ಅತ್ಯಾಚಾರ ಭೀತಿಯಿಂದ ಪಾಕಿಸ್ತಾನದಲ್ಲಿರುವ ಸಮಾಧಿಗಳಿಗೆ ಬೀಗ: ಮಾಧ್ಯಮಗಳ ವರದಿಗಳ ಅಸಲಿಯತ್ತೇನು?

Hyderabad: ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆಯಿಂದ ಸಮಾಧಿಗಳಿಗೆ ಬೀಗ ಜಡಿದಿರುವ ಚಿತ್ರವೊಂದು ಸಖತ್ ಆಗಿ ವೈರಲ್ (Viral) ಆಗಿದೆ. ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಪಾಕಿಸ್ತಾನದಲ್ಲಿ fake news about graves) (Pakistan) ಶವವನ್ನು ಕೂಡ ಅತ್ಯಾಚಾರ ಮಾಡಬಹುದು ಎಂಬ ಭೀತಿಯಿಂದಾಗಿ, ಪೋಷಕರು ತಮ್ಮ ಹೆಣ್ಣುಮಕ್ಕಳ ಸಮಾಧಿಗಳಿಗೆ ಬೀಗ ಜಡಿಯುತ್ತಿದ್ದಾರೆ ಎಂದು ಸುದ್ದಿಯನ್ನು ಬಿತರಿಸುತ್ತಿವೆ.

ಶವವನ್ನು ಸಂಭೋಗಿಸುವಂತಹ ತೀರಾ ಹತಾಶವಾದ ಲೈಂಗಿಕತೆ ಪಾಕಿಸ್ತಾನದಲ್ಲಿ ಸೃಷ್ಟಿಯಾಗಿದೆ ಎಂದು ಇಸ್ಲಾಂ ಧರ್ಮದ ‘ವಿಮರ್ಷಕ, ಹಾಗೂ ಲೇಖಕರಾದ ಹಾರಿಸ್ ಸುಲ್ತಾನರವರು

ತಮ್ಮ ಟ್ವೀಟ್ನಲ್ಲಿ ಬರೆದಿದ್ದರು.ಈ ಟ್ವೀಟ್(Tweet) ಅನ್ನು ANI ವರದಿ ಮಾಡಿತ್ತು ಈ ವರದಿಯನ್ನು ಆಧರಿಸಿ Times of India, Ndtv, times now ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಅಷ್ಟೇ ಅಲ್ಲದೆ TV9 Kannada, News18 ಸೇರಿದಂತೆ ಅನೇಕ ಪ್ರಾದೇಶಿಕ ಮಾಧ್ಯಮಗಳು ತಮ್ಮ ವರದಿಗಳಲ್ಲಿ ಇದೇ ಚಿತ್ರವನ್ನು ಬಳಸಿಕೊಂಡಿವೆ.

ಈ ವೈರಲ್ ಫೋಟೊ ಅಸಲಿಯತ್ತು
ವೈರಲ್ ಆಗಿರುವ ಈ ಸಮಾಧಿಯ ಚಿತ್ರ ಪಾಕಿಸ್ತಾನದ್ದು ಅಲ್ಲ ಎಂದು ತಿಳಿದು ಬಂದಿದೆ. ಅಸಲಿಗೆ ಈ ಸಮಾಧಿಯು ಭಾರತದ್ದಾಗಿದ್ದು, ಹೈದೆರಾಬಾದ್‌ನಲ್ಲಿರುವ ಮುಸ್ಲಿಂ ಕುಟುಂಬದ ದಫನಭೂಮಿಯ ಸಮಾಧಿಯಾಗಿದೆ.

Altnews.ಇನ್ ಈ ಸುದ್ದಿಯ ಸತ್ಯಾಸತ್ಯತೆಯನ್ನು ವರದಿ ಮಾಡಿದೆ. ಹೈದರಾಬಾದ್‌ನ ಮಾದನ್ನಪೇಟೆಯ ದರಾಬ್ ಜಂಗ್ (Darab Jung) ಎಂಬ ಕಾಲೋನಿಯಲ್ಲಿ

ಇ ಸಲಾರ್ ಮುಲ್ಕ್ ಎಂಬ ಮಸೀದಿ ಎದುರಿನಲ್ಲಿ ಈ ದಫನ ಭೂಮಿಯು ಇದೆ. ವರದಿಗಳ ಪ್ರಕಾರ ಅಲ್ಲಿರುವ ಸಮಾಧಿಯ ಚಿತ್ರವು

ಹಾಗೂ ವೈರಲ್ ಫೋಟೋ ಒಂದೇ ಆಗಿದ್ದು ಹೈದೆರಾಬಾದ್ ಸಮಾಧಿಯನ್ನು ಪಾಕಿಸ್ಥಾನದ ಸಮಾಧಿ ಎಂದು ಬಿಂಬಿಸಲಾಗಿದೆ.


ಅಸಲಿಯಾಗಿ ಈ ಸಮಾಧಿಯು ಸರಿ ಸುಮಾರು 1.5 ರಿಂದ 2 ವರ್ಷಗಳಷ್ಟು ಹಳೆಯದಾಗಿದೆ. ಈ ಸಮಾಧಿಯು ದಫನಭೂಮಿಯ ಪ್ರವೇಶದ್ವಾರದ ಬಳಿಯೇ ಇದೆ,

ಹಾಗಾಗಿ ಬಹಳಷ್ಟು ಜನರು ಇಲ್ಲಿಗೆ ಬಂದು ಅನುಮತಿಯಿಲ್ಲದೇ ಹಳೆಯ ಸಮಾಧಿಗಳಲ್ಲೇ ಬೇರೆ ಶವಗಳನ್ನು (fake news about graves) ಹೂಳುತ್ತಾರೆ.

ಹಾಗಾಗಿ ಇತರರು ಬಂದು ಯಾವುದೇ ದೇಹವನ್ನು ಮತ್ತಷ್ಟು ಹೂಳುವುದನ್ನು ತಡೆಯುವ ಸಲುವಾಗಿ ಈ ಸಮಾಧಿಯ ಕುಟುಂಬಸ್ಥರು ಸಮಾಧಿಯ ಮೇಲೆ ಗ್ರಿಲ್ ಅಳವಡಿಸಿ

ಬೀಗ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಈ ಬೀಗವನ್ನು ಸಂಬಂಧಪಟ್ಟ ಸಮಿತಿಗಳ ಅನುಮತಿಯಿಲ್ಲದೆ ಹಾಕಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version