ಆಪರೇಷನ್ ಕೋಲಾರ RTO ಸಕ್ಸಸ್‌ , Vijaya Times Impact: ಹಗರಣದ ಐವರು ಆರೋಪಿಗಳ ಬಂಧನ

Hosakote: ಕೋಲಾರದ RTOದಲ್ಲಿ ನಡೆಯುತ್ತಿದ್ದ ನಕಲಿ ದಾಖಲಾತಿ ಸೃಷ್ಟಿ ಹಗರಣ ಬಯಲು ಮಾಡಿತ್ತು ವಿಜಯಟೈಮ್ಸ್‌ (kolar rto scam). ಅಕ್ರಮ ನೋಂದಣಿ ಮಾಫಿಯಾದಲ್ಲಿ

ಪಾಲ್ಗೊಂಡ ಐವರ ಬಂಧನವಾಗಿದೆ. ಗ್ಯಾರೇಜ್ ಮಾಲೀಕ ವೇಣುಗೋಪಾಲ್ ರೆಡ್ಡಿ (Venugopal Reddy) ಅಂದರ್‌. ವಿಜಯಟೈಮ್ಸ್ ಕವರ್‌ಸ್ಟೋರಿ ತಂಡದ ವರದಿಗೆ ಸದನದಲ್ಲಿ ಪ್ರಶಂಸೆ.


ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡ ಬಯಲಿಗೆಳೆದ ಕೋಲಾರ RTO ಹಗರಣ ದೊಡ್ಡ ಇಂಪ್ಯಾಕ್ಟನ್ನೇ ಮಾಡಿದೆ. ಈ ಹಗರಣದಲ್ಲಿ ಕದ್ದ ಅಥವಾ ಗುಜರಿಗೆ ಹಾಕಬೇಕಾದ ವಾಹನಗಳ ನಕಲಿ

ದಾಖಲೆ ಸೃಷ್ಟಿಸಿ ಅವುಗಳಿಗೆ ಹೊಸ ರೂಪ ಕೊಟ್ಟು ಶಾಲಾ ಬಸ್ಸುಗಳಾಗಿ ಮಾರಾಟ ಮಾಡೋ ದೊಡ್ಡ ಮಾಫಿಯಾವನ್ನು (kolar rto scam) ಬಯಲು ಮಾಡಿತ್ತು.


ಹೊಸಕೋಟೆ ಪೊಲೀಸರಿಂದ ದಾಳಿ: 5 ಮಂದಿ ಅರೆಸ್ಟ್‌
ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಹಾಯ ಕೋರಿ ಹೊಸಕೋಟೆ ಪೊಲೀಸರ ಸಹಾಯದಿಂದ ಮಾಫಿಯಾದ ಮೂಲವಾಗಿದ್ದ ಹೊಸಕೋಟೆಯ ವೇಣುಗೋಪಾಲ್

ರೆಡ್ಡಿಯ ಗ್ಯಾರೇಜ್‌ (Garage) ಮೇಲೆ ದಾಳಿ ಮಾಡಿತ್ತು. ಪೊಲೀಸರು ಈ ಗ್ಯಾರೇಜನ್ನು ಸೀಝ್‌ (Cease) ಮಾಡಿ ತನಿಖೆ ಪ್ರಾರಂಭಿಸಿದ್ರು.


ಕ್ಷಿಪ್ರ ಕಾರ್ಯಾಚರಣೆ ಮಾಡಿ ಅಕ್ರಮ ನೊಂದಣಿ ಜಾಲದ ಕಿಂಗ್ ಪಿನ್ ವೇಣುಗೋಪಾಲ್ ರೆಡ್ಡಿಯನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಈವರೆಗೆ RTO ಏಜೆಂಟ್

ನವೀನ್ ಕುಮಾರ್ (Naveen Kumar) ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಇದನ್ನು ಓದಿ: ಬಿಜೆಪಿ –ಜೆಡಿಎಸ್ ಮೈತ್ರಿ : ಈ 7 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ಯಾ ಜೆಡಿಎಸ್..?


ತಿರುಪತಿಯಲ್ಲಿ ತಲೆಮರೆಸಿಕೊಂಡಿದ್ದ ವೇಣುಗೋಪಾಲ್ ರೆಡ್ಡಿ ಕಳೆದ ಎರಡುವರೆ ವರ್ಷದಿಂದ ಅಕ್ರಮ ನೋಂದಣಿ ದಂಧೆ ನಡೆಸುತ್ತಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಈತ ನಾಗಾಲ್ಯಾಂಡ್

(Nagaland) ಹಾಗೂ ಅರುಣಾಚಲ ಪ್ರದೇಶದ (Arunachal Pradesh) ಆರ್ ಟಿ ಓ ಕಚೇರಿಯಿಂದ ನಕಲಿ ದಾಖಲೆಗಳನ್ನು ತರಿಸಿ, ಕೋಲಾರ RTO ಕಚೇರಿಯಲ್ಲಿ ಆ ಬಸ್ ಗಳನ್ನು ಅಕ್ರಮವಾಗಿ

ಮರುನೋಂದಣಿ ಮಾಡಿಸಿ ಶಾಲಾ ಕಾಲೇಜುಗಳಿಗೆ ಅದೇ ಬಸ್ ಗಳನು ಮಾರಾಟ ಮಾಡುತ್ತಿದ್ದ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟವುಂಟಾಗುತ್ತಿತ್ತು.

ಅಲ್ಲದೆ ಶಾಲಾ ಮಕ್ಕಳ ಪ್ರಾಣದ ಜೊತೆ ಚಲ್ಲಾಟ ಆಡುತ್ತಿದ್ದ.


ಮಾಫಿಯಾದಲ್ಲಿ ಕೋಲಾರ RTO ಭಾಗಿ
ಈ ದಂಧೆಯಲ್ಲಿ ಕೋಲಾರ RTO ವ್ಯೋಮಕೇಶಪ್ಪ, ಕೇಸ್ ವರ್ಕರ್ ಭಾಗಿಯಾಗಿದ್ದಾರೆ. ಈ ಬಗ್ಗೆ ಪ್ರಾಥಮಿಕ ಸಾಕ್ಷ್ಯಗಳು ಪೊಲೀಸರಿಗೆ ದೊರುತಿದೆ. ತನಿಖೆ ಪ್ರಾಮಾಣಿಕವಾಗಿ ನಡೆದರೆ

ಸದ್ಯದಲ್ಲೇ ಇವರ ಬಂಧನ ಆಗೋ ಸಾಧ್ಯತೆ ಇದೆ. ಸದ್ಯ ಎಸ್ ಎಸ್ ಪಿ ಮೋಟಾರ್ಸ್ ಮಾಲೀಕ ವೇಣುಗೋಪಾಲ್ ರೆಡ್ಡಿ ಮ್ಯಾನೇಜರ್ ಚಿರಂಜೀವಿ ಸೂಪರ್ವೈಸರ್ ಶ್ರೀನಿವಾಸ್ ಕೋಲಾರ

ಆರ್‌ಟಿಓ ಕಚೇರಿ ಏಜೆಂಟ್ಗಳಾದ ರಾಜು ಹಾಗೂ ನವೀನನ್ನು ಬಂಧಿಸಲಾಗಿದೆ.


ವಿಜಯಟೈಮ್ಸ್ ವರದಿ ಸದನದಲ್ಲೂ ಸದ್ದು ಮಾಡಿದೆ. ಕವರ್‌ಸ್ಟೋರಿ ತಂಡದ ಸಾಹಸಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅಭಿನಂದನೆ ಸಲ್ಲಿಸಿದರು. ಅಲ್ಲದೆ ಈ ಪ್ರಕರಣದ

ತನಿಖೆಯನ್ನು ಪ್ರಾಮಾಣಿಕವಾಗಿ ನಡೆಸಲು ಆದೇಶ ನೀಡಲಾಗಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲಾ ಆರ್‌ಟಿಓ ಅಧಿಕಾರಿಗಳಿಗೆ ಶಿಕ್ಷೆ ನೀಡಲಾಗುವುದು ಎಂದು ಸಾರಿಗೆ ಸಚಿವರು ಭರವಸೆ ನೀಡಿದರು.


ಇನ್ನು ವಾಹನಗಳ ಅಕ್ರಮ ನೊಂದಣಿ ಜಾಲದ ಪ್ರಮುಖ ಆರೋಪಿ ವೇಣುಗೋಪಾಲ್ ರೆಡ್ಡಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿಸುತ್ತಿದ್ದಂತೆ ಇದೊಂದು ಬೃಹತ್ ಜಾಲ ಎಂಬ

ವಿಚಾರ ತಿಳಿಯುತ್ತಿದೆ. ದಂಧೆಯಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಮಾಹಿತಿ ಸಿಕ್ಕಿದ್ದು. ಆದಷ್ಟು ಬೇಗ ಎಲ್ಲರನ್ನು ಬಂಧಿಸಲಾಗುತ್ತದೆ ಎಂದು ಹೊಸಕೋಟೆ ಉಪ ವಿಭಾಗದ DYSP

ಶಂಕರ್ ಗೌಡ ಎ ಪಾಟೀಲ್ (Shankar Gowda A Patil) ತಿಳಿಸಿದ್ದಾರೆ.

ಈ ಹಗರಣ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿ, ಪ್ರಾಮಾಣಿಕವಾಗಿ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಅನ್ನೋದೇ ವಿಜಯಟೈಮ್ಸ್ ಆಶಯ.

Exit mobile version