ಚಿಕನ್ ಪ್ರಿಯರಿಗೆ ಸಿಹಿಸುದ್ದಿ ಶೇಕಡಾ 30 ರಿಂದ 40ರಷ್ಟು ಇಳಿಕೆಯಾದ ಕೋಳಿ ಮಾಂಸದ ದರ

Mumbai: ಕೋಳಿ ಪ್ರಿಯರಿಗೊಂದು ಗುಡ್ ನ್ಯೂಸ್ (decrease in chicken price) ಹೌದು, ಕೋಳಿ ಮಾಂಸದ ಬೆಲೆ ಬರೋಬ್ಬರಿ ಶೇಕಡಾ 30 ರಿಂದ 40ರಷ್ಟು ಕುಸಿತ ಕಂಡಿದ್ದು,

ಇದರಿಂದ ಚಿಕನ್ (Chicken) ಭೋಜನ ಪ್ರಿಯರು ಖುಷಿಯಾಗಿದ್ದಾರೆ. ಈಗ ಕೆ.ಜಿಗೆ ಸರಾಸರಿ 80 ರೂ.ಗೆ ಕೋಳಿ ಫಾರ್ಮ್‌ನಲ್ಲಿ (Farm) ದರ ಇಳಿಕೆಯಾಗಿದ್ದು, ಜೂನ್‌ನಲ್ಲಿ ಇದೇ ದರ

ಕೆಜಿಗೆ 120 ರೂ.ಗೆ ಏರಿತ್ತು. ತರಕಾರಿಗಳು ಮತ್ತು ದವಸ ಧಾನ್ಯಗಳ ಬೆಲೆಗಳು ಏರಿಕೆಯಾಗಿರುವ ಬೆನ್ನಲ್ಲೇ ಕೋಳಿ ಮಾಂಸದ ದರ ಕಡಿಮೆಯಾಗಿದ್ದು, ಮಾಂಸ ಪ್ರಿಯರು ಒಂದಿಷ್ಟು ನಿಟ್ಟುಸಿರು ಬಿಟ್ಟಿದ್ದಾರೆ.

ಈಗ ಕೋಳಿ ಫಾರ್ಮ್‌ನಲ್ಲಿ ದರ ಕೆ.ಜಿಗೆ ಸರಾಸರಿ 80 ರೂ.ಗೆ ಇಳಿಕೆಯಾಗಿದ್ದು, ಜೂನ್‌ನಲ್ಲಿ (June) ಇದೇ ದರ ಕೆಜಿಗೆ 120 ರೂ.ಗೆ ಹೆಚ್ಚಿತ್ತು. ಬೆಲೆ ಏರಿಕೆಯ ದಿನಗಳಲ್ಲಿ ಋಣಾತ್ಮಕ ಹಣದುಬ್ಬರವನ್ನು

ಕಂಡ ಏಕೈಕ ಪ್ರಮುಖ ಆಹಾರ ಸರಕು ಕೋಳಿಯಾಗಿದೆ. ಶ್ರಾವಣ ಮಾಸದ ಸಂದರ್ಭದಲ್ಲಿ ಕೋಳಿ ಮಾಂಸ ಸೇವನೆಯು ಪ್ರತಿ ವರ್ಷ ಕಡಿಮೆಯಾಗುತ್ತದೆ. ಹೀಗಾಗಿ, ಅಲ್ಪ ಮಟ್ಟದಲ್ಲಿ ದರ ಇಳಿಕೆ

ಕಂಡಿರುವುದು ಸಹಜ. ಆದರೆ ಈ ವರ್ಷ ದರ ಇಳಿಕೆಯ (decrease in chicken price) ಪರಿಣಾಮವು ಹೆಚ್ಚು ತೀವ್ರವಾಗಿದೆ.

ಇದನ್ನು ಓದಿ: ವಿದ್ಯುತ್ ನಿಗಮಗಳಿಗೆ ಶಾಕ್ ನೀಡಿದ ಸರ್ಕಾರ ; ಗೃಹಜ್ಯೋತಿಯ ಅರ್ಧ ಮೊತ್ತ ಮಾತ್ರ ಬಿಡುಗಡೆ..!

ಜುಲೈನಲ್ಲಿ (July) ಕೋಳಿ ಮಾಂಸದ ಬೆಲೆಯು ಶೇ. 50 ರಷ್ಟು ಕುಸಿದಿದ್ದು, ಜೂನ್‌ನಲ್ಲಿ ಕೆ.ಜಿ.ಗೆ ಗರಿಷ್ಠ 120 ರೂ.ಗೆ ತಲುಪಿದ್ದ ಕೋಳಿ ದರ ಜುಲೈನಲ್ಲಿ 55-60ಕ್ಕೆ ಇಳಿಕೆ ಕಂಡಿತ್ತು. ಹಾಗಾಗಿ

ಕೋಳಿ ಸಾಕಣೆಯನ್ನು ಉತ್ಪಾದಕರು ಕಡಿಮೆ ಮಾಡಿದ್ದರು. ಅಲ್ಲದೆ ಬೆಲೆ ಸ್ವಲ್ಪ ಏರಿಕೆಗೊಂಡಿತ್ತು. ಪ್ರಸ್ತುತ ಬೆಲೆ ಸರಾಸರಿ ಕೆ.ಜಿಗೆ 80 ರೂ.ನಷ್ಟಿದೆ ಎಂದು ಅಖಿಲ ಭಾರತ ಕೋಳಿ ಸಾಕಣೆದಾರರ

ಸಂಘದ ಪ್ರಧಾನ ಕಾರ್ಯದರ್ಶಿ ಗುಬ್ರೇಟ್ ಆಲಂ (Gubrate Alam) ಹೇಳಿದ್ದಾರೆ.

ಇನ್ನು ಈ ಸಲದ ಶ್ರಾವಣದಲ್ಲೂ ಕೋಳಿ ಮಾಂಸ ದರ ಹೆಚ್ಚೇನು ಬದಲಾವಣೆ ಆಗಿರಲಿಲ್ಲ. ಆದರೆ ಕೊನೆಗೂ ದರ ಇಳಿದಿರುವುದರಿಂದ ಕೋಳಿ ಮಾಂಸ ಹಾಗೂ ಮೊಟ್ಟೆ ಪ್ರಿಯರು ಸಹಜವಾಗಿಯೇ

ಹರ್ಷಗೊಂಡಿದ್ದಾರೆ. ಸ್ವಲ್ಪ ದಿನಗಳವರೆಗೆ ಇದೇ ದರ ಮುಂದುವರಿಯುವ ಸಾಧ್ಯತೆಯು ಇದ್ದು, ಮೊಟ್ಟೆ ದರವು ಕೂಡ ಕಳೆದ 15 ದಿನಗಳಿಂದೀಚೆಗೆ ಇಳಿಕೆ ಕಂಡಿದೆ.

ಒಂದು ಮೊಟ್ಟೆಗೆ ಚಿಲ್ಲರೆ ಮಾರಾಟದಲ್ಲಿ 6.50 ರೂಪಾಯಿ ಇದ್ದ ದರ ಈಗ 5.50 ರೂ.ಗೆ ಇಳಿಕೆಯಾಗಿದೆ. ನಾಟಿ ಕೋಳಿ ಹಾಗೂ ಫಾರಂ ಕೋಳಿ ಮೊಟ್ಟೆಗಳನ್ನು ಮನೆ ಬಾಗಿಲಿಗೇ ತಂದು ಮಾರಾಟ

ಮಾಡಲಾಗುತ್ತಿದ್ದು, ಮೊಟ್ಟೆ ವ್ಯಾಪಾರಿಗಳು ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದಲೂ ಕೋಳಿ ಮೊಟ್ಟೆಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ದರಗಳು ಮತ್ತಷ್ಟು ಕುಗ್ಗಿವೆ ಎನ್ನುತ್ತಾರೆ .

ಭವ್ಯಶ್ರೀ ಆರ್.ಜೆ

Exit mobile version