Assam: ಗಲಭೆ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಅತ್ಯಾಚಾರ ಮಾಡಿ, ಬೆತ್ತಲೆ ಮೆರವಣಿಗೆ (Manipur crime CM’s reaction) ಮಾಡಿದ ಘಟನೆ ಇಡೀ ದೇಶಾದ್ಯಂತ ತೀವ್ರ
ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಮಾತನಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sharma), ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿಯೂ
ಈ ರೀತಿಯ ಕ್ರೂರ ಅಪರಾಧಗಳು ಮಹಿಳೆಯರ ಮೇಲೆ ನಡೆದಿವೆ. ಎಲ್ಲವನ್ನೂ ನಾವು ಸಮಾನವಾಗಿ ಖಂಡಿಸಬೇಕು. ಆದರೆ “ಸೋ ಕಾಲ್ಡ್ ಲಿಬರಲ್ಸ್ (So Called Liberals)”
ಇದನ್ನು ಓದಿ: ಆಲ್ಕೋಹಾಲಾದರೇನು, ಹಾಲಾದರೇನು, ಬೊಕ್ಕಸ ತುಂಬಬೇಕಷ್ಟೇ, ಹಾಲಿನ ದರ ಹೆಚ್ಚಳಕ್ಕೆ ಎಚ್ಡಿ ಕುಮಾರಸ್ವಾಮಿ ಕಿಡಿ:
ಖಂಡಿಸುವುದರಲ್ಲೂ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯ ಪ್ರೇರಿತರಾಗಿ ಕೆಲವು ಘಟನೆಗಳನ್ನು ಮಾತ್ರ ಖಂಡಿಸುತ್ತಾರೆ (Manipur crime CM’s reaction)
ಎಂದು ಹಿಮಂತ ಬಿಸ್ವಾ ಶರ್ಮಾ ಟೀಕಿಸಿದ್ದಾರೆ.

ಮಣಿಪುರದಲ್ಲಿ (Manipur) ನಡೆದ ಘಟನೆಯು ಭಯಾನಕವಾಗಿದೆ. ಅಪರಾಧಿಗಳು ತಕ್ಕ ಶಿಕ್ಷೆಯನ್ನು ನೀಡಲಾಗುವುದು. ದುರದೃಷ್ಟವಶಾತ್, ಉದಾರವಾದಿಗಳೆಂದು ಕರೆಯಲ್ಪಡುವವರು ಬೇರೆಡೆ
ಅಷ್ಟೇ ಕ್ರೂರ ಅಪರಾಧಗಳನ್ನು ನಡೆದಾಗ ಅದನ್ನು ನಿರ್ಲಕ್ಷಿಸುತ್ತಾರೆ ಎಂದು ಹಿಮಂತ ಬಿಸ್ವಾ ಶರ್ಮಾ ಟ್ವೀಟ್ (Tweet) ಮಾಡಿದ್ದು, ಕೆಲ ಮಾದ್ಯಮಗಳ ವರದಿಗಳನ್ನು ಹಂಚಿಕೊಂಡಿದ್ದಾರೆ.
- “ಆರು ತಿಂಗಳ ಹಸುಳೆ ಸೇರಿದಂತೆ ನಾಲ್ವರ ಕುಟುಂಬವನ್ನು ಜುಲೈ (July) 19, 2023 ರಂದು ಜೋಧ್ಪುರದಲ್ಲಿ ಮೊದಲು ಕೊಲೆ ಮಾಡಿ ಜೀವಂತವಾಗಿ ಸುಡಲಾಯಿತು” ಎಂದು ಬರೆದಿದ್ದಾರೆ.
- “16 ಜುಲೈ 2023 ರಂದು ಜೋಧ್ಪುರದಲ್ಲಿ ದಲಿತ ಅಪ್ರಾಪ್ತ ವಯಸ್ಕಳನ್ನು ಆಕೆಯ ಗೆಳೆಯನ ಮುಂದೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು”
- “ಜುಲೈ 13, 2023 ರಂದು ಚುನಾವಣೆಯಲ್ಲಿ ಸೋತ ನಂತರ ಟಿಎಂಸಿ (TMC) ಕಾರ್ಯಕರ್ತರು ಬಿಜೆಪಿ (BJP) ಕಾರ್ಯಕರ್ತನ ಮೇಲೆ ಮೂತ್ರ ವಿಸರ್ಜನೆ ಮಾಡಿದರು.

- “ಜುಲೈ 8, 2023 ರಂದು ಟಿಎಂಸಿ ಕಾರ್ಯಕರ್ತರು ತನ್ನನ್ನು ವಿವಸ್ತ್ರಗೊಳಿಸಿ ನಗ್ನವಾಗಿ ಮೆರವಣಿಗೆ ಮಾಡಿದ್ದಾರೆ ಎಂದು ವ್ಯಕ್ತಿ ಅಭ್ಯರ್ಥಿಯೊಬ್ಬರು ಆರೋಪಿಸಿದ್ದರು.
- “ಜೂನ್ 7, 2023 ರಂದು ಬಿಹಾರದಲ್ಲಿ ಅಪ್ರಾಪ್ತ ಬುಡಕಟ್ಟು ಬಾಲಕಿಯನ್ನು 8 ಜನರು ಸಾಮೂಹಿಕ ಅತ್ಯಾಚಾರ ಮಾಡಿದರು.
- ಅಕ್ಟೋಬರ್ (October) 20, 2022 ರಂದು ಜಾರ್ಖಂಡ್ನ ಚೈಬಾಸಾದಲ್ಲಿ ರಸ್ತೆಯಲ್ಲಿ ಹಗಲು ಹೊತ್ತಿನಲ್ಲಿ ಬುಡಕಟ್ಟು ಮಹಿಳೆಯನ್ನು 10 ಜನರು ಸಾಮೂಹಿಕ ಅತ್ಯಾಚಾರ ಮಾಡಿದರು
ಈ ಯಾವ ಘಟನೆಗಳ ಬಗ್ಗೆಯೂ ಬುದ್ದಿವಂತರು, ಪ್ರಗತಿಪರರು, ಉದಾರವಾದಿಗಳ ಬಾಯಿ ಬಿಚ್ಚಲಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.