ಮುಟ್ಟಿನ ನೋವು ನಿವಾರಣೆ ಹೇಗೆ?

Remedy for Period Pain: ಮುಟ್ಟಿನ ಸಂದರ್ಭದಲ್ಲಿ ಕೆಲ ಹೆಣ್ಣು ಮಕ್ಕಳಿಗೆ ತುಂಬಾ ಹೊಟ್ಟೆ ನೋವು ಆಗುತ್ತೆ. ಆದ್ರೆ ಆ ನೋವನ್ನು ಕೆಲ ಆಹಾರ ಸೇವನೆಯಿಂದ ಕಡಿಮೆ ಮಾಡಿಕೊಳ್ಳಬಹುದು.

ಹಾಗಾದ್ರೆ ಆ ಆಹಾರಗಳು ಯಾವುವು ಅಂತ ತಿಳಿಯೋಣ ಬನ್ನಿ

1) ಬೀಟ್ರೂಟ್ (Beetroot) : ಇದು ಅತ್ಯಂತ ಶಕ್ತಿಶಾಲಿ ತರಕಾರಿಗಳಲ್ಲಿ ಒಂದಾಗಿದ್ದು, ಇದ್ರಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದೆ. ಮುಟ್ಟಿನ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವವಾಗಿ ರಕ್ತದ ಪ್ರಮಾಣ ಕಡಿಮೆ

ಆಗುವ ಚಾನ್ಸ್ ಇರುತ್ತೆ. ಬೀಟ್ರೂಟ್‌ನಲ್ಲಿ ಬೀಟಾ ಕೆರೋಟಿನ್ (Beta carotene) , ಉತ್ಕರ್ಷಣ ನಿರೋಧಕಗಳು ಇರೋದ್ರಿಂದ ರಕ್ತದ ಉತ್ಪತ್ತಿಯನ್ನು ಜಾಸ್ತಿ ಮಾಡುತ್ತೆ. ಅಲ್ಲದೆ ಸುಸ್ತನ್ನು ಕಡಿಮೆ ಮಾಡುತ್ತೆ.

2) ಕಪ್ಪು ಒಣದ್ರಾಕ್ಷಿ:- ಇದ್ರಲ್ಲಿ ವಿಟಮಿನ್ (Vitamin) , ಖನಿಜಗಳು ಹಾಗೂ ಉತ್ಕರ್ಷಣ ನಿರೋಧಕಗಳು ಜಾಸ್ತಿ ಇರೋದ್ರಿಂದ ಋತುಚಕ್ರದ ನೋವನ್ನು ನಿಯಂತ್ರಿಸುವ ಗುಣ ಇದೆ.

ಬೆಳಗಾವಿಯಾಗಲಿದೆಯಾ ಮೂರು ಭಾಗ? ಸತೀಶ್ ಜಾರಿಕಿಹೊಳಿಯವರಿಂದ ಮಾಹಿತಿ ಬಯಲು

ಇದನ್ನು ಮುಟ್ಟಾದ ಸಮಯದಲ್ಲಿ ತಿಂದ್ರೆ ಸ್ನಾಯು ಹಾಗೂ (remedy for period pain) ಮೂಳೆಗಳಿಗೆ ಹೆಚ್ಚಿನ ಬಲ ಕೊಡುತ್ತೆ.


3) ಪುದೀನಾ ಮತ್ತು ನಿಂಬೆಹಣ್ಣು :- ಪುದೀನದಲ್ಲಿ ಮೆಂಥಾಲ್ (Menthol) ಎಂಬ ಎಣ್ಣೆಯ ಅಂಶವಿದ್ದು, ಹೊಟ್ಟೆಯ ಸೆಳೆತವನ್ನು ಶಾಂತಗೊಳಿಸುತ್ತೆ. ಇದು ಬಲವಾದ ಆಂಟಿಬ್ಯಾಕ್ಟೀರಿಯಾ ಮತ್ತು ನಂಜು

ನಿರೋಧಕ ಶಕ್ತಿಯನ್ನು ಹೊಂದಿದೆ. ನಿಂಬೆಹಣ್ಣು ಹೊಟ್ಟೆ ಉಬ್ಬರಿಸುವುದನ್ನು ಕಡಿಮೆ ಮಾಡುವುದಲ್ಲದೆ ದೇಹದಲ್ಲಿನ ಉಷ್ಣವನ್ನು ಶಮನಗೊಳಿಸುತ್ತೆ.


4) ಬಾಳೆಹಣ್ಣು:- ಇನ್ನು ಬಾಳೆಹಣ್ಣಿನಲ್ಲಿ ಮೆಗ್ನೀಷಿಯಂ ಪ್ರಮಾಣ ಹೆಚ್ಚಿರೋದ್ರಿಂದ ಇದು ಮುಟ್ಟಾದ ಸಮಯದಲ್ಲಿ ಹೊಟ್ಟೆಯ ಪಿಹೆಚ್ (PH) ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ನೋವನ್ನು

ಕಡಿಮೆ ಮಾಡುವುದಲ್ಲದೆ ಹೊಟ್ಟೆಯ ಹುಣ್ಣುಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಾಶಮಾಡುತ್ತೆ.

5) ಸೌತೆಕಾಯಿ – ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿದ್ದು, ಇದನ್ನು ಮುಟ್ಟಾದಾಗ ಸೇವಿಸೋದ್ರಿಂದ ಮಲಬದ್ಧತೆಯನ್ನು ತಡೆಯುತ್ತೆ. ಅಲ್ಲದೆ ಸಿಪ್ಪೆಯ ಜೊತೆಗೆ ತಿನ್ನೋದ್ರಿಂದ್ರೆ ಇನ್ನೂ ಒಳ್ಳೆಯದು.

Exit mobile version