8ನೇ ತರಗತಿಯಿಂದ ಕನ್ನಡ ಪಾಠ ಬೇಡ : ಪ್ರಾಂಶುಪಾಲರ ಬಳಿ ಕೆಲ ಪೋಷಕರ ಆಗ್ರಹ!

Bengaluru (ಜು.17) : ವಿಧಾನಸೌಧದಿಂದ (demanded no Kannada lessons) ಸ್ವಲ್ಪ ದೂರದಲ್ಲಿರುವ ಪ್ರತಿಷ್ಠಿತ ಖಾಸಗಿ ಆಂಗ್ಲ ಭಾಷೆಯ ಬಾಲಕಿಯರ ಶಾಲೆಯಲ್ಲಿ 8ನೇ ತರಗತಿಯ

ಮಕ್ಕಳಿಗೆ ಕನ್ನಡ ಕಲಿಸಬೇಡಿ ಎಂದು ಮಕ್ಕಳ ಪೋಷಕರು ಪ್ರಾಂಶುಪಾಲರಿಗೆ (Principal) ಕರೆ ನೀಡಿದ್ದಾರೆ ಎಂಬ ಆತಂಕಕಾರಿ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media)

ಹರಿದಾಡುತ್ತಿದೆ. ಈ ಬಗ್ಗೆ ಅನೇಕ ಕನ್ನಡ ಪರ ಹೋರಾಟಗಾರರು ಕಳವಳ (demanded no Kannada lessons) ವ್ಯಕ್ತಪಡಿಸಿದ್ದಾರೆ.

ಪೋಷಕರ ಮನವಿ ಮೇರೆಗೆ ಶಾಲೆ ಶಿಕ್ಷಣ ಇಲಾಖೆಗೆ (Department of Education) ಈ ವಿಷಯ ಮುಟ್ಟಿಸುವ ಚಿಂತನೆ ನಡೆದಿದೆ. ಶಾಲೆಯ ಪ್ರಾಂಶುಪಾಲರು ಒಂದಷ್ಟು ಲೆಕ್ಕಾಚಾರ ಹಾಕಿ ಸುಮಾರು

50 ಪಾಲಕರು ಈ ರೀತಿ ಮನವಿ ಮಾಡಿರುವುದನ್ನು ಕಂಡು ಎಲ್ಲರೂ ಬರೆದ ನಂತರ ಪತ್ರಕ್ಕೆ ಸಹಿ ಹಾಕಿ ಶಿಕ್ಷಣ ಇಲಾಖೆಯ ಗಮನಕ್ಕೆ ತರುವ ಲೆಕ್ಕಾಚಾರವನ್ನು ಮಾಡಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲ, ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ, ಇಲಾಖೆಯ ಮುಂದಿನ ಪ್ರಕ್ರಿಯೆಯು ಇಲಾಖೆಯಲ್ಲಿ ಕೆಲಸ ಮಾಡುವ ಅಂದರೆ ಆ ಶಾಲೆಯಲ್ಲಿ ಓದುತ್ತಿರುವ ಮಗುವಿನ ಪೋಷಕರ ಜವಾಬ್ದಾರಿಯಾಗಿದೆ

ಎಂದು ಪೋಷಕರ ನಡುವೆ ಚರ್ಚೆಗಳಾಗಿರುವುದು ಕಂಡುಬಂದಿದೆ.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆ;ಬಿಪಿಎಲ್‌ ಕಾರ್ಡ್‌ದಾರರಿಗೆ 5 ಕೆಜಿ ಅಕ್ಕಿ ಬದಲು ಹಣ ನೀಡಲು ಸರ್ಕಾರ ತೀರ್ಮಾನ : ಎಷ್ಟು ಹಣ ಇಲ್ಲಿದೆ ಮಾಹಿತಿ

ಇನ್ನು ಈ ಬಗ್ಗೆ ಪ್ರಾಂಶುಪಾಲರು ಪ್ರಾಥಮಿಕವಾಗಿ ಪೋಷಕರ ಅಗತ್ಯಗಳನ್ನು ಪೂರೈಸುವುದು ಮತ್ತು ಪೋಷಕರ ಕಾಳಜಿಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಇದು ಸಾಧ್ಯವೇ ಎಂದು

ಲೆಕ್ಕಾಚಾರ ಮಾಡಲು ಪ್ರಯತ್ನಿಸುತ್ತಿದ್ದೇವೆ. ತಾವೆಲ್ಲರೂ ತಮ್ಮ ಬೇಡಿಕೆಯನ್ನು ಅಗತ್ಯಬಿದ್ದರೆ ಪತ್ರದ ಮೂಲಕ ಸಹಿ ಮಾಡಿ ನೀಡಬೇಕಾಗುತ್ತದೆ. ನಂತರ ಶಿಕ್ಷಣ ಇಲಾಖೆಯ ಗಮನಕ್ಕೆ ಅದನ್ನು

ತರಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಪೋಷಕರು-ಶಾಲೆ ವಿರುದ್ಧ ಆಕ್ರೋಶ:

ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳಿಂದ ಪೋಷಕರು ಹಾಗೂ ಶಾಲೆಯವರ ಕನ್ನಡ(Kannada) ಭಾಷೆಯ ವಿರುದ್ಧದ ಈ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಶಾಲೆಯ ಹೆಸರು ಸಹಿತ

ಈ ವಿಷಯವನ್ನು ಟ್ವೀಟರ್‌ನಲ್ಲಿ (Twitter) ವ್ಯಕ್ತಿಯೊಬ್ಬರು ಟ್ವೀಟ್‌(Tweet) ಮಾಡಿದ್ದು, ಶಾಲೆ ಹಾಗೂ ಪೋಷಕರ ವಿರುದ್ಧ ಇದಕ್ಕೆ ಬಹುತೇಕ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲದೆ

ಇಂತಹ ಶಾಲೆ ಹಾಗೂ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿರುವುದು ಕಂಡುಬಂದಿದೆ.

ರಶ್ಮಿತಾ ಅನೀಶ್

Exit mobile version