ಸರ್ಕಾರಿ ವಾಹನ ಬಳಸಿ ಅಧಿಕಾರಿಗಳ ಖಾಸಗಿ ದರ್ಬಾರು!

government


ಯರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ. ಸರ್ಕಾರಿ ಕಾರು ಖಾಸಗಿ ದರ್ಬಾರು. ಸರ್ಕಾರಿ ವಾಹನ ಬಳಸಿ ಅಧಿಕಾರಿಗಳ ಖಾಸಗಿ ದರ್ಬಾರು
ಒಬ್ಬೊಬ್ಬ IAS ಅಧಿಕಾರಿ ಬಳಿ ಏಳೆಂಟು ಸರ್ಕಾರಿ ವಾಹನಗಳು
ಹೆಂಡತಿಗೊಂದು, ಅತ್ತೆಗೊಂದು, ಮಕ್ಕಳಿಗೊಂದು ಕಾರು ಬಳಕೆ !
ಕಾನೂನು ಕಾಲ ಕಸ ಮಾಡಿ ಅಧಿಕಾರಿಗಳಿಂದ ತೆರಿಗೆ ಹಣ ಪೋಲು. ವೇಣುಗೋಪಾಲ, ಅಧ್ಯಕ್ಷರು, ಸರ್ಕಾರಿ ವಾಹನ ಚಾಲಕರ ಸಂಘ
ಯಸ್‌!

ಇದು ನಮ್ಮ ರಾಜ್ಯದ ಸರ್ಕಾರಿ ಅಧಿಕಾರಿಗಳು ಜನರ ತೆರಿಗೆ ಹಣದಲ್ಲಿ ಮಾಡ್ತಿರೋ ದರ್ಬಾರು. ಒಬ್ಬೊಬ್ಬ ಉನ್ನತ ಅಧಿಕಾರಿ ಮನೆಯಲ್ಲಿ ಐದಾರು ಸರ್ಕಾರಿ ವಾಹನಗಳ ದುರ್ಬಳಕೆಯಾಗ್ತಿದೆ. ಊರಿನ ಜನರಿಗೆ ಬುದ್ಧಿ ಹೇಳುವ, ಇತರರಿಗೆ ಮಾದರಿಯಾಗಬೇಕಿದ್ದ ಐಎಎಸ್‌ ಹಾಗೂ ಐಪಿಎಸ್ ಅಧಿಕಾರಿಗಳ ಮನೆಯಲ್ಲೇ ಆರೇಳು ಸರ್ಕಾರಿ ವಾಹನಗಳ ಬಳಕೆಯಾಗ್ತಿವೆ. ವೇಣುಗೋಪಾಲ, ಅಧ್ಯಕ್ಷರು, ಸರ್ಕಾರಿ ವಾಹನ ಚಾಲಕರ ಸಂಘ, ಹೆಂಡ್ತಿಗೊಂದು, ಅತ್ತೆಗೊಂದು, ಮಕ್ಕಳಿಗೊಂದು, ಶಾಪಿಂಗ್‌ಗೆ ಒಂದು, ಏರ್‌ಪೋರ್ಟ್‌ ಪಿಕ್ಅಪ್‌ಗೆ ಒಂದು ಹೀಗೆ ಅವ್ಯಾಹತವಾಗಿ ಸರ್ಕಾರಿ ವಾಹನಗಳನ್ನು ಅಕ್ರಮವಾಗಿ ಬಳಸಿ ಮೋಜು ಮಾಡ್ತಿದ್ದಾರೆ ಅಧಿಕಾರಿಗಳು.

ಇದಕ್ಕೆ ಪೂರಕವಾದ ಸಾಕ್ಷಿಗಳು ವಿಜಯಟೈಮ್ಸ್‌ ಭಾನುವಾರ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಬಟಾ ಬಯಲಾಗಿದೆ. ಸರ್ಕಾರಿ ನಿಯಮಗಳ ಪ್ರಕಾರ ಸರ್ಕಾರಿ ವಾಹನಗಳನ್ನು ಸರ್ಕಾರಿ ಉದ್ದೇಶಕ್ಕೆ ಮಾತ್ರ ಬಳಸಬೇಕು. ಬೇರೆ ಯಾವ ಉದ್ದೇಶಕ್ಕೂ ಬಳಸುವ ಹಾಗಿಲ್ಲ. ಅಲ್ಲದೆ ಸರ್ಕಾರಿ ಕೆಲಸದ ಸಮಯದ ವೇಳೆ ಮಾತ್ರ ವಾಹನ ಓಡಿಸಬೇಕು. ಒಂದು ವೇಳೆ ಬೇರೆ ಸಮಯದಲ್ಲಿ ಓಡಿಸಬೇಕು ಅಂತ ಅಂದ್ರೆ, ಅದಕ್ಕೆ ವಿಶೇಷ ಅನುಮತಿ ಪಡೆಯಬೇಕು. ಇದಕ್ಕೆ ಪೂರಕ ದಾಖಲೆ ಇಲ್ಲಿದೆ ನೋಡಿ. ಇನ್ನು ಸರ್ಕಾರಿ ವಾಹನಗಳನ್ನು ಸರ್ಕಾರಿ ಕಚೇರಿಗಳಲ್ಲೇ ಪಾರ್ಕ್‌ ಮಾಡಬೇಕು ಅನ್ನೋ ನಿಯಮ ಇದೆ ಗೊತ್ತಾ?


ಇಷ್ಟೆಲ್ಲಾ ನಿಯಮಗಳಿದ್ರೂ ಸರ್ಕಾರಿ ವಾಹನಗಳೆಲ್ಲಾ ರಜಾದಿನಗಳಂದೂ ಅಧಿಕಾರಿಗಳ ಮನೆ ಮುಂದೆಯೇ ಪಾರ್ಕ್ಆಗಿರುತ್ತವೆ. ಸರ್ಕಾರಿ ವಾಹನಗಳ ದುರ್ಬಳಕೆ ಬಗ್ಗೆ ಫೀಲ್ಡ್ಗಿಳಿದು ಚೆಕ್ ಮಾಡಿದಾಗ ಇವರ ಇನ್ನಷ್ಟು ಹಣೆಬರಹಗಳು ಬಯಲಾದವು.
ಇವು ಒಂದೆರೆಡು ಉದಾಹರಣೆಗಳಷ್ಟೇ ಉನ್ನತ ಅಧಿಕಾರಿಗಳು ಅಧಿಕಾರದ ಮದದಿಂದ ವಾಹನಗಳ ದುರ್ಬಳಕೆ ಮಾತ್ರವಲ್ಲ, ವಾಹನ ಚಾಲಕರಿಗೂ ಕಿರುಕುಳಕೊಡುತ್ತಿದ್ದಾರೆ ಅನ್ನೋದು ಇವರ ನೇರ ದೂರು.

Exit mobile version