ಮುಂದುವರಿದ ದೇಶಗಳಾದ ಅಮೇರಿಕಾ, ಸೌದಿ ಅರೇಬಿಯಾ ತಮ್ಮ ದೇಶದ ಕಸವನ್ನು ಪಾಕಿಸ್ತಾನದಲ್ಲಿ ಹಾಕುತ್ತದೆ

Plastic

ಜನಸಂಖ್ಯೆ(Population) ಹೆಚ್ಚಾದಂತೆ ಉತ್ಪತ್ತಿಯಾಗುವ ಕಸದ ಪ್ರಮಾಣವೂ ಹೆಚ್ಚಾಗುತ್ತದೆ. ಕಸದ ಪ್ರಮಾಣ ಹೆಚ್ಚಾದಂತೆ, ಕಸ ವಿಲೇವಾರಿಯ ಸಮಸ್ಯೆಯೂ ಕಾಡುತ್ತದೆ. ಕಸದ ಅತಿಯಾದ ಉತ್ಪಾದನೆಯು ಪರಿಸರಕ್ಕೆ ಮಾರಕವಾಗಿದೆ.

ಆದರೆ, ಸಂಗ್ರಹವಾಗುವ ಕಸ ಪರಿಸರದ ಮೇಲೆ ಉಂಟು ಮಾಡುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಯೋಚಿಸದೆ ನಾವು ನಿರ್ಲಕ್ಷ್ಯ ತೋರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಎದ್ದು ಕಾಣುತ್ತಿದೆ.

ಸರಕುಗಳು, ಸೇವೆಗಳು ಮತ್ತು ಆಹಾರದ ಅನಿಯಂತ್ರಿತ ಬಳಕೆಗಳಿಂದಾಗಿ ನಮ್ಮ ನಗರಗಳಲ್ಲಿ ದಿನನಿತ್ಯ ಟನ್ ಗಟ್ಟಲೆ ಕಸ ಉತ್ಪಾದನೆಯಾಗುತ್ತದೆ.

ಇಂತಹ ಕಸ ಸರಿಯಾಗಿ ವಿಲೇವಾರಿಯಾಗದೇ ಇದ್ದಲ್ಲಿ, ಜೀವ ಜಗತ್ತಿನ ಮೂರು ಅಗತ್ಯ ಅಂಶಗಳಾದ ಮಣ್ಣು, ಗಾಳಿ ಮತ್ತು ನೀರಿನ ಮಾಲಿನ್ಯ ಹೆಚ್ಚಾಗಿ, ಜೀವಿಗಳ ಆರೋಗ್ಯ ಮತ್ತು ಯೋಗಕ್ಷೇಮವು ಹದಗೆಡುತ್ತದೆ.

https://vijayatimes.com/prathap-simha-slams-devanur-mahadeva/

ಇಂತಹ ಕಸದ ಸಮಸ್ಯೆ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ, ಎಲ್ಲಾ ದೇಶಗಳಲ್ಲಿಯೂ ಇದೆ. ನಮ್ಮ ಪಕ್ಕದ ರಾಷ್ಟ್ರ ಪಾಕಿಸ್ತಾನದಲ್ಲಿಯೂ(US Dump garbage in pakistan) ಕಸ ವಿಲೇವಾರಿಯ ಸಮಸ್ಯೆ ಪದೇ ಪದೇ ಎದುರಾಗುತ್ತಲೇ ಇರುತ್ತದೆ. ಇದಕ್ಕೆ ಕಾರಣ ಪಾಕಿಸ್ತಾನದಲ್ಲಿ ಉತ್ಪತ್ತಿಯಾಗುವ ಕಸವಷ್ಟೇ ಅಲ್ಲ,

ಮುಂದುವರಿದ ರಾಷ್ಟ್ರಗಳಾದ ಅಮೇರಿಕಾ(America) ಹಾಗೂ ಸೌದಿ ಅರೇಬಿಯಾ(Saudhi Arabia) ದೇಶಗಳು ತಮ್ಮ ದೇಶದ ಟನ್ ಗಟ್ಟಲೆ ಕಸವನ್ನು ಪಾಕಿಸ್ತಾನದಲ್ಲಿ ಹಾಕುತ್ತಿವೆ! ಇನ್ನೂ ಅಚ್ಚರಿಯ ವಿಷಯ ಎಂದರೆ, ಇದನ್ನು ಪಾಕಿಸ್ತಾನ ದೇಶವೇ ಒಪ್ಪಿಕೊಂಡಿದೆಯಂತೆ!
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಅಮೇರಿಕಾದಲ್ಲಿ ಉತ್ಪತ್ತಿಯಾಗುವ ಬಹುಪಾಲು ತ್ಯಾಜ್ಯವು ಅಂತರ್ಗತವಾಗಿ ಅಪಾಯಕಾರಿ ಅಲ್ಲ. ಇದು ಕಾಗದ, ಮರ, ಪ್ಲಾಸ್ಟಿಕ್‌ಗಳು, ಗಾಜು, ಲೋಹಗಳು ಮತ್ತು ರಾಸಾಯನಿಕಗಳು,

ಹಾಗೆಯೇ ಕೈಗಾರಿಕಾ, ವಾಣಿಜ್ಯ, ಕೃಷಿ ಮತ್ತು ವಸತಿ ಮೂಲಗಳಿಂದ ಉತ್ಪತ್ತಿಯಾಗುವ ಇತರ ವಸ್ತುಗಳನ್ನು ಒಳಗೊಂಡಿದೆ. ಈ ತ್ಯಾಜ್ಯಗಳನ್ನು ಅಪಾಯಕಾರಿ ಎಂದು ವ್ಯಾಖ್ಯಾನಿಸದಿದ್ದರೂ, ಅವುಗಳ ಅಸಮರ್ಪಕ ನಿರ್ವಹಣೆಯು ಪರಿಸರ ಮತ್ತು ಮಾನವನ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವುದಂತೂ ಖಚಿತ. ಆದ್ದರಿಂದ, ಯಾವುದೇ ದೇಶವಾಗಲಿ ನಾವೆಲ್ಲರೂ ಇರುವುದು ಭೂಮಿಯ ಮೇಲೆ.

ಈ ಭೂಮಿಯನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ಭೂತಾಯಿಯು ನಮ್ಮನ್ನು ತನ್ನ ಒಡಲಲ್ಲಿ ಸುರಕ್ಷಿತವಾಗಿ ಕಾಪಾಡುತ್ತಾಳೆ.
Exit mobile version