Deadly Diet : ಹೃದಯ ಸ್ತಂಭನಕ್ಕೂ ಡಯಟ್‌ಗೂ ಸಂಬಂಧ ಇದೆಯಾ? ಡಯಟ್‌ ಮಾಡುವವರು ಒಮ್ಮೆ ಈ ವರದಿ ಓದಿ

ಸಾಮಾನ್ಯವಾಗಿ ನಾವು ಡಯಟ್ (Diet) ಮಾಡುವುದು ಯಾವಾಗ ಅಂದ್ರೆ ನಮ್ಮ ದೇಹದ ತೂಕ ಸರಿ (will diet causes heartattack) ಇಲ್ಲದಿದ್ದಾಗ. ಅತಿಯಾದ ಬೊಜ್ಜು ನಮ್ಮ ದೇಹವನ್ನು

ಆವರಿಸಿದಾಗ. ವಿಪರೀತ ಕೊಲೆಸ್ಟ್ರಾಲ್ (Cholesterol) ಹೆಚ್ಚಾಗಿ ನಮ್ಮ ದೇಹದಲ್ಲಿ ಬಗೆಬಗೆಯ ಕಾಯಿಲೆಗಳು ಪ್ರಾರಂಭವಾದಾಗ ನಾವು ಆಹಾರದ ಸೇವನೆಯನ್ನು ನಿಯಂತ್ರಿಸಿ,

ನಿಯಮಿತ ವ್ಯಾಯಾಮ ಮಾಡಿ ದೇಹವನ್ನು (will diet causes heartattack) ಸುಸ್ಥಿತಿಗೆ ತರುತ್ತೇವೆ.

ಆದ್ರೆ ನಾವು ಅನುಸರಿಸುವ ಡಯಟ್ ಪದ್ಧತಿ ಸರಿಯಾಗಿದೆಯಾ? ಆಹಾರ ತಜ್ಞರ ಸಲಹೆ ಪಡೆದು ನಾವು ಡಯಟ್‌ ಮಾಡುತ್ತಿದ್ದೇವೆಯಾ? ಅನ್ನೋದು ಇಲ್ಲಿ ಅತೀ ಮುಖ್ಯವಾಗುತ್ತದೆ. ಇಲ್ಲದಿದ್ದರೆ ದೇಹವನ್ನು

ಸುಸ್ಥಿತಿಗೆ ತರಬೇಕಾದ ಡಯಟ್‌ (Diet) ನಮ್ಮ ಆರೋಗ್ಯಕ್ಕೆ ಹಾನಿಕರವಾಗಬಹುದು ಜೋಕೆ ! ಯಾಕಂದ್ರೆ ಕೆಲ ಡಯಟ್‌ನಿಂದ ಪದ್ಧತಿಯಿಂದ ದೇಹದ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಉಂಟಾಗುತ್ತವೆ.

ಅದು ಪ್ರಾಣಕ್ಕೂ ಕುತ್ತಾಗಬಹುದು ಗೊತ್ತಾ? ಡಯಟ್ ನಮ್ಮ ದೇಹದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುವುದಲ್ಲದೆ. ನಮಗೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತರಬಹುದು.

ಅದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಡಯಟ್ ಮಾಡುವುದರಿಂದ ತೂಕ ಹೆಚ್ಚಾಗಬಹುದು !
ಸಂಶೋಧನೆಯ ಪ್ರಕಾರ ವಿಪರೀತ ಅಥವಾ ಹೆಚ್ಚು ಡಯಟ್ ಪದ್ಧತಿಯನ್ನು ಅನುಸರಿಸುವ ಜನರ ದೇಹದ ತೂಕ ಕಡಿಮೆಯಾಗುವ ಬದಲು ಹೆಚ್ಚಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಆದರೆ ದೇಹದಲ್ಲಿ

ಮಾಂಸಖಂಡಗಳ ಸಾಂದ್ರತೆ ಮಾತ್ರ ಕಡಿಮೆಯಾಗುತ್ತದೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ (Journal of Clinical Nutrition) ತನ್ನ ಅಧ್ಯಯನದಲ್ಲಿ ಪ್ರಕಟಿಸಿರುವ ಹಾಗೆ ಬೊಜ್ಜು

ತುಂಬಿದವರು ಸುಮಾರು ಮೂರು ವಾರಗಳಲ್ಲಿ 1300 ಕ್ಯಾಲೋರಿಗಳ (Calorie) ಪ್ರಮಾಣದ ಆಹಾರ ಸೇವನೆಯನ್ನು ಕಡಿಮೆ ಮಾಡುವ ಕಾರಣ ತಮ್ಮ ಮೊದಲಿನ ದೇಹದ ತೂಕಕ್ಕಿಂತ ಹೆಚ್ಚಿನ ತೂಕ

ಪಡೆದುಕೊಳ್ಳುತ್ತಾರೆ ಇದರ ಜೊತೆಗೆ ದೇಹದಲ್ಲಿ ಮಾಂಸಖಂಡಗಳ ಬಲ ಕಡಿಮೆಯಾಗುತ್ತೆ ಎಂದು ತಿಳಿಸಿದೆ.

ದೇಹದಲ್ಲಿ ಅತಿಯಾದ ಆಯಾಸ
ಕಡಿಮೆ ಆಹಾರವನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಶಕ್ತಿ ಕಡಿಮೆ ಆಗುತ್ತದೆ. ಇದರಿಂದ ಕ್ಯಾಲೋರಿಗಳನ್ನು ಹೆಚ್ಚು ಕರಗಿಸಲು ನಮ್ಮ ದೇಹಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಕಡಿಮೆ ಕಾರ್ಬೋಹೈಡ್ರೇಟ್

(Carbohydrates) ಅಂಶಗಳನ್ನು ಹೊಂದಿರುವ ಆಹಾರಗಳನ್ನು ಡಯಟ್ ಮಾಡಲು ಹೊರಟಿರುವವರು ಸೇವಿಸಬಾರದು. ಇದರಿಂದ ದೇಹದ ಆಯಾಸ ಮತ್ತು ಸುಸ್ತು ಜಾಸ್ತಿಯಾಗುವುದಲ್ಲದೆ. ಸಂಪೂರ್ಣವಾಗಿ

ಕಾರ್ಬೋಹೈಡ್ರೇಟ್ ಅಂಶಗಳನ್ನು ಬಿಟ್ಟುಬಿಡುವುದು ಸಹ ಒಳ್ಳೆಯದಲ್ಲ. ಆರೋಗ್ಯದ ಮೇಲೆ ಇದರಿಂದ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಒಳ್ಳೆಯ ಕಾರ್ಬೋಹೈಡ್ರೇಟ್ ಅಂಶಗಳನ್ನು ಒಳಗೊಂಡಿರುವ

ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿರುವ ಎಲ್ಲಾ ಅಂಗಾಂಗಗಳು ಸರಿಯಾಗಿ ತಮ್ಮ ಕಾರ್ಯ ನಿರ್ವಹಣೆ ಮಾಡುತ್ತವೆ. ಏಕೆಂದರೆ ನಮ್ಮ ದೇಹಕ್ಕೆ ಬೇಕಾದ ಶಕ್ತಿಯ ಪ್ರಮಾಣ ಕಾರ್ಬೊಹೈಡ್ರೇಟ್

ಅಂಶಗಳಿಂದ ದೊರಕುತ್ತದೆ.

ಯಾವಾಗಲೂ ಸುಸ್ತು ದಣಿವು
ನಮ್ಮ ದೇಹದ ಮೇಲೆ ಇದು ದೀರ್ಘಕಾಲದವರೆಗೆ ಎದುರಾಗುವ ಆರೋಗ್ಯ ಸಮಸ್ಯೆ. ವೈದ್ಯರು ಹೇಳುವ ಹಾಗೆ ಡಯಟ್ ಪದ್ಧತಿಯಿಂದ ಕೇವಲ ದೈಹಿಕ ಆಯಾಸ ಮಾತ್ರ ಎದುರಾಗುವುದಲ್ಲದೆ

ಇದ್ದಕ್ಕಿದ್ದಂತೆ ತಲೆನೋವು, ಮಲಬದ್ಧತೆ ಸಮಸ್ಯೆಗಳು ಕಂಡುಬರುತ್ತವೆ. ಹಾಗಾಗಿ ಆರೋಗ್ಯ ತಜ್ಞರ ಸಲಹೆ ಏನೆಂದರೆ ಪ್ರತಿದಿನ ಡಯಟ್ (Diet) ಪದ್ಧತಿಯನ್ನು ಅನುಸರಿಸುವ ಬದಲು ದಿನ ಬಿಟ್ಟು

ದಿನ ಉಪವಾಸ ಮಾಡಿದರೆ ಅತ್ಯುತ್ತಮವಾದ ದೈಹಿಕ ಆರೋಗ್ಯ ನಮ್ಮದಾಗುತ್ತದೆ.

ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆ
ಡಯಟ್ ಮಾಡುವುದರಿಂದ ದೇಹದಲ್ಲಿ ಅಗತ್ಯವಾಗಿ ಬೇಕಾಗಿರುವ ಖನಿಜಾಂಶಗಳು ಮತ್ತು ವಿಟಮಿನ್ (Vitamin) ಅಂಶಗಳ ಸಹಿತ ಪೌಷ್ಟಿಕ ಸತ್ವಗಳ ಕೊರತೆ ಎದ್ದು ಕಾಣುತ್ತದೆ.

ಡಯಟ್ ಪದ್ಧತಿಯನ್ನು ಅನುಸರಿಸುವುದರಿಂದ ಕಬ್ಬಿಣದ ಅಂಶ, ನಾರಿನ ಅಂಶ, ಒಮೆಗಾ (Omega) 3 ಫ್ಯಾಟಿ ಆಸಿಡ್ ಅಂಶ, ಮತ್ತು ಇನ್ನಿತರ ಒಳ್ಳೆಯ ಪೌಷ್ಟಿಕಾಂಶಗಳುನಮ್ಮ ದೇಹಕ್ಕೆ

ಸಿಗದಂತಾಗುತ್ತದೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ ಕಡಿಮೆ ಆಹಾರ ಸೇವನೆ ಮಾಡುವುದರಿಂದ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ.

ಯಾವುದೇ ಬಿಪಿಎಲ್ ಕಾರ್ಡ್ ಅನ್ನು ರಾಜ್ಯದಲ್ಲಿ ರದ್ದು ಮಾಡುವುದಿಲ್ಲ : ಸಚಿವ ಕೆ. ಹೆಚ್ ಮುನಿಯಪ್ಪ

ತಲೆ ಕೂದಲು ವಿಪರೀತ ಉದುರುವುದು
ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತಲೆ ಕೂದಲು ಉದುರಲು ಪ್ರಾರಂಭವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಅಂದರೆ ಪೌಷ್ಟಿಕಾಂಶಗಳ ಕೊರತೆಯ ಕಾರಣ ನಮ್ಮ ತಲೆಕೂದಲಿನ ಬೇರುಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ನೆತ್ತಿಯ ಭಾಗದಲ್ಲಿ ಹೊಸ ಕೂದಲುಗಳು ಬೆಳವಣಿಗೆ ಆಗದಂತೆ ತೊಂದರೆ

ಎದುರಾಗುತ್ತದೆ. ಹಾಗಾಗಿ ನಮ್ಮ ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆ ಉಂಟಾದರೆ ಅದರ ನೇರ ಪರಿಣಾಮ ನಮ್ಮ ಚರ್ಮದ ಮೇಲೆ ಮತ್ತು ನಮ್ಮ ತಲೆ ಕೂದಲಿನ ಬೆಳವಣಿಗೆ ಮೇಲೆ ಉಂಟಾಗುತ್ತದೆ.

ಹಾಗಾಗಿ ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡ ಆಹಾರ ಪದ್ಧತಿಗಳನ್ನು ತಿನ್ನುವುದನ್ನು ಅನುಸರಿಸಬೇಕು.

ಆಹಾರದ ಅಸ್ವಸ್ಥತೆ ಕೂಡ ಎದುರಾಗಬಹುದು
ನಾವು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಬರದಲ್ಲಿ ಅನುಸರಿಸುವ ಡಯಟ್ ಪದ್ಧತಿ ದೀರ್ಘಕಾಲದವರೆಗೆ ಆಹಾರ ಸೇವನೆ ಮಾಡದಂತೆ ಮಾಡುತ್ತದೆ. ಡಯಟ್ ಪಾಲಿಸದೆ ಇರುವವರಿಗೆ

ಹೋಲಿಸಿದರೆ ಶೇಕಡ 20% ಕಡಿಮೆ ಆಹಾರ ಸೇವನೆ ಮಾಡಲು ಮುಂದಾಗುವ ಸಾಧ್ಯತೆ ಡಯಟ್ (Diet) ಮಾಡುವವವರಿಗೆ ಇರುತ್ತದೆ. ಇದನ್ನು ಆರೋಗ್ಯ ಅಸ್ವಸ್ಥತೆ ಎಂದು ವೈದ್ಯರು ಕರೆಯುತ್ತಾರೆ.

ಇದರಿಂದ ದೇಹದಲ್ಲಿ ಮತ್ತಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಭವ್ಯಶ್ರೀ ಆರ್.ಜೆ

Exit mobile version