ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ : ಶಿಮ್ಲಾದ ಸಮ್ಮರ್ ಹಿಲ್ ಪ್ರದೇಶದಲ್ಲಿ ಭೂಕುಸಿತ : ಮುಂದುವರಿದ ರಕ್ಷಣಾ ಕಾರ್ಯಾಚರಣೆ, ಇಲ್ಲಿಯವರೆಗೆ 81 ಮಂದಿ ಸಾವು

Shimla : ಉತ್ತರಾಖಂಡ (Shimla SummerHill area Landslided)ದಲ್ಲಿ ಮತ್ತು ಹಿಮಾಚಲ ಪ್ರದೇಶ ಗಳಲ್ಲಿ ಉಂಟಾಗಿರುವ ನಿರಂತರ ಮಳೆ ಮತ್ತು ಭೂ

ಕುಸಿತ ಉಂಟಾಗಿ ಸುಮಾರು 81 ಜನರು ಮೃತಪಟ್ಟಿದ್ದಾರೆ. ಹಲವಾರು ಸ್ಥಳಗಳಲ್ಲಿ ಮನೆಯ ಅವಶೇಷಗಳಡಿ ಸಿಲುಕಿರುವ ದೇಹಗಳನ್ನು ಹೊರತೆಗೆಯಲು ಮತ್ತು ಗಾಯಾಳುಗಳನ್ನು

ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.ಅಷ್ಟೇ ಅಲ್ಲದೆ ಈ ಬಗ್ಗೆ ಹವಾಮಾನ ಇಲಾಖೆಯು (Meteorological Department) ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ

ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯಾಗಲಿದೆ (Shimla SummerHill area Landslided) ಎಂದು ಮುನ್ಸೂಚನೆ ನೀಡಿದೆ.

ನಿರಂತರವಾದ ಮಳೆ ಮತ್ತು ಭೂ ಕುಸಿತದಿಂದ(Land subsidence) ತತ್ತರಿಸಿರುವ ಹಿಮಾಚಲ ಪ್ರದೇಶದಲ್ಲಿ ಮೃತರ ಸಂಖ್ಯೆ ಬುಧವಾರದಂದು 71ಕ್ಕೆ ಏರಿಕೆಯಾಗಿದ್ದು, ಹೆಚ್ಚಿನ ಮೃತದೇಹಗಳು

ಪತ್ತೆಯಾಗಿವೆ. ಅಷ್ಟೇ ಅಲ್ಲದೆ ಕನಿಷ್ಠ 71 ಜನರು ಕಳೆದ ಮೂರು ದಿನಗಳಲ್ಲಿ ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಒಟ್ಟು 57 ಶವಗಳನ್ನು ಭಾನುವಾರ ರಾತ್ರಿಯಿಂದ

ಹೊರ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಲೋಕಸಭೆ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಸಂಘರ್ಷ : ಹಲವು ಕ್ಷೇತ್ರಗಳಲ್ಲಿ ಭಾರೀ ಲಾಬಿ

ಇನ್ನು ಭೂಕುಸಿತವು ಶಿಮ್ಲಾ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಉಂಟಾಗಿದೆ. ಇಲ್ಲಿ ಮುಖ್ಯವಾಗಿ ಮೂರು ಪ್ರದೇಶಗಳು- ಸಮ್ಮರ್ ಹಿಲ್(Summer Hill), ಫಾಗ್ಲಿ(Fogly) ಮತ್ತು ಕೃಷ್ಣ ನಗರವು

(Krishna Nagara) ತೀವ್ರವಾಗಿ ಭೂಕುಸಿತದಿಂದ ಹಾನಿಗೊಳಗಾಗಿವೆ. ಮುಂಗಾರು ಪ್ರಾರಂಭವಾದಾಗಿನಿಂದ ಅಂದರೆ ಜೂನ್ 24 ರಿಂದ ಒಟ್ಟು 214 ಜನರು ರಾಜ್ಯದಲ್ಲಿ ಮಳೆ

ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ ಅಷ್ಟೇ ಅಲ್ಲದೆ 38 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ತಿಳಿಸಿದೆ.

ಭರದಿಂದ ರಕ್ಷಣಾ ಕಾರ್ಯಾಚರಣೆಗಳು ಸಮ್ಮರ್ ಹಿಲ್ ಮತ್ತು ಕೃಷ್ಣ ನಗರ ಪ್ರದೇಶಗಳಲ್ಲಿ ನಡೆಯುತ್ತಿವೆ. ಮೃತದೇಹವನ್ನು ಸಮ್ಮರ್ ಹಿಲ್ ಸೈಟ್‌ನಿಂದ ವಶಪಡಿಸಿಕೊಳ್ಳಲಾಗಿದೆ

ಎಂದು ಶಿಮ್ಲಾ ಡೆಪ್ಯುಟಿ ಕಮಿಷನರ್(Deputy Commissioner) ಆದಿತ್ಯ ನೇಗಿ (Aditya Negi)ತಿಳಿಸಿದ್ದಾರೆ. ಸಮ್ಮರ್ ಹಿಲ್‌ನಲ್ಲಿ ಇದುವರೆಗೆ 13, ಕೃಷ್ಣನಗರದಲ್ಲಿ ಎರಡು ಮತ್ತು

ಫಾಗ್ಲಿಯಲ್ಲಿ ಐದು ಮೃತ ದೇಹಗಳು ಪತ್ತೆಯಾಗಿವೆ.

ಇದನ್ನೂ ಓದಿ : UP ಎನ್‌ಕೌಂಟರ್‌: ಉ.ಪ್ರದೇಶದಲ್ಲಿ 2017 ರಿಂದ ನಡೆದ 183 ಎನ್‌ಕೌಂಟರ್‌ಗಳ ವಿವರ ಕೇಳಿದ ಸುಪ್ರೀಂ ಕೋರ್ಟ್‌

ಇನ್ನೂ ಕೂಡ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಭಯಾಭೀತಾರಾಗಿದ್ದು ಕೃಷ್ಣಾ ನಗರದಲ್ಲಿನ ಸುಮಾರು 15 ಮನೆಗಳನ್ನು ಭೂಕುಸಿತ ಸಂಭವಿಸುವ ಭೀತಿಯಲ್ಲಿ

ತೆರವುಗೊಳಿಸಲಾಗಿದ್ದು, ಸುರಕ್ಷಿತ ಸ್ಥಳಗಳಿಗೆ ಕುಟುಂಬಗಳು ಸ್ಥಳಾಂತರಗೊಂಡಿವೆ. ಈ ವರ್ಷ 54 ದಿನಗಳ ಮುಂಗಾರಿನಲ್ಲಿ ಹಿಮಾಚಲ ಪ್ರದೇಶವು ಈಗಾಗಲೇ 742 ಮಿಮೀ ಮಳೆಯನ್ನು ಕಂಡಿದೆ.

ರಶ್ಮಿತಾ ಅನೀಶ್

Exit mobile version