ಸೌಂದರ್ಯ ವೃದ್ದಿಗಾಗಿ ಯಾವೆಲ್ಲಾ ತರಕಾರಿ ತಿನ್ನುವುದು ಒಳಿತು? ಇಲ್ಲಿದೆ ಮಾಹಿತಿ

veggie

ಸೌಂದರ್ಯ(Beauty) ವೃದ್ದಿಗಾಗಿ ಕೇವಲ ಮೇಕಪ್ ಮೊರೆ ಹೋಗದೆ ತರಕಾರಿಗಳನ್ನು(Vegetables) ತಿನ್ನುವುದರಿಂದ ಸೌಂದರ್ಯದ ಜೊತೆಗೆ ಆರೋಗ್ಯ ಕೂಡ ವೃದ್ದಿಸುತ್ತದೆ. ಅದರಲ್ಲೂ ವಿಟಮಿನ್ಗಳ(Vitamins) ಕೊರತೆಯೇ ವ್ಯಕ್ತಿಯ ಸೌಂದರ್ಯವನ್ನು ಹಾಳುಗೆಡಲು ಕಾರಣವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಅಗತ್ಯ ವಿಟಮಿನ್ಗಳನ್ನು ಪಡೆದಲ್ಲಿ ದೇಹ ವಯಸ್ಸಿಗೆ ತಕ್ಕಷ್ಟು ತೂಕವನ್ನೂ, ಶಕ್ತಿಯನ್ನೂ ಪಡೆದಿರುತ್ತದೆ. ಹಾಗಾದ್ರೆ ಯಾವ ತರಕಾರಿಗಳನ್ನು ತಿನ್ನುವುದರಿಂದ ಯಾವ ವಿಟಮಿನ್(Vitamin) ದೊರಕುತ್ತದೆ ಎಂಬುವುದನ್ನು ನಾವು ತಿಳಿಸುತ್ತೇವೆ.


ವಿಟಮಿನ್ ಎ : ಹೇರಳವಾಗಿರುವ ಕ್ಯಾರೆಟ್, ಮಾವಿನಹಣ್ಣು, ಪಪ್ಪಾಯ, ಟೊಮ್ಯಾಟೋ, ಕ್ಯಾಬೇಜ್, ಬಸಳೆ ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಚರ್ಮ ಕೋಮಲವಾಗಿಯೇ ಇರುತ್ತದೆ ಹಾಗೂ ದೇಹ ಸುಕ್ಕಾಗುವುದನ್ನು ತಪ್ಪಿಸಬಲ್ಲದು. ಯೌವನವನ್ನು ವೃದ್ದಿಸಿಕೊಳ್ಳವುದಕ್ಕೆ ಇದೊಂದು ಉತ್ತಮ ದಾರಿಯಾಗಿದೆ.


ವಿಟಮಿನ್ B : ಬಿ16 ಇವು ಹೇರಳವಾಗಿರುವ ಆಹಾರ ಸೇವನೆಯಿಂದ ಕೂದಲಿನ ಆರೋಗ್ಯ ಮತ್ತು ದೇಹದ ಆರೋಗ್ಯವೂ ಸುಧಾರಿಸುತ್ತದೆ. ಮೊಟ್ಟೆ, ಬೀನ್ಸ್, ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ `ಬಿ’ ಜೀವಸತ್ವ ಹೆಚ್ಚಾಗಿರುತ್ತದೆ. ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.


ವಿಟಮಿನ್ C : ಲಿಂಬು, ಕಿತ್ತಳೆ, ದ್ರಾಕ್ಷಿ, ನೆಲ್ಲಿಕಾಯಿ ಮುಂತಾದ ಹುಳಿ ಪದಾರ್ಥಗಳಲ್ಲಿ `ಸಿ’ ಜೀವಸತ್ವ ಇರುವುದರಿಂದ ವಿಟಮಿನ್‌ ಸಿ ಕೂಡ ಸಹ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.


ವಿಟಮಿನ್ E : ಸಹ ಚರ್ಮಕ್ಕೆ ಸಂಬಂಧಿಸಿದ ಜೀವಕೋಶಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಬಾದಾಮಿ, ಟೊಮ್ಯಾಟೊ, ಮಾವಿನ ಹಣ್ಣು ಮುಂತಾದ ಪದಾರ್ಥಗಳಲ್ಲಿ ವಿಟಮಿನ್ E ಹೇರಳವಾಗಿರುತ್ತದೆ.

Exit mobile version