Shimoga: ನಮ್ಮ ಕರ್ನಾಟಕದ ಜೀವನಾಡಿ ಎಂದೇ ಕರೆಯಲ್ಪಡುವ ಭದ್ರಾ (Bhadra Dam is full) ಜಲಾಶಯದ ನೀರಿನ ಮಟ್ಟ 163 ಅಡಿಗೆ ಏರಿಕೆಯಾಗಿದ್ದು, ಇದರ ಹಿನ್ನೆಲೆಯಲ್ಲಿ ದಾವಣಗೆರೆ
ಜಿಲ್ಲೆಯ ರೈತರು ಕಾಲುವೆಗಳಿಗೆ ನೀರು ಬೀಡುವ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ (S.S.Mallikarjun) ಅವರು ಆದಷ್ಟು ಬೇಗ ಸಭೆ ನಡೆಸಿ ನೀರು ಬಿಡುವ
ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು (Bhadra Dam is full) ಎಂದು ಹೇಳಿದ್ದಾರೆ.

ಈ ಬಾರಿ ಮಳೆ ಇಲ್ಲದೆ ಜಲಾನಯನ ಪ್ರದೇಶದಲ್ಲಿ ಜುಲೈ 5ನೇ ತಾರೀಕಾದರೂ ಡ್ಯಾಂಗೆ ಒಳ ಹರಿವು ಇಲ್ಲದೆ ಅಚ್ಚುಕಟ್ಟು ಪ್ರದೇಶದಲ್ಲಿ ಆತಂಕ ಶುರುವಾಗಿತ್ತು. ಆದರೆ ಜುಲೈ (July) ಮೊದಲ
ವಾರದಲ್ಲಿ ಸುರಿದ ಭರ್ಜರಿ ಮಳೆಯಿಂದ ಜು.5 ರಿಂದ ಒಳ ಹರಿವು ಶುರುವಾಯಿತು. ಡ್ಯಾಂ (Dam) ನೀರಿನಮಟ್ಟ ಬುಧವಾರಕ್ಕೆ136 ಅಡಿಗೆ ಇಳಿದಿದ್ದು,
ಇದನ್ನು ಓದಿ: ನಂದಿನಿ ಹಾಲು ಖರೀದಿ ದರ ಗ್ರಾಹಕರಿಗೆ 3 ರೂ ಏರಿಕೆ ; ಆದರೆ ಹೈನುಗಾರರಿಗೆ 50 ಪೈಸೆ ಮಾತ್ರ ಲಾಭ!
ಈಗ 163ಕ್ಕೆ ಏರಿಕೆಯಾಗಿದೆ. ಜತೆಗೆ ಈಗ 6729 ಕ್ಯೂಸೆಕ್ (Cusec) ಒಳಹರಿವು ಇದೆ. ಇನ್ನೂ ಮಳೆಗಾಲ ಇರುವುದರಿಂದ ಡ್ಯಾಂ ಕೂಡ ಮುಂದಿನ ದಿನಗಳಲ್ಲಿ ತುಂಬಲಿದೆ ಎಂದು ಜಿಲ್ಲೆಯ ರೈತ
ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗ ಅಚ್ಚುಕಟ್ಟಿಗೆ ನೀರು ಹರಿಸಲು ಒತ್ತಾಯಿಸುತ್ತಿದ್ದಾರೆ.
ರೈತರು ಮುಂಗಾರು ಭತ್ತದ ಬೆಳೆ ಬೆಳೆಯಲು ಅಚ್ಚುಕಟ್ಟು ಪ್ರದೇಶದಲ್ಲಿ ಸಿದ್ಧವಾಗಿದ್ದು, ಬೇಗ ನೀರು ಹರಿಸಿದರೆ ಹೊರ ಹರಿವಿನಷ್ಟು ಒಳ ಹರಿವು ಇರುತ್ತದೆ, ಹಾಗಾಗಿ ತೊಂದರೆ ಆಗುವುದಿಲ್ಲ. ತಡವಾಗಿ
ನೀರು ಬಿಟ್ಟರೆ ಡ್ಯಾಂನಲ್ಲಿರುವ ನೀರನ್ನು ಬಿಡಬೇಕಾಗುತ್ತದೆ.
ಡ್ಯಾಮ್ ನಿಂದ ಅಚ್ಚುಕಟ್ಟಿನ ಕೆಲ ಭಾಗದಲ್ಲಿ ನೀರು ಹರಿಸಿದ ನಂತರ ಸಸಿಮಾಡಿ ಕೆಲಸ ಆರಂಭಿಸುತ್ತಾರೆ. ಕಡೆಗೆ ಭತ್ತ ಕೊಯ್ಲು ಮುಗಿಯುವವರೆಗೂ ನೀರು ಹರಿಸಬೇಕಾಗುತ್ತದೆ. ಆಗ ಹೆಚ್ಚು ನೀರು
ಪೋಲಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಒಳಹರಿವು ಇರುವಾಗಲೇ ನೀರು ಹರಿಸಬೇಕು, ಜತೆಗೆ ಮಳೆಗಾಲ ಇರುವುದರಿಂದ ಅಚ್ಚುಕಟ್ಟಲ್ಲೂ ಮಳೆಯಾದರೆ ಹೆಚ್ಚಿನ ನೀರು ಬೇಕಾಗುವುದಿಲ್ಲ. ಬೇಗ
ನೀರನ್ನು ಹರಿಸಿದರೆ ನೀರು ಉಳಿತಾಯ ಆಗುತ್ತದೆ ಎಂದು ರೈತರು ಮತ್ತು ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ.

ಕಳೆದ ಎರಡು ವರ್ಷ ಅಂದರೆ ಜುಲೈ ತಿಂಗಳಿನ ಆಷಾಢದಲ್ಲಿಯೇ ಭದ್ರಾ ಜಲಾಶಯವು ಭರ್ತಿಯಾಗಿತ್ತು. ಆದರೆ ಈ ಸಲ ಆಗಸ್ಟ್ (August) ಮುಗಿಯುತ್ತಿದ್ದರು ತುಂಬಲು ಇನ್ನೂ 23 ಅಡಿ ಬಾಕಿಯಿದೆ.
ಆದರೆ ಮಳೆಗಾಲ ಇನ್ನೂ ಇದ್ದು ಡ್ಯಾಂ ತುಂಬಲಿದೆ. ಈಗ 163 ಅಡಿ ದಾಟಿದ್ದು, ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ರೈತರು ನೀರು ಹರಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ಅಕ್ಟೋಬರ್ ಮತ್ತು ಸೆಪ್ಟಂಬರ್
ತಿಂಗಳಲ್ಲಿ ಡ್ಯಾಂ ತುಂಬಿದ ಉದಾಹರಣೆಗಳಿದೆ ಎಂದು ರೈತರು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.
ಭವ್ಯಶ್ರೀ ಆರ್.ಜೆ