ಇತಿಹಾಸ ಪ್ರಸಿದ್ಧ ವೀರ ಮದಕರಿ ನಾಯಕರ ಸಮಾಧಿಯ ಸ್ಥಿತಿ ಹೇಗಿದೆ ಗೊತ್ತಾ? ಇಲ್ಲಿದೆ ಮಾಹಿತಿ

Veera

Chitradurga : 1721-1748 ರವರೆಗೆ ಆಳ್ವಿಕೆ ನಡೆಸಿದ ಚಿತ್ರದುರ್ಗ ಸಂಸ್ಥಾನದ ಹಿರೇ ಮದಕರಿ ನಾಯಕ , ಏಳು ಸುತ್ತಿನ ಕೋಟೆಗೆ ಅಧಿಪತಿಯಾಗಿ ಆಳಿದ ವೀರ ಪಾಳೆಗಾರ(Facts about veera madakari nayaka).

ಕೆಳದಿ ಬಸಪ್ಪ ನಾಯಕರ ಸೂಚನೆಯಂತೆ 1748 ರಲ್ಲಿ ಹರಪನಹಳ್ಳಿ ಪಾಳೆಗಾರ ಸೋಮಶೇಖರ ನಾಯಕ,

ಚಿತ್ರದುರ್ಗ ಸಂಸ್ಥಾನಕ್ಕೆ ಸೇರಿದ ಮಾಯಕೊಂಡ ಕೋಟೆಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮದಕರಿ ನಾಯಕ ಹಾಗೂ ಸೋಮಶೇಖರ ನಾಯಕನಿಗೂ ಘನಘೋರ ಯುದ್ಧ ನಡೆದು.

ಮದಕರಿ ನಾಯಕ ವೀರಮರಣ ಹೊಂದುತ್ತಾರೆ(Facts about veera madakari nayaka).

ನಂತರದಲ್ಲಿ ಮದಕರಿ ನಾಯಕನ ಪುತ್ರ ಕಸ್ತೂರಿ ರಂಗಪ್ಪನಾಯಕ ಹಾಗೂ ಅವನ ಸೈನಿಕರು ಹರಪನಹಳ್ಳಿ ಪಾಳೆಗಾರನನ್ನು ಹಿಮ್ಮೆಟ್ಟಿಸುತ್ತಾರೆ. ತದನಂತರ ಮಾಯಕೊಂಡದಲ್ಲಿಯೇ ಮದಕರಿ ನಾಯಕನ ಸಮಾದಿ ಮಾಡಲಾಯಿತು.

https://vijayatimes.com/thinnest-waist-girl-su-naing/

ಕಸ್ತೂರಿ ರಂಗಪ್ಪ ನಾಯಕ ತನ್ನ ತಂದೆಯ ಸಮಾಧಿಗೆ ಸುಮಾರು 17 ಎಕರೆ ಭೂಮಿ ಮೀಸಲಿರಿಸಿದ್ದ ಎಂಬುದು ಗ್ರಾಮದ ಹಿರಿಯರ ವಾದ, ಆದರೆ ಈ ಬಗ್ಗೆ ದಾಖಲೆಗಳಲ್ಲಿ ಯಾವುದೇ ಮಾಹಿತಿ ಇಲ್ಲ.

ಗ್ರಾಮದ ರುದ್ರಭೂಮಿ ಬಳಿಯ ಮದಕರಿ ನಾಯಕನ ಸಮಾದಿ ಹಲವು ವರ್ಷಗಳ ಕಾಲ ಅನಾಥವಾಗಿತ್ತು.


2004 ರಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಕೆ.ಶಿವರಾಂ, ಇತ್ತ ಗಮನ ಹರಿಸಿ ಸಮಾಧಿಯ ಸುತ್ತ ತಡೆಗೋಡೆ ನಿರ್ಮಿಸಿ, ಸಮಾಧಿಯನ್ನು ಅಭಿವೃದ್ಧಿಪಡಿಸಿದ್ದರು.

ಆದರೆ 2012 ಅಕ್ಟೋಬರ್ 29 ರಂದು ಮಧ್ಯರಾತ್ರಿ ನಿಧಿಯ ಆಸೆಗಾಗಿ ದುಷ್ಕರ್ಮಿಗಳು ವಾಮಾಚಾರದ ನೆಪದಲ್ಲಿ ಸಮಾಧಿಯನ್ನು ಭಗ್ನಗೊಳಿಸಿದ್ದರು. ಆಗ ಸಮಾದಿ ಅಭಿವೃದ್ಧಿಪಡಿಸುವುದಾಗಿ ಜನಪ್ರತಿನಿಧಿಗಳು,

ಅಧಿಕಾರಿಗಳು ವೀರಾವೇಶದ ಮಾತುಗಳನ್ನಾಡಿದ್ದರು, ಆದರೆ ಘಟನೆ ನಡೆದು ಎರಡು ವರ್ಷದ ನಂತರ ಸಣ್ಣ ದುರಸ್ತಿ ಕಾರ್ಯ ನಡೆದಿದೆ ಅಷ್ಟೇ ಬಿಟ್ಟರೆ, ಇನ್ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.

veera madhkari


ಇನ್ನು, ವರ್ಷಕ್ಕೊಮ್ಮೆ ವಾಲ್ಮೀಕಿ ಜಯಂತಿ ಬಂದಾಗ ಮಾತ್ರ ಸ್ಥಳಿಯರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆ ಮೇಲೆ ಯಾರೂ ತಿರುಗಿ ನೋಡುವುದಿಲ್ಲ. ಕಾರಣ ಇದೊಂದು ಪ್ರವಾಸಿ ತಾಣವಾಗದೇ ಇರುವುದು.

ಶಾಸಕ ಕೆ.ಶಿವಮೂರ್ತಿನಾಯ್ಕ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸಮಾಧಿಯ ಅಭಿವೃದ್ಧಿಗೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದು ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ.

https://youtu.be/iLNe180wspM

ಚಿತ್ರದುರ್ಗ, ದಾವಣಗೆರೆ ಎರಡೂ ಜಿಲ್ಲೆಗಳ ಜಿಲ್ಲಾಡಳಿತವಾಗಲಿ, ಪ್ರಾಚ್ಯ ವಸ್ತು ಸಂಗ್ರಹಾಲಯ, ಪ್ರವಾಸೋದ್ಯಮ ಇಲಾಖೆಯೇ ಆಗಲಿ ಈ ಸಮಾಧಿ ತಾಣದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವುದು ದುರಂತ.

ಬೇರೆ ಸಮುದಾಯದ ಇತಿಹಾಸ ಪುರುಷರ ಸಮಾಧಿ ಅಭಿವೃದ್ಧಿಗೆ ಕೋಟಿಗಟ್ಟಲೇ ಅನುದಾನ ನೀಡುವ ಸರಕಾರ, ಮಾಯಕೊಂಡದ ವೀರ ಮದಕರಿ ನಾಯಕನ ಸಮಾದಿಯನ್ನು ಮರೆತಿರುವುದು ಮಾತ್ರ ವಿಪರ್ಯಾಸವೇ ಸರಿ.
Exit mobile version