ಮೇ 1ರಿಂದ ಮಾಸ್ಕ್ ಕಡ್ಡಾಯ : ಮಾಸ್ಕ್ ಇಲ್ಲದೆ ಓಡಾಡಿದ್ರೆ 250 ರೂ. ದಂಡ!

karnataka

ರಾಜ್ಯದಲ್ಲಿ ಕೋವಿಡ್(Covid 19) 4ನೇ ಅಲೆಯ ಮುನ್ಸೂಚನೆ ದೊರೆತ್ತಿದ್ದು, ಕೋವಿಡ್ ಸೊಂಕಿನ ಹರಡುವಿಕೆ ತಡೆಯುವುದು ಅಗತ್ಯವಾಗಿದೆ.

ಸದ್ಯ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಮಾಸ್ಕ್(Face Mask) ನಿಯಮವನ್ನು ಜಾರಿಗೆ ತರುತ್ತಿದೆ. ಹೌದು, ಕೋವಿಡ್ ಉಗಮ ಸ್ಥಾನ ಎಂದೇ ಕರೆಯಲ್ಪಡುವ ಚೀನಾ(China) ದೇಶದ ಶಾಂಘೈನಲ್ಲಿ(Shanghai) ಕೋವಿಡ್ ಏರಿಕೆಯಾದ ಹಿನ್ನೆಲೆ ದಿಢೀರ್ ಲಾಕ್‍ಡೌನ್ ಜಾರಿ ಮಾಡಲಾಗಿದೆ. ಈ ಹಿಂದೆ ನೋಡಿರದ ಹಸಿವಿನ ಹಾಹಾಕಾರ ಚೀನಾದಲ್ಲಿ ಸ್ಪೋಟವಾಗಿದೆ. ಕೋವಿಡ್ ಅಲೆಗೆ ಚೀನಾ ಸದ್ಯ ತತ್ತರಿಸಿ ಹೋಗಿದೆ. ಇದರಂತೆಯೇ ದೇಶದ ರಾಜಧಾನಿ ನವದೆಹಲಿಯಲ್ಲೂ ಕೂಡ ಕೋವಿಡ್ ಉಪಟಳವಾಗಿದ್ದು, ದಿನೇ ದಿನೇ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಜೊತೆಗೆ ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿದೆ.

ಇದೇ ರೀತಿ ಮುಂದುವರಿದರೆ ಕೋವಿಡ್ ವೇಗವಾಗಿ ಹರಡಲಿದೆ ಎಂದು ಪ್ರಧಾನಿಗಳು ಸಭೆಯಲ್ಲಿ ಮಾತನಾಡಿದ್ದು, ಆಯಾ ರಾಜ್ಯದ ಸಿಎಂಗಳಿಗೆ ಎಲ್ಲಿ ಕೋವಿಡ್ ಉಲ್ಬಣಗೊಂಡಿದೆ ಅಲ್ಲಿ ಹೆಚ್ಚುವರಿ ನಿಯಮಾವಳಿಗಳನ್ನು ನಿಯೋಜಿಸಿ ಎಂದು ತಿಳಿಸಿದ್ದಾರೆ. ಪ್ರಧಾನಿಗಳ ಆದೇಶದಂತೆ ರಾಜ್ಯದ ಆರೋಗ್ಯ ಇಲಾಖೆ ಕೂಡ ಮಾಸ್ಕ್ ಧಾರಣೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸೂಚಿಸಿದೆ. ನಾಲ್ಕನೇ ಅಲೆಯ ಪರಿಣಾಮವನ್ನು ನಿಯಂತ್ರಿಸಲು ಬಿಬಿಎಂಪಿ ಮೇ ಮೊದಲನೇ ವಾರದಿಂದ ಮಾಸ್ಕ್ ನಿಯಮವನ್ನು ಕಡ್ಡಾಯ ಮಾಡಲಿದೆ.

ಈ ಮುಖೇನ ಜನಸಾಮಾನ್ಯರಿಗೆ ಮಾಸ್ಕ್ ಧರಿಸಿ ಎಂದು ಸೂಚನೆ ನೀಡುತ್ತಿದೆ. ಮಾಸ್ಕ್ ಹಾಕದೇ ರಸ್ತೆಗೆ ಬಂದವರಿಗೆ 250 ರೂ. ದಂಡ ವಿಧಿಸಲು ನಿರ್ಧರಿಸಿದೆ ಎಂಬುದು ತಿಳಿದುಬಂದಿದೆ.

Exit mobile version