Delhi: ಸರ್ಕಾರಿ ಹುದ್ದೆಗೆ ನೀವು ಸೇರಬೇಕೆಂದಿದ್ರೆ ಒಂದು ಸುವರ್ಣ ಅವಕಾಶ ಇಲ್ಲಿದೆ. 10ನೇ ತರಗತಿ ಪಾಸಾಗಿದ್ದರೆ ಐಟಿಬಿಪಿ (ITBP) ಕಾನ್ಸ್‌ಟೇಬಲ್ ಹುದ್ದೆಗಳ ಅರ್ಜಿಗೆ ನಿಗದಿಪಡಿಸಿದ್ದ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಿದ್ದು, ಪ್ರಕಟಣೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗೆ ಮತ್ತೊಮ್ಮೆ ಅವಕಾಶ ಒದಗಿದೆ.

ಕಳೆದ ಜೂನ್ ತಿಂಗಳಲ್ಲಿ 458 ಕಾನ್ಸ್‌ಟೇಬಲ್ (Constable) (ಡ್ರೈವರ್) ಇಂಡೊ-ಟಿಬೆಟನ್ (Indo-Tibetian) ಗಡಿ ಪೊಲೀಸ್ ಪಡೆ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಆಹ್ವಾನಿಸಿತ್ತು. ಜುಲೈ 26 ರವರೆಗೆ ಸದರಿ ಹುದ್ದೆಗಳಿಗೆ ಈ ಹಿಂದೆ ಅರ್ಜಿಗೆ ಅವಕಾಶ ನೀಡಿತ್ತು.
ಅಭ್ಯರ್ಥಿಗಳ ಹಿತದೃಷ್ಟಿಯಿಂದ ಇದೀಗ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಿ ಪ್ರಕಟಣೆ ಮಾಡಿದೆ. ಹೊಸದಾದ ವೇಳಾಪಟ್ಟಿ ಪ್ರಕಾರ ಆಸಕ್ತಿವುಳ್ಳವರು ಆಗಸ್ಟ್ (August) 10, 2023 ರ ರಾತ್ರಿ 11-59 ಗಂಟೆವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಐಟಿಬಿಪಿ (ITBP) ಕಾನ್ಸ್‌ಟೇಬಲ್ ಹುದ್ದೆಗಳು ಗ್ರೂಪ್ ಸಿ ನಾನ್ ಗೆಜೆಟೆಡ್ (Group C Non Gazetted) (ನಾನ್ ಮಿನಿಸ್ಟೇರಿಯಲ್) ಪೋಸ್ಟ್‌ಗಳಾಗಿದ್ದು, ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ಖಾಯಂಗೊಳಿಸುವ ಅವಕಾಶವಿರುತ್ತದೆ. ಒಟ್ಟು ಹುದ್ದೆಗಳ ಪೈಕಿ UR-195, SC-74, ST-37, OBC-110, EWS-42 ವರ್ಗಾವಾರು ಪೋಸ್ಟ್ ಮೀಸಲಿರಿಸಲಾಗಿದೆ.

ಸಂಖ್ಯೆ: ಒಟ್ಟು ಐಟಿಬಿಪಿ (ITBP) ಕಾನ್ಸ್‌ಟೇಬಲ್ (Constable) ( ಚಾಲಕ ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ಸಂಖ್ಯೆ – 458
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ (SSLC) ಪಾಸ್ ಆಗಿದ್ದು, ಜೊತೆಗೆ ವಾಹನ ಚಾಲನ ಪರವಾನಗಿಯನ್ನು ಹೊಂದಿರಬೇಕು.
ವಯಸ್ಸು: ಅರ್ಜಿದಾರನಿಗೆ ಕನಿಷ್ಠ 18 ವರ್ಷ ವಯಸ್ಸಾಗಿದ್ದು, ಗರಿಷ್ಠ 25 ವರ್ಷಕ್ಕಿಂತ ವಯಸ್ಸು ಮೀರಿರಬಾರದು.
ವೇತನ: ಐಟಿಬಿಪಿ ಕಾನ್ಸ್‌ಟೇಬಲ್(ಚಾಲಕ) ಹುದ್ದೆಗೆ ರೂ.21,700/- ರಿಂದ 69100/- ಸಂಭಾವನೆ ಪಡೆಯಬಹುದಾಗಿದೆ.(7ನೇ ವೇತನ ಆಯೋಗದ ಪ್ರಕಾರ ಲೆವೆಲ್ 3 ಪೇ ಮೆಟ್ರಿಕ್ಸ್ ಸಂಭಾವನೆ)
ಕೊನೆಯ ದಿನ: ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು 10-08-2023 ರ ರಾತ್ರಿ 11-59 ಗಂಟೆ ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸಲು ಬಳಸಬೇಕಾದ ವೆಬ್ ವಿಳಾಸ : https://recruitment.itbpolice.nic.in/ ಈ ರೀತಿಯಾಗಿದ್ದು, ಆನ್‌ಲೈನ್ (Online) ಅರ್ಜಿ ಶುಲ್ಕ: ರೂ.100/- ಆಗಿದೆ.
ಇಂಡೊ-ಟಿಬೆಟನ್ ಗಡಿ ಪೊಲೀಸ್ ಪಡೆಯ ಕಾನ್ಸ್‌ಟೇಬಲ್ (ಚಾಲಕ) ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಶಾರೀರಿಕ ದಕ್ಷತೆ (ಪಿಎಸ್‌ಟಿ), ದೈಹಿಕ ಗುಣಮಟ್ಟದ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವಿವರವಾದ ವೈದ್ಯಕೀಯ ಪರೀಕ್ಷೆಗಳು ಸಹ ಇರುತ್ತವೆ.
ಭವ್ಯಶ್ರೀ ಆರ್.ಜೆ