New Delhi : ಮಂಗಳವಾರ, ಪ್ರಧಾನಿ ನರೇಂದ್ರ ಮೋದಿ (Modi historic America tour) ಅವರು ನಾಲ್ಕು ದಿನಗಳ ಕಾಲ ಅಮೆರಿಕಕ್ಕೆ ಐತಿಹಾಸಿಕ ಪ್ರವಾಸವನ್ನು ಕೈಗೊಳ್ಳಲಿದ್ದು,
ನಂತರ ಎರಡು ದಿನಗಳ ಕಾಲ ಈಜಿಪ್ಟ್ (Egypt) ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಈ ಪ್ರವಾಸವು ಮೋದಿಯವರಿಗೆ ಹಲವು ಪ್ರಥಮಗಳನ್ನು ತರುವ ಭರವಸೆಯನ್ನು ನೀಡಿದೆ.
ಮೋದಿಯವರನ್ನು ಯುಎಸ್ ಸರ್ಕಾರ (Modi historic America tour) ಆಹ್ವಾನಿಸಿದೆ.
ಆದ್ದರಿಂದ ಯುಎಸ್ (US) ಆಹ್ವಾನಿತರಾಗಿ ಭೇಟಿ ನೀಡಿದ ಭಾರತದ ಎರಡನೇ ಪ್ರಧಾನಿಯಾಗಿದ್ದಾರೆ. ಹೆಚ್ಚುವರಿಯಾಗಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರ ಆಹ್ವಾನದ
ಮೇರೆಗೆ ಅಮೆರಿಕಕ್ಕೆ ಭೇಟಿ ನೀಡಿದ ಮೂರನೇ ವಿಶ್ವ ನಾಯಕ ಎನ್ನಿಸಿಕೊಳ್ಳಲಿದ್ದಾರೆ.

ಚರ್ಚೆಯ ಪ್ರಮುಖ ವಿಷಯವೆಂದರೆ ಉತ್ಪಾದನೆ ಮತ್ತು ಹೂಡಿಕೆ ಎಂದು ಮೋದಿಯವರೇ ಹೇಳಿದ್ದಾರೆ. ಇದಲ್ಲದೆ, ಮೋದಿ ಅವರು ಎರಡನೇ ಬಾರಿಗೆ ಯುಎಸ್ ಸಂಸತ್ತಿನಲ್ಲಿ ಭಾಷಣ ಮಾಡಿದ ಮೊದಲ
ಭಾರತೀಯ ಪ್ರಧಾನಿ ಎಂಬ ಇತಿಹಾಸವನ್ನು ನಿರ್ಮಿಸಲಿದ್ದಾರೆ. ಇದು ಪ್ರಧಾನಿಯಾಗಿ ಮೋದಿಯವರ ಏಳನೇ ಅಮೇರಿಕಾ ಭೇಟಿಯನ್ನು ಗುರುತಿಸುತ್ತದೆ, ಹಿಂದಿನ ಅಧಿಕೃತ ಭೇಟಿಯನ್ನು ಮನಮೋಹನ್
ಸಿಂಗ್ (Manmohan Singh) ಅವರು ಮಾಡಿದ್ದರು , ಅವರು ಭಾರತದ ಪ್ರಧಾನಿಯಾಗಿದ್ದಾಗ ಯುಎಸ್ ಸಂಸತ್ತಿನಲ್ಲಿ ಭಾಷಣವನ್ನೂ ಕೂಡ ಮಾಡಿದ್ದರು.
ಇದನ್ನೂ ಓದಿ : ರಾಜ್ಯದಲ್ಲಿ ಆನ್ಲೈನ್ ವಂಚನೆ ಜಾಲವಾದ ಪಿಂಕ್ ವಾಟ್ಸ್ಆ್ಯಪ್ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ
ಪ್ರಧಾನಿ ಮೋದಿ ಅಮೆರಿಕ ಭೇಟಿ ಬಳಿಕ ಈಜಿಪ್ಟ್ ಗೆ ಕೂಡ ಭೇಟಿ ನೀಡಲಿದ್ದಾರೆ. ಈಜಿಪ್ಟ್ ದೇಶಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ.
ಮೋದಿಯವರ ಅಮೇರಿಕಾ ಭೇಟಿಯ ಸಂದರ್ಭದಲ್ಲಿ ವಿವಿಧ ಚಟುವಟಿಕೆಗಳು ನಡೆಯಲಿದ್ದು, ಅದರಲ್ಲಿ ರಕ್ಷಣಾ ಸಹಕಾರವು ಪ್ರಮುಖ ಅಜೆಂಡಾವಾಗಿರುತ್ತದೆ ಎಂದು ಭಾರತೀಯ
ವಿದೇಶಾಂಗ ಸಚಿವಾಲಯ (Indian Ministry ofExternal Affairs) ತಿಳಿಸಿದೆ.
ಮೋದಿ ಭೇಟಿ ವೇಳೆ ಏನಾಗಲಿದೆ? :
ಜೂನ್ 21ರಂದು ಪ್ರಧಾನಿ ಮೋದಿ ಅವರು ಅಮೆರಿಕದ ನ್ಯೂಯಾರ್ಕ್ಗೆ (New York) ಆಗಮಿಸಲಿದ್ದು, ವಿಶ್ವಸಂಸ್ಥೆಯ (United Nations) ಒಂಬತ್ತನೇ ಅಂತಾರಾಷ್ಟ್ರೀಯ
ಯೋಗ ದಿನಾಚರಣೆಯಲ್ಲಿ (International Yoga Day) ಭಾಗವಹಿಸಲಿದ್ದಾರೆ. ಅವರಿಗೆ 180 ದೇಶಗಳ ಪ್ರಮುಖರು ಸಾಥ್ ನೀಡಲಿದ್ದಾರೆ. ಅಂದು ಸಂಜೆ ವಾಷಿಂಗ್ಟನ್ಗೆ (Washington)
ತೆರಳಲಿರುವ ಮೋದಿಯವರಿಗೆ ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಆತ್ಮೀಯ ಭೋಜನವನ್ನು ಏರ್ಪಡಿಸಲಿದ್ದಾರೆ ಮರುದಿನ, ಜೂನ್ 22 ರಂದು,
ಮೋದಿ ಅವರಿಗೆ ಯುಎಸ್ ಅಧ್ಯಕ್ಷರ ಪರವಾಗಿ ಸಾಂಪ್ರದಾಯಿಕ ಸ್ವಾಗತ ಕೋರಲಾಗುವುದು, ಜೊತೆಗೆ ಔತಣ ಕೂಟವನ್ನು ಸರ್ಕಾರ ಕಡೆಯಿಂದ ಆಯೋಜಿಸಲಾಗಿದೆ.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ
ಅದೇ ದಿನ ಮೋದಿ ಅವರು ಅಮೇರಿಕ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕ ಸಂಸತ್ತಿನಲ್ಲಿ ಮಾತನಾಡುವ ಭಾರತದ 2ನೇ ಪ್ರಧಾನಿ ಎಂದು ಈ ಮೂಲಕ ಎನ್ನಿಸಿಕೊಳ್ಳಲಿದ್ದಾರೆ.
ಜೂನ್ 23ರಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಮೋದಿ ಅವರಿಗೆ ಔತಣಕೂಟ ಆಯೋಜಿಸಿದ್ದಾರೆ. ಅಂದು ಮೋದಿ ಉದ್ಯಮಿಗಳು, ವಿವಿಧ ಕಂಪನಿಗಳ ಸಿಇಒಗಳು,
ಖ್ಯಾತನಾಮರನ್ನು ಭೇಟಿಯಾಗಲಿದ್ದಾರೆ. ಜೊತೆಗೆ ಭಾರತೀಯ ಸಮುದಾಯದವರನ್ನು ಸಹ ಉದ್ದೇಶಿಸಿ ಮಾತನಾಡಲಿದ್ದಾರೆ.
ಭಾರತದ ಪ್ರಧಾನಿ ಈಜಿಪ್ಟ್ಗೆ ಚೊಚ್ಚಲ ಭೇಟಿ:
ಜೂನ್ 24 ರಂದು ಈಜಿಪ್ಟ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಆ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ವೇಳೆ ಅವರು ಹಕಿಮಿ
ಮಸೀದಿಗೆ (AL Hakim Moswue) ಭೇಟಿ ನೀಡಲಿದ್ದಾರೆ. ಇದರ ನಂತರ ಅಬ್ದೆಲ್ ಫತ್ತಾ ಎಲ್ ಸಿಸಿ (Abdel Fattah EISisi) ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಯಲಿದೆ.ಜೂನ್ 25ರಂದು ಭಾರತಕ್ಕೆ ಮರಳಲಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವಿದೇಶಾಂಗ ಸಚಿವ ವಿನಯ್ ಮೋಹನ್ ಕ್ವಾತ್ರಾ (Vinay Mohan Kwatra) ”ರಕ್ಷಣಾ ಸಹ-ಉತ್ಪಾದನೆ ಮತ್ತು ಸಹ ಅಭಿವೃದ್ಧಿಯ ಕುರಿತ
ಎಲ್ಲಾ ವಿಷಯಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮಾತುಕತೆಯಲ್ಲಿ ಪ್ರಮುಖ ಭಾಗವಾಗಲಿವೆ. ದ್ವಿಪಕ್ಷೀಯ ರಕ್ಷಣಾ ಸಹಕಾರವು ಚರ್ಚೆಯ ಕೇಂದ್ರಬಿಂದುವಾಗಿರುತ್ತದೆ.
ವ್ಯಾಪಾರ ಮತ್ತು ಹೂಡಿಕೆಯಲ್ಲಿ ಸಹಕಾರವೂ ಎರಡನೇ ದೊಡ್ಡ ಚರ್ಚೆಯ ವಿಷಯವಾಗಿದೆ. ಬಾಹ್ಯಾಕಾಶ, ಟೆಲಿಕಾಂ, ಉತ್ಪಾದನೆ ಮತ್ತು ಹೂಡಿಕೆ ಮೂರನೇ ಪ್ರಮುಖ ಚರ್ಚೆಯ ವಿಷಯವಾಗಿರಲಿದೆ’ ಎಂದರು.
ಕ್ವಾತ್ರಾ ರಕ್ಷಣಾ ಸಹಕಾರದ ವಿವರವನ್ನು ನೀಡಲಿಲ್ಲವಾದರೂ ಅಮೆರಿಕ ನಿರ್ಮಿತ ಡ್ರೋನ್(Drone) ಖರೀದಿ ಒಪ್ಪಂದಕ್ಕೆ ಈ ವೇಳೆ ಅಂಕಿತ ಬೀಳಲಿದೆ.
ಇದನ್ನೂ ಓದಿ : ಏಷ್ಯಾ ಕಪ್ : ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ ಭಾರತೀಯ ಕ್ರಿಕೆಟ್ ತಂಡ
ಅಷ್ಟೇ ಅಲ್ಲದೆ ಯುದ್ಧವಿಮಾನ ನಿರ್ಮಾಣ ತಂತ್ರಜ್ಞಾನವನ್ನು(Aircraft Construction Technology) ಭಾರತದೊಂದಿಗೆ ಹಂಚಿಕೊಳ್ಳುವ ಒಪ್ಪಂದಕ್ಕೂ ಇಲ್ಲಿ ಅಂಕಿತ ಬೀಳಲಿದೆ.
ಯುದ್ಧವಿಮಾನ ನಿರ್ಮಾಣದಲ್ಲಿ ಇದು ಕ್ರಾಂತಿಕಾರಕವಗಬಹುದು ಎಂದು ಹೇಳಲಾಗಿದೆ.

ಪ್ರಧಾನಿ ಮೋದಿ ಕಾರ್ಯಕ್ರಮಗಳ ವಿವರ ಹೀಗಿದೆ
- ಅಮೆರಿಕದ ನ್ಯೂಯಾರ್ಕ್ಗೆ ಜೂ.21ರಂದು ಮೋದಿ ಆಗಮನ
- 9ನೇ ಅಂ.ರಾ. ಯೋಗ ದಿನದಲ್ಲಿ ಅಂದೇ ವಿಶ್ವಸಂಸ್ಥೆಯಲ್ಲಿ ಭಾಗಿ
- ಮೋದಿಗೆ ಬೈಡೆನ್ ದಂಪತಿಯ ಔತಣ ಅಂದೇ ರಾತ್ರಿ ವಾಷಿಂಗ್ಟನ್ನಲ್ಲಿ
- ಅಮೆರಿಕದ ಅಧ್ಯಕ್ಷರಿಂದ ಜೂ.22ರಂದು ಸಾಂಪ್ರದಾಯಿಕ ಸ್ವಾಗತ
- ಅಮೆರಿಕ ಸರ್ಕಾರದಿಂದ ಅದೇ ದಿನ ಪ್ರಧಾನಿಗೆ ಅಧಿಕೃತ ಔತಣ
- ಅಮೆರಿಕದ ಜಂಟಿ ಸಂಸತ್ತನ್ನು ಉದ್ದೇಶಿಸಿ ಅಂದೇ ಮೋದಿ ಭಾಷಣ
- ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಂದ ಜೂ.23ರಂದು ಔತಣ
- ವಿವಿಧ ಕಂಪನಿಗಳ ಸಿಇಒ, ಉದ್ಯಮಿಗಳ ಜತೆ ಅಂದು ಮೋದಿ ಭೇಟಿ
- ಭಾರತೀಯ ಸಮುದಾಯವನ್ನುದ್ದೇಶಿಸಿ ಅದೇ ದಿನ ಮೋದಿ ಭಾಷಣ
- ರಶ್ಮಿತಾ ಅನೀಶ್