65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ದೇವಸ್ಥಾನಗಳಲ್ಲಿ ನೇರ ದರ್ಶನ

Bengaluru : ರಾಜ್ಯದ ಮುಜರಾಯಿ ಇಲಾಖೆಯಡಿಯಲ್ಲಿರುವ ದೇವಸ್ಥಾನಗಳಲ್ಲಿ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ (Mujarai department new rules) ನಾಗರಿಕರು ದರ್ಶನಕ್ಕಾಗಿ

ದೇವಾಲಯಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಬದಲಿಗೆ ಅವರಿಗೆ ನೇರ ಪ್ರವೇಶವನ್ನು (Mujarai department new rules) ನೀಡಲಾಗುತ್ತದೆ.

ಈ ಸಂಬಂಧ ರಾಜ್ಯ ಮುಜರಾಯಿ ಇಲಾಖೆ ಬುಧವಾರ ಅಧಿಕೃತ ಸುತ್ತೋಲೆ ಹೊರಡಿಸಿದೆ. ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕ, ಆಗಮಿಕರ ಮತ್ತು ಉಪಾಧಿವಂತ ಫೆಡರೇಷನ್ನ ಮನವಿ ಆಧರಿಸಿ,

ಮುಜರಾಯಿ ಇಲಾಖೆ ಈ ನಿರ್ಧಾರ ಕೈಗೊಂಡಿದ್ದು, ಹಿರಿಯ ನಾಗರಿಕರು ಪ್ರವರ್ಗ ‘ಎ ಮತ್ತು ‘ಬಿ’ ವರ್ಗದ ದೇವಸ್ಥಾನಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪರದಾಡಬೇಕಾಗಿಲ್ಲ. ಬದಲಿಗೆ ಉಚಿತವಾಗಿ ನೇರ ದರ್ಶನವನ್ನು

ಪಡೆಯಬಹುದು.ಇನ್ನು ಮಲೆಮಹದೇಶ್ವರ (Male Mahadeshwara) , ಮೈಸೂರಿನ ಚಾಮುಂಡೇಶ್ವರಿ, ಗೋಕರ್ಣದ ಮುರುಡೇಶ್ವರ (Murudeshwara) , ಉತ್ತರ ಕನ್ನಡದ ಉಳವಿ ಚೆನ್ನಬಸವಣ್ಣ, ದಕ್ಷಿಣ ಕನ್ನಡದ

ಇದನ್ನು ಓದಿ: ರಾಜ್ಯದಲ್ಲಿ ಕಾಫಿ, ಟೀ, ತಿಂಡಿ, ಊಟದ ದರ ಹೆಚ್ಚಳ : ಅಕ್ಕಿ ಮತ್ತು ಹಾಲಿನ ದರ ಹೆಚ್ಚಳ ಬಗ್ಗೆಯೂ ಸಿಕ್ಕಿದೆ ಸುಳಿವು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬೆಳಗಾವಿಯ ರೇಣುಕಾ ಯೆಲ್ಲಮ್ಮ ಸೇರಿದಂತೆ ಎ ವಿಭಾಗದಲ್ಲಿರುವ ರಾಜ್ಯದ ಹಲವಾರು ಪ್ರಮುಖ ದೇವಾಲಯಗಳಲ್ಲಿ ಈ ಸೌಲಭ್ಯ ಇರುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಗೆ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಲ್ಲುವುದು ಕಷ್ಟವಾಗುತ್ತಿದೆ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ

ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ. ವಯಸ್ಸಿನ ಪುರಾವೆ ಅಥವಾ ಆಧಾರ್ ಒದಗಿಸುವ ಮೂಲಕ ಅವರ ಮೇಲೆ ತ್ವರಿತ ದರ್ಶನವನ್ನು ಪಡೆಯಬಹುದು ಎಂದು ಮುಜರಾಯಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಇನ್ನು ಈ ಸೌಲಭ್ಯವು ಕೇವಲ ದರ್ಶನ ಪಡೆಯುವುದಕ್ಕಾಗಿ ಮಾತ್ರ ಸೀಮಿತವಾಗಿರುತ್ತದೆ. ಇನ್ನುಳಿದಂತೆ ಈ ಸೌಲಭ್ಯದ ಮೂಲಕ ಪೂಜೆ ಸಲ್ಲಿಕೆ ಸೇರಿದಂತೆ ಇತರ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಿರುವುದಿಲ್ಲ.

65 ವರ್ಷ ಅದಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾತ್ರ ಈ ಸೌಲಭ್ಯವಿದ್ದು, ಅವರೊಂದಿಗೆ ಇತರರಿಗೆ ತೆರಳಲು ಅವಕಾಶ ಇರುವುದಿಲ್ಲ. ಮುಜರಾಯಿ ಇಲಾಖೆಯ ವ್ಯಾಪ್ತಿಯ ಸುಮಾರು

500ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ.

Exit mobile version