತ್ತಾರಂತೆ! ಹೈಟೆಕ್ ಸಿಟಿ ಹೆಸರಿನಲ್ಲಿ ನಮ್ಮಂತ ವಿದ್ಯಾರ್ಥಿಗಳಿಗೆ ಇರುವ ಮೂಲಭೂತ ಸೌಕರ್ಯಕ್ಕೆ ಕುತ್ತು ತರುವಂಥದ್ದು ಏಕೆ ಎಂದು ಇಲ್ಲಿನ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಹಿಳಾ ಸರ್ಕಾರಿ ಬಿ.ಎಡ್ ಕಾಲೇಜು ವಿದ್ಯಾರ್ಥಿಗಳ ಅಳಲು ಇದು. ಕಾಲೇಜಿಗೆ ಇರುವ ಒಂದೇ ಒಂದು ಶೌಚಾಲಯವನ್ನು ಕೆಡವಿದರೆ ಈ ಹೆಣ್ಣು ಮಕ್ಕಳು ಹೋಗೊದಾದರೂ ಎಲ್ಲಿಗೆ? ಈ ವಿಚಾರವಾಗಿ ಅಧಿಕಾರಿಗಳನ್ನು ಪ್ರಶ್ನಿಸಿದರೇ, ಅವರಿಂದ ಉಸಿರು, ದೆಸೆಯಿಲ್ಲ! ಎಲ್ಲಾ ಗಪ್ ಚುಪ್ ಆಗಿದ್ದಾರೆ. ವಿದ್ಯಾರ್ಥಿಗಳ ಮೂಲಭೂತ ಸೌಕರ್ಯವಾದ ಶೌಚಾಲಯವನ್ನು ಕೆಡವಿದರೆ ಬೇರೆ ಕಡೆ ಶೌಚಾಲಯವನ್ನು ನಿರ್ಮಿಸಲು ಕಾಲೇಜಿನ ಯಾವುದೇ ಮೂಲೆಯಲ್ಲೂ ಜಾಗವಿಲ್ಲ! ಈಗ ಕಾಲೇಜಿನ ಅಂಚಿನ ಭಾಗವನ್ನು ಕೆಡವ ಬೇಕಿದೆ. ಅದರಲ್ಲಿ ನಿಮ್ಮ ಕಾಲೇಜಿಗೆ ಹೊಂದಿರುವಂತ ಶೌಚಾಲಯವನ್ನು ಕೆಡವಲ್ಲಿದ್ದೇವೆ ಎಂದು ಅಳತೇ ಮಾಡಿ ಹೋಗಿದ್ದಾರೆ. ಕೆಡವಲೇ ಬೇಕು ಎಂದರೆ ಮಾಡಲಿ ಆದರೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಹೀಗೆ ಮಾಡುವುದು ಅನ್ಯಾಯ ಎಂದಿದ್ದಾರೆ ವಿದ್ಯಾರ್ಥಿಗಳು.

ಇಲ್ಲಿನ ಅಧಿಕಾರಿಗಳು ಹೈಟೆಕ್ ಸಿಟಿ ಹೆಸರಿನಲ್ಲಿ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯವನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂಬುದು ಗಮನಾರ್ಹ ಅಂಶ. ಕಾಲೇಜಿನ ಪಕ್ಕದಲ್ಲಿರುವ ದೊಡ್ಡ ಶಾಪಿಂಗ್ ಮಾಲ್‍ಗಳ ಜಾಗ ಕೇಳಿ ಎಂದರೆ ಅದಕ್ಕೆ ಅಧಿಕಾರಿಗಳು ಕೊಟ್ಟಿರುವ ಉತ್ತರ, ಮಾಲ್ ಗಳು, ಮಾರ್ಕೆಟ್ಗಳಿಗೆ ತುಂಬ ಜನರು ಬರುತ್ತಾರೆ ಅವರಿಗೆ ತೊಂದರೆಯಾಗುತ್ತದೆ. ಹೀಗಾಗಿ ಅಲ್ಲಿನ ಜಾಗಕ್ಕೆ ನಾವು ಅಡ್ಡಿಪಡಿಸುವುದಿಲ್ಲ ಎಂದು ಹೇಳುತ್ತಾರಂತೆ. ಆದರೆ ಇಲ್ಲಿನ ವಿದ್ಯಾರ್ಥಿಗಳ ಶೌಚಾಲಯವನ್ನು ಕೆಡವಿದರೆ ಯಾವುದೇ ತೊಂದರೆ ಇಲ್ವಂತೆ! ಇದು ಯಾವ ರೀತಿಯಲ್ಲಿ ನ್ಯಾಯ ಸ್ವಾಮಿ? ಅಲ್ಲಾ ಇವರೇನು ಅಧಿಕಾರಿಗಳೋ ಅಥವಾ ರಾಕ್ಷಸರೋ? ವಿದ್ಯಾರ್ಥಿಗಳ ಶೌಚಾಲಯವನ್ನು ಕಿತ್ತುಕೊಳ್ಳುವುದು ಇವರಿಗೆ ಎಷ್ಟು ಸರಿಯಾಗಿದೆ.

ಹೈಟೆಕ್ ಸಿಟಿ ಹೆಸರಿನಲ್ಲಿ ತಮ್ಮ ಮೂಲಭೂತ ಸೌಕರ್ಯಕ್ಕೆ ತೊಂದರೆ ಮಾಡುತ್ತಿರುವ ಅಧಿಕಾರಿಗಳು ಹಾಗೂ ಮೂಲಭೂತ ಸೌಕರ್ಯಕ್ಕಾಗಿ ತಾವು ಹೋರಾಡುತ್ತಿರುವುದರ ಕುರಿತು ಇಲ್ಲಿನ ವಿದ್ಯಾರ್ಥಿಗಳು ಈಗಾಗಲೇ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಧಾನಿ ಮೋದಿಯವರು ಸ್ಪಂದಿಸುತ್ತಾರೆ ಎಂಬುದು ಈ ಕಾಲೇಜಿನ ವಿದ್ಯಾರ್ಥಿಗಳ ನಿರೀಕ್ಷೆಯಾಗಿದೆ.

Exit mobile version