ಅಮೇರಿಕಾ : ಇತಿಹಾಸದಲ್ಲೇ ಅತ್ಯಂತ ಕಿರಿಯ ಮೇಯರ್ ಆದ 18 ವರ್ಷದ ಯುವಕ!

America : ಅಮೇರಿಕಾದ ಪ್ರಜಾತಾಂತ್ರಿಕ ಇತಿಹಾಸದಲ್ಲೇ ಅತ್ಯಂತ ಕಡಿಮೆ ವಯಸ್ಸಿನ ಮೇಯರ್‌ (youngest mayor in history) ಎಂಬ 18 ವರ್ಷದ ಯುವಕನೋರ್ವ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಅಮೇರಿಕಾದಲ್ಲಿ ಮತದಾನ ಮಾಡಲು ಮತ್ತು ಚುನಾವಣೆಗೆ ಸ್ಪರ್ಧಿಸಲು 18 ವರ್ಷ ಕನಿಷ್ಠ ವಯಸ್ಸಿದ್ದು, ಜೈಲೆನ್ ಸ್ಮಿತ್ (Jaylen Smith) ಎಂಬ ನಿಗ್ರೋ ಯುವಕ ಮೇಯರ್‌ ಆಗಿ ಆಯ್ಕೆಯಾಗಿದ್ದಾನೆ.

ಅಮೇರಿಕಾದ ಅರ್ಕಾನ್ಸಾಸ್ (Arkansas) ರಾಜ್ಯದ ಜೈಲೆನ್ ಸ್ಮಿತ್ ಎಂಬ 18 ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿ ತನ್ನ ಪಟ್ಟಣದಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ತನ್ನ ಎದುರಾಳಿಯನ್ನು ಸೋಲಿಸಿದ ನಂತರ ಅಮೇರಿಕಾದ ಇತಿಹಾಸದಲ್ಲಿ ಈಗ ಅತ್ಯಂತ ಕಿರಿಯ ಮೇಯರ್ ಆಗಿದ್ದಾರೆ.

ಜೈಲೆನ್ ಸ್ಮಿತ್ ಅರ್ಕಾನ್ಸಾಸ್ ರಾಜ್ಯದ ಪಟ್ಟಣವಾದ ಅರ್ಲೆಯ (Earle) ಮೇಯರ್ ಆಗಿ ಮಂಗಳವಾರ ಆಯ್ಕೆಯಾಗಿದ್ದಾನೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಅವರು ತಮ್ಮ ಎದುರಾಳಿ, ನಗರದ ಬೀದಿ ಮತ್ತು ನೈರ್ಮಲ್ಯ ಸೂಪರಿಂಟೆಂಡೆಂಟ್ ನೇಮಿ ಮ್ಯಾಥ್ಯೂಸ್ ಅವರನ್ನು 235 ಮತಗಳಿಂದ ಸೋಲಿಸಿದರು ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/bjp-vs-congress-election-resut/

ಜೈಲೆನ್ ಸ್ಮಿತ್ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ತಮ್ಮ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿ, “ಇದು ಅರ್ಲೆ, ಅರ್ಕಾನ್ಸಾಸ್ನ ಉತ್ತಮ ಅಧ್ಯಾಯವನ್ನು ನಿರ್ಮಿಸುವ ಸಮಯ.

ಅರ್ಕಾನ್ಸಾಸ್ನ ಅರ್ಲೆಯಲ್ಲಿ ನಾನು ಶ್ರೇಷ್ಠನಾಗಲು (youngest mayor in history) ಸಾಧ್ಯವಿರುವಾಗ ನಾನು ಬೇರೆಡೆ ಏಕೆ ಶ್ರೇಷ್ಠನಾಗಬೇಕು?” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಇನ್ನು ಚುನಾವಣೆಯ ಪ್ರಚಾರದ ಸಮಯದಲ್ಲಿ ಜೈಲೆನ್ ಸ್ಮಿತ್, ಸಾರ್ವಜನಿಕ ಸುರಕ್ಷತೆಯನ್ನು ಸುಧಾರಿಸಲು,

ಕೈಬಿಟ್ಟ ಮನೆಗಳು ಮತ್ತು ಕಟ್ಟಡಗಳನ್ನು ಮರುಸ್ಥಾಪಿಸಲು ಅಥವಾ ತೆಗೆದುಹಾಕಲು ಮತ್ತು ಹೊಸ ತುರ್ತು ಸಿದ್ಧತೆ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು.

ಇದನ್ನೂ ನೋಡಿ : https://fb.watch/hhtCcXj__Q/ ಗಡಿ ಯುದ್ಧ. ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯಲ್ಲಿ ಮತ್ತೆ ಬೆಂಕಿ. ಇದರ ಬಗ್ಗೆ ಜನರ ಅಭಿಪ್ರಾಯ ತಿಳಿದುಕೊಳ್ಳೋಣ ಬನ್ನಿ

ಜೈಲೆನ್ ಸ್ಮಿತ್ ಈ ವರ್ಷದ ಆರಂಭದಲ್ಲಿ ಪ್ರೌಢಶಾಲೆಯಿಂದ ತೇರ್ಗಡೆಯಾಗಿದ್ದರು. ಅರ್ಲೆ ಪಟ್ಟಣವು ಪೂರ್ವ ಅರ್ಕಾನ್ಸಾಸ್ನಲ್ಲಿದ್ದು, ಮಿಸ್ಸಿಸ್ಸಿಪ್ಪಿ ನದಿಯ ಪಶ್ಚಿಮಕ್ಕೆ ಸುಮಾರು 30 ಮೈಲುಗಳ ದೂರದಲ್ಲಿದೆ.

2020 ರ ಜನಗಣತಿಯ ಪ್ರಕಾರ ಅರ್ಲೆ ಪಟ್ಟಣವು 1,831 ಜನಸಂಖ್ಯೆಯನ್ನು ಹೊಂದಿದೆ.

Exit mobile version