ನಿಮಗೆ ಹೃದಯದ ಆರೋಗ್ಯ ಬೇಕಾ? ಹಾಗಾದ್ರೆ ಈ 5 ಆಹಾರ ತಿನ್ನಲೇ ಬೇಡಿ !

ಪಿಜ್ಜಾ (Pizza), ಫ್ರೈಡ್ ಚಿಕನ್ (Fried Chicken), ಉಪ್ಪು ಪ್ರಿಯರಾ? ಹಾಗಾದ್ರೆ ಇವತ್ತೇ ಈ ಆಹಾರಗಳಿಗೆ ಬ್ರೇಕ್ (deadly food for heart) ಹಾಕಿ. ಯಾಕೆ ಅಂತ ನೀವು ಪ್ರಶ್ನಿಸಿಬಹುದು.

ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ವಿಶ್ವದಲ್ಲಿ ಪ್ರತಿ 37 ಸೆಕೆಂಡ್ (Secend) ಗೆ ಜನರು ಹೃದಯಾಘಾತಕ್ಕೆ ಒಳಗಾಗ್ತಿದ್ದಾರೆ. ಹೃದಯಾಘಾತ, ಹೃದಯ ಸ್ತಂಭನ ಚಿಕ್ಕ ಮಕ್ಕಳನ್ನೂ ಕಾಡ್ತಾ ಇದೆ.

ಇದಕ್ಕೆ ಮುಖ್ಯ ಕಾರಣ ನಾವು ತಿನ್ನೋ ಆಹಾರ ಅನ್ನೋ ಅಂಶ ಅಧ್ಯಯನಗಳಿಂದ ಬಹಿರಂಗಗೊಂಡಿದೆ. ಹಾಗಾದ್ರೆ ಯಾವ ಆಹಾರಗಳು ಹೃದಯಕ್ಕೆ ಅಪಾಯ ತಂದೊಡ್ಡುತ್ತವೆ ಅಂತ ನೋಡೋದಾದ್ರೆ

ಈ ಐದು ಪ್ರಮುಖ ಆಹಾರಗಳು ಹೃದಯದ ಶತ್ರುಗಳು ಅಂತನೇ ಕರೆಯಬಹುದು. ಹಾಗಾದ್ರೆ ಬನ್ನಿ ಹೃದಯಾಘಾತಕ್ಕೆ ಕಾರಣವಾಗುವ ಆ ಟಾಪ್ (Top) 5 ಡೆಡ್ಲಿ ಫುಡ್ ಗಳ (Deadly Food) ಪಟ್ಟಿ ನೋಡೋಣ.

ಹೃದಯಕ್ಕೆ ಕಂಟಕವಾಗಲಿದೆ ಈ 5 ಭಯಾನಕ ಆಹಾರಗಳು:
ಪಿಜ್ಜಾ (Pizza) ಹೃದಯದ ಶತ್ರು !
ಹೃದಯಕ್ಕೆ ಅತಿ ಕೆಟ್ಟದಾದ ಆಹಾರಗಳಲ್ಲಿ ಪಿಜ್ಜಾ (Pizza) ಪ್ರಮುಖವಾದುದು. ಈಗಿನ ಯಂಗ್‌ಸ್ಟರ್ಸ್‌ಗೆ (Youngsters) ಪಿಜ್ಞಾ ತಿನ್ನೋದು ಫ್ಯಾಷನ್ (Fashion) ಆಗಿದೆ. ಸಾಂಪ್ರದಾಯಿಕ ಆಹಾರದ

ಬದಲು ಪಿಜ್ಞಾನೇ ತಿಂತಿರ್ತಾರೆ. ಇದನ್ನ ಹೃದಯದ ಶತ್ರು ಅಂತಲೇ ಕರೆಯಬಹುದು. ಅದ್ರಲ್ಲೂ ಪಾರ್ಸೆಲ್ (Parcel) ತೆಗೆದುಕೊಂಡು ತಿನ್ನುವಂತಹ ಪಿಜ್ಜಾದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ (Calorie)

ಇರುತ್ತದೆ . ಪಿಜ್ಜಾ ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಬೊಜ್ಜು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತೆ. ಈ ಪಿಜ್ಜಾದಲ್ಲಿ ಕ್ಯಾಲೊರಿ, ಸೋಡಿಯಂ (Sodium) ಮತ್ತು ಕೊಬ್ಬಿನಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತೆ.

ಹಾಗಾಗಿ ಹೃದ್ರೋಗ ಖಾಯಿಲೆ (deadly food for heart) ಉಂಟಾಗಬಹುದು.

ಇದನ್ನು ಓದಿ: ಮೆಂತ್ಯ ಬೀಜದಲ್ಲಿ ಅಡಿಗಿದೆ ಆರೋಗ್ಯದ ಗುಟ್ಟು..!

ಉಪ್ಪು ಕೊಡುತ್ತೆ ಹೃದಯಕ್ಕೆ ಪೆಟ್ಟು:
ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ ಅನ್ನೋ ಗಾದೆ ಎಲ್ಲರಿಗೂ ತಿಳಿದಿರುವ ವಿಷಯ, ಆದ್ರೆ ಅತಿಯಾಗಿ ಉಪ್ಪು ತಿನ್ನುವುದರಿಂದ ಹೃದಯಾಘಾತ ಆಗುತ್ತೆ ಅಂತ ಯಾರಿಗೂ ತಿಳಿದಿರುವುದಿಲ್ಲ.

ಹೌದು ಉಪ್ಪಲ್ಲಿ ಸೋಡಿಯಂ (Sodium) ಮತ್ತು ಕ್ಲೋರೈಡ್‌ (chloride)ಮಾಡಲಾಗಿದ್ದು, ಅಧಿಕ ಸೋಡಿಯಂ ಆಹಾರಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗವ ಎಲ್ಲ ಸಾಧ್ಯತೆಗಳಿವೆ. ಹಾಗಾಗಿ

ಅಡುಗೆಯಲ್ಲಿ ನಾವು ತಿನ್ನುವ ಆಹಾರದಲ್ಲಿ ಉಪ್ಪನ್ನು ಅತಿಯಾಗಿ ಬಳಸುವುದರಿಂದ ಅಧಿಕ ರಕ್ತದೊತ್ತಡವು ಹೃದಯ ಸಂಬಂಧಿ ಕಾಯಿಲೆಗಳಿಗೆ ಅಪಾಯಕಾರಿ ಅಂಶವಾಗಿದೆ. ಹಾಗಾಗಿ ಅತಿಯಾದ ಉಪ್ಪಿನ

ಸೇವನೆಯಿಂದ ಹೃದಯಾಘಾತ ಆಗುವ ಲಕ್ಷಣಗಳಿವೆ.

ಫ್ರೈಡ್ ಚಿಕನ್ (Fried Chicken) ಬೇಡವೇ ಬೇಡ:
ನಮ್ಮಲ್ಲಿ ಬಹಳಷ್ಟು ಜನರು ಬಕೆಟ್ ಫ್ರೈಡ್ ಚಿಕನ್ (Bucket Fried Chicken) ತಿನ್ನಲು ಮುಗಿಬೀಳ್ತಾರೆ. ಆದ್ರೆ ಈ ತರ ಫ್ರೈಡ್ ಚಿಕನ್ (Fried Chicken) ತಿನ್ನೋದ್ರಿಂದ ಹೃದಯಕ್ಕೆ ಬೇಗ ಹಾನಿ ಉಂಟಾಗಬಹುದು.

ಹೃದಯಕ್ಕೆ ಹಾನಿ ಉಂಟು ಮಾಡುವ ಆಹಾರಗಳಲ್ಲಿ ಇದು ಒಂದು ಅಂತ ಹೇಳಬಹುದು , ಹೌದು ಈ ಫ್ರೈಡ್ ಚಿಕನ್ ನಮ್ಮ ದೇಹಕ್ಕೆ ಅನಾರೋಗ್ಯಕರ, ಇನ್ನು ಈ ಚಿಕನ್‌ನ ಒಂದು ತುಂಡು 22% ಕೊಲೆಸ್ಟ್ರಾಲ್‌ನ

(Cholesterol) ಸ್ಯಾಚುರೇಟೆಡ್ (Saturated) ಕೊಬ್ಬನ್ನು ಹೊಂದಿರುತ್ತದೆ. ನೀವೇನಾದ್ರು ರೆಸ್ಟಾರೆಂಟ್‌ನಿಂದ (Restaurant) ರೆಗ್ಯುಲರ್ (Regular) ಆಗಿ ಫ್ರೈಡ್ ಚಿಕನ್ ಅನ್ನು ಆರ್ಡರ್

(Order) ಮಾಡಿ ತಿಂತ ಇದ್ರೆ ಈ ಟ್ರಾನ್ಸ್ (Trans) ಕೊಬ್ಬಿನ ಬಗ್ಗೆ ಹುಷಾರಾಗಿರಿ.

ಬೆಣ್ಣೆ ಇತಿ ಮಿತಿಯಲ್ಲಿ ತಿನ್ನಿ:
ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಬೆಣ್ಣೆ ಅಂದ್ರೆ ಬಾಯಿ ಬಾಯಿ ಬಿಡ್ತಾರೆ. ಆದ್ರೆ ಇದರಲ್ಲಿ ಕೊಬ್ಬಿನಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಎಷ್ಟೋ ಜನಕ್ಕೆ ತಿಳಿದೇ ಇಲ್ಲ.

ಈಗಾಗಲೇ ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ (Cholesterol) ಅನ್ನು ಇನ್ನಷ್ಟು ಹೆಚ್ಚಿಸಬಹುದು. ಹಾಗಾಗಿ ಬೆಣ್ಣೆ ಬಳಸುವವರು ಮಿತಿಯಾಗಿ ಬಳಸಿದ್ರೆ ಒಳ್ಳೆಯದು. ಯಾಕಂದ್ರೆ ಈ ಬೆಣ್ಣೆ ತಿನ್ನೋದ್ರಿಂದ

ನಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾದಂತೆಲ್ಲಾ ಹೃದಯಕ್ಕೂ ಹಾನಿ ಉಂಟಾಗುವ ಸಾಧ್ಯತೆ ಇದ್ದು ಹೃದಯಾಘಾತ ಆಗುವುದ್ರಲ್ಲಿ ಯಾವುದೇ ಅನುಮಾನ ಇರುವುದಿಲ್ಲ.

ಆಲ್ಕೋಹಾಲ್‌ಗೆ (Alcohol) ಬ್ರೇಕ್‌ ಹಾಕಿ:
ನಮ್ಮ ಹೃದಯದ ಮೇಲೆ ಇದ್ರ ಪರಿಣಾಮ ಕ್ಷಣಮಾತ್ರದಲ್ಲಿ ಆಗುವ ಚಾನ್ಸ್ (Chance) ಇರುತ್ತದೆ. ಇನ್ನು ಮಧ್ಯವ್ಯಸನಿಗಳಿಗಂತೂ ಬಹಳ ಡೇಂಜರ್ (Danger), ಆಲ್ಕೋಹಾಲ್ ಗೆ (Alcohol) ಮೊರೆ

ಹೋಗುವ ಜನರು ಬೇಗ ಹೃದಯಾಘಾತಕ್ಕೊಳಗಾಗುವ ಸಂಭವವಿರುತ್ತದೆ. ಮದ್ಯಪಾನ ಮಾಡಿದಾಗ ನಮ್ಮ ರಕ್ತದಲ್ಲಿನ ಕೊಬ್ಬಿನ ಪ್ರಮಾಣ ಹೆಚ್ಚಾಗುವುದಲ್ಲದೆ, ಅಧಿಕ ರಕ್ತದೊತ್ತಡ, ಹೃದಯಾಘಾತ,

ಪಾರ್ಶ್ವವಾಯು ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು, ಹಾಗಾಗಿ ಕುಡಿತ ಇದ್ರೆ ಅದರಿಂದ ದೂರ ಇರುವುದು ಒಳ್ಳೆಯದು.

Exit mobile version