ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ!

Food

ಖಾಲಿ ಹೊಟ್ಟೆಯಲ್ಲಿ ಕೆಲ ಆಹಾರಗಳನ್ನು ಸೇವಿಸಲೇಬಾರದು. ಅದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು(Health Issues) ನಾವು ಎದುರಿಸಬೇಕಾಗುತ್ತದೆ. ಕೆಲವು ಆಹಾರಗಳನ್ನು ಸೇವಿಸುವುದರಿಂದ ಕರುಳಿನ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಯಾವ ರೀತಿಯ ಆಹಾರಗಳನ್ನು ಮತ್ತು ಹಣ್ಣುಗಳನ್ನು(Fruits) ನಾವು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು ಎಂಬ ಸಾಮಾನ್ಯ ಜ್ಞಾನ ನಮಗೆ ಇರಬೇಕಾಗುತ್ತದೆ. ಹಾಗಾಗಿ ಯಾವ ಆಹಾರ ಮತ್ತು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು ಎಂಬುದರ ವಿವರ ಇಲ್ಲಿದೆ ನೋಡಿ.

ಟೊಮ್ಯಾಟೋ : ಟೊಮ್ಯಾಟೋ(Tomato) ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಹಾನಿಕಾರಕ ಎಂದು ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟೊಮ್ಯಾಟೋದಲ್ಲಿರುವ ಆಮ್ಲೀಯ ಗುಣಗಳು ಹೊಟ್ಟೆಯಲ್ಲಿರುವ ಕಿಣ್ವಗಳೊಂದಿಗೆ ಪ್ರತಿಕ್ರಿಯಿಸಿ ಉದರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಖಾಲಿ ಹೊಟ್ಟೆಯಲ್ಲಿ ಟೊಮ್ಯಾಟೋ ಅನ್ನು ತಿನ್ನುವುದು ಕರುಳು ಮತ್ತು ಜಠರಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಟೊಮ್ಯಾಟೋ ಅನ್ನು ಅಡುಗೆಯಲ್ಲಿ ತಿನ್ನಬಹುದು, ಆದರೆ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು.

ಹುಳಿ ಮೊಸರು : ಮೊಸರು(Curd) ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಮೊಸರನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಮಧ್ಯಾಹ್ನ ಊಟದಲ್ಲಿ ಮೊಸರು ಸೇವಿಸುವುದು ಉತ್ತಮ. ಇದರಿಂದ ಜೀರ್ಣಕ್ರಿಯೆ ವೃದ್ದಿಸುತ್ತದೆ.

ಸೋಡಾ : ಸೋಡಾದಲ್ಲಿ(Soda) ಕಾರ್ಬೋನೇಟ್ ಆಮ್ಲ ಇದ್ದು, ಇದು ಹೊಟ್ಟೆಯಲ್ಲಿರುವ ಇತರೆ ಆಮ್ಲದೊಂದಿಗೆ ಬೆರೆತು ಹೊಟ್ಟೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಸೋಡಾ ಸೇವಿಸಬಾರದು. ಊಟದ ನಂತರ ಸೇವಿಸಬಹುದು.

ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು :

Exit mobile version