ಧಾರ್ಮಿಕ ಹಬ್ಬಗಳನ್ನು ಗಲಭೆಗಳ ಮೂಲ ಎಂದು ಏಕೆ ಬಿಂಬಿಸಬೇಕು? : ಸುಪ್ರೀಂಕೋರ್ಟ್

Delhi : ನಾವು ಯಾವಾಗಲೂ ಧಾರ್ಮಿಕ ಹಬ್ಬಗಳನ್ನು ಗಲಭೆಗಳ ಮೂಲ ಎಂದು ಏಕೆ ಬಿಂಬಿಸುತ್ತೇವೆ? ಎಂದು ಸುಪ್ರೀಂಕೋರ್ಟ್‌ ಸಿಜೆಐ ಚಂದ್ರಚೂಡ್ (CJI Chandrachud asked SupremeCourt) ಪ್ರಶ್ನಿಸಿದ್ದಾರೆ.

ಎಲ್ಲಾ ಧಾರ್ಮಿಕ ಮೆರವಣಿಗೆಗಳನ್ನು ನಿಯಂತ್ರಿಸಲು ಮತ್ತು ಅದಕ್ಕಾಗಿ ಮಾರ್ಗಸೂಚಿಗಳನ್ನು ನೀಡಲು ನಿರ್ದೇಶನಗಳನ್ನು ಕೋರಿ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಸಂಸ್ಥೆ ಸಲ್ಲಿಸಿದ ಮನವಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿ,

ನಾವು ಯಾವಾಗಲೂ ಧಾರ್ಮಿಕ ಹಬ್ಬಗಳನ್ನು ಗಲಭೆಗಳ ಮೂಲ ಎಂದು ಏಕೆ ಬಿಂಬಿಸುತ್ತೇವೆ ಎಂದು ಅರ್ಜಿದಾರರನ್ನು ಪ್ರಶ್ನಿಸಿತು.

https://vijayatimes.com/chandrababu-2024-last-election/

ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದೆ. ನ್ಯಾಯಾಂಗವಾಗಿ ನಾವು ನಿರ್ವಹಿಸಬಹುದಾದ ಮಾನದಂಡಗಳ ಮೂಲಕ ಈ ಸಮಸ್ಯೆಯೊಂದಿಗೆ ನಾವು ವ್ಯವಹರಿಸಲು ಸಾಧ್ಯವಿಲ್ಲ.

ಈ ಕುರಿತು ನೀವು ರಾಜ್ಯ ಸರ್ಕಾರಕ್ಕೆ(CJI Chandrachud asked SupremeCourt) ಮನವಿ ಮಾಡಬೇಕು. ನಾವು ಯಾವಾಗಲೂ ಧಾರ್ಮಿಕ ಹಬ್ಬಗಳು ಗಲಭೆಗಳ ಮೂಲ ಎಂದು ಏಕೆ ಬಿಂಬಿಸಲು ಬಯಸುತ್ತೇವೆ?

ಇದರ ಬದಲು ನಮ್ಮ ದೇಶದಲ್ಲಿ ಆಗುವ ಒಳ್ಳೆಯದನ್ನು ನೋಡೋಣ, ಜೊತೆಗೆ ನ್ಯಾಯಾಲಯವು ಈ ವಿಚಾರದಲ್ಲಿ ಕಣ್ಣು ಮುಚ್ಚುವಂತಿಲ್ಲ ಎಂದು ಹಿರಿಯ ವಕೀಲರ ವಾದವಾಗಿತ್ತು.

ಈ ವಾದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದ್ದು,

ಪೊಲೀಸ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಈ ಕುರಿತು ಉಸ್ತುವಾರಿ ವಹಿಸುತ್ತಾರೆ. ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ವಿಷಯಗಳಲ್ಲಿ ನಾವು ಸುಪ್ರೀಂ ಕೋರ್ಟ್‌ಗೆ ಪಿಚ್‌ಫೋರ್ಕ್ ಮಾಡಲು ಪ್ರಯತ್ನಿಸಬಾರದು.

ಒಂದು ವೇಳೆ ತಪ್ಪಾಗಿ ಮೆರವಣಿಗೆಗೆ ಅನುಮತಿ ನೀಡಿದರೆ, ಜನರು ಆ ಅನುಮತಿಯನ್ನು ನ್ಯಾಯಾಲಯದ ಮುಂದೆ ಪ್ರಶ್ನಿಸಬಹುದು.

ಇನ್ನು ಭಾರತ (India) ದೇಶವು ವೈವಿಧ್ಯಮಯವಾಗಿದೆ. ಒಂದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಗಳು ಸಹ ವಿಭಿನ್ನವಾಗಿವೆ, ಅದಕ್ಕಾಗಿಯೇ ರಾಜ್ಯಗಳಿಗೆ ಅಧಿಕಾರವನ್ನು ವಹಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಇನ್ನೊಂದೆಡೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿಯು ಸಿಂಗ್, ಕೇಂದ್ರ ಮತ್ತು ರಾಜ್ಯಗಳು ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂದು ವಾದಿಸಿದರು. ಆದರೆ ಈ ವಾದವನ್ನು ನ್ಯಾಯಪೀಠ ತಿರಸ್ಕರಿಸಿತು.

Exit mobile version