ಗಲೀಜಾಗಿ, ಅಪಾಯಕಾರಿ ಸ್ವೀಟ್‌ ತಯಾರಿಸುತ್ತಿದ್ದ ಆಹಾರ ಮಾಫಿಯಾದ ಮೇಲೆ ಪೊಲೀಸ್‌ ರೈಡ್‌

Health news : ಈಗ ಎಲ್ಲಿ ಕಲಬೆರಕೆ ಮತ್ತು ನಕಲಿ ಇಲ್ಲ ಹೇಳಿ? ಕಲಬೆರಕೆ ಇಲ್ಲದ ವಸ್ತುಗಳೇ ಇಲ್ಲವಾಗಿವೆ. ಇಡೀ ಜಗತ್ತೇ ಕಲಬೆರಕೆ (Police raid on food mafia) ಆಗಿಬಿಟ್ಟಿದೆ.

ಈಗ ನಮ್ಮ ಮಾರುಕಟ್ಟೆಯಲ್ಲಿ ಅನೇಕ ತಿಂಡಿ ಅಂಗಡಿ ಮಾಲೀಕರು ಕಲಬೆರಕೆ ಪದಾರ್ಥಗಳನ್ನು ಬಳಸಿ ಸಿಹಿತಿಂಡಿಗಳನ್ನು ತಯಾರಿಸಿ ಲಾಭ ಗಳಿಸುತ್ತಿದ್ದಾರೆ. ಇದು ಅನೇಕ ವಿಧಗಳಲ್ಲಿ ಆರೋಗ್ಯಕ್ಕೆ

ಅಪಾಯವನ್ನುಂಟುಮಾಡುತ್ತದೆ. ಕ್ಯಾಂಡಿ (Candy) ತಯಾರಿಸಲು ನಕಲಿ ಖೋವಾ, ತುಪ್ಪ, ಎಣ್ಣೆ, ಹಾಲು, ಕೃತಕ ಸುವಾಸನೆ, ಕೃತಕ ಬಣ್ಣಗಳನ್ನು ಬಳಸಲಾಗುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಸೀಮೆಸುಣ್ಣ,

ಯೂರಿಯಾ (Urea) , ಸಾಬೂನು, ಬಿಳಿಮಾಡುವ ಏಜೆಂಟ್, ಇತ್ಯಾದಿಗಳಂತಹ ಕೃತಕ ಪದಾರ್ಥಗಳನ್ನು ಕೂಡ ಕ್ಯಾಂಡಿಗೆ ಸೇರಿಸಲಾಗುತ್ತದೆ. ಇಂತಹ ವಸ್ತುಗಳನ್ನು ಸೇರಿಸುವುದರಿಂದ ಆರೋಗ್ಯಕ್ಕೆ ಭಾರೀ ಕುತ್ತು ತರಬಹುದು.


ಇದೇ ರೀತಿ ಅತ್ಯಂತ ಗಲೀಜಾಗಿ, ನಾನಾ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಮಕ್ಕಳು ತಿನ್ನೋ ಕ್ಯಾಂಡಿ ಹಾಗೂ ಇತರೆ ಸ್ವೀಟ್‌ ತಯಾರಿಸುತ್ತಿದ್ದ ದೊಡ್ಡ ಫ್ಯಾಕ್ಟರಿಗೆ ಹೈದರಾಬಾದ್‌

(Hyderabad) ಪೊಲೀಸರು ದಾಳಿ ಮಾಡಿ ಕಲಬೆರಕೆ ಸಿಹಿತಿಂಡಿ ತಯಾರಿಸುತ್ತಿದ್ದ ಭಾರೀ ಮಾಫಿಯಾವನ್ನೂ ಭೇದಿಸಿದ್ದರು. ಮೆಟ್ರೋಪಾಲಿಟನ್ (Metropolitan) ಸೌತ್ ಡಿಸ್ಟ್ರಿಕ್ಟ್

ಟಾಸ್ಕ್ ಫೋರ್ಸ್ ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಹೈದರಾಬಾದ್‌ನ ಲಾಲ್ ದರ್ವಾಜಾ ಪ್ರದೇಶದಲ್ಲಿ ನಕಲಿ ಕ್ಯಾಂಡಿ ದಂಧೆಯನ್ನು ಬಯಲು ಮಾಡಿದ್ದಾರೆ.


ಹಾಳಾದ ಹಾಲಿನ ಪುಡಿ ಮತ್ತು ರಾಸಾಯನಿಕಗಳೊಂದಿಗೆ ಕಲಕಂಡ, ಅಜ್ಮೀರಿ ಕಲಕಂಡ ಮತ್ತು ಖೋವಾ ಮುಂತಾದ ಸಿಹಿತಿಂಡಿಗಳನ್ನು ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು.

ಈ ಸಿಹಿತಿಂಡಿಗಳನ್ನು ತಯಾರಿಸುತ್ತಿದ್ದ ಜಾಗವಂತು ಅತ್ಯಂತ ಕೊಳಕಾಗಿತ್ತು. ಆ ಜಾಗವೇ ನಾನಾ ರೋಗಗಳ ಕೇಂದ್ರವಾಗಿತ್ತು. ಅಲ್ಲದೆ ಸಿಹಿತಿಂಡಿ ತಯಾರಿಸಲು ನಾನಾ ಅಪಾಯಕಾರಿ

ಕೆಮಿಕಲ್‌ಗಳನ್ನು (Chemical) ಕೂಡ ಬಳಸುತ್ತಿದ್ದರು. ಕೊಳಕು ಸ್ವೀಟ್‌ಗೆ (Police raid on food mafia) ಸರ್ಕಾರಿ ಹಾಲು !


ಈ ಮಾಫಿಯಾದ ಜಾಲ ಭಾರೀ ವಿಶಾಲವಾಗಿದೆ. ದಂಧೆಕೋರರು ಬಾಲ ಗೋಪಾಲ್ ಯೋಜನೆ ಅಡಿಯಲ್ಲಿ ರಾಜಸ್ಥಾನ (Rajasthan) ಸರ್ಕಾರ ಉಚಿತವಾಗಿ ನೀಡುತ್ತಿರುವ ಹಾಲಿನ ಪುಡಿಯನ್ನು

ಅಕ್ರಮವಾಗಿ ತೆಲಂಗಾಣಕ್ಕೆ ರವಾನೆ ಮಾಡಿ ಅದಕ್ಕೆ ವಿವಿಧ ರಾಸಾಯನಿಕಗಳನ್ನು ಬೆರೆಸಿ ಸಿಹಿತಿಂಡಿಗಳನ್ನು ತಯಾರಿಸುತ್ತಿದ್ದರು.ಹಲವಾರು ನಕಲಿ/ಕಲಬೆರಕೆ ಸಿಹಿ ತಿಂಡಿಗಳನ್ನು ತಪಾಸಣೆ

ವೇಳೆ ಸ್ವಾಧೀನಪಡಿಸಿಕೊಂಡಿದ್ದಾರೆ. ಯಾವೆಲ್ಲಾ ಪ್ರದೇಶಗಳಿಗೆ ಎಷ್ಟೆಷ್ಟು ಸರಬರಾಜು ಮಾಡುತ್ತಿದ್ದರು ಮತ್ತು ಈ ನಕಲಿ ದಂಧೆಯನ್ನು ಎಷ್ಟು ದಿನದಿಂದ ಮಾಡುತ್ತಿದ್ದರು?

ಎಂಬುದರ ಬಗ್ಗೆ ಪೊಲೀಸರು ಮತ್ತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ರಶ್ಮಿತಾ ಅನೀಶ್

Exit mobile version